ಮಂಗಳೂರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್

ಮಂಗಳೂರು, ಆ.13: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಆಗಮನವಾಗುತ್ತಿದ್ದಂತೆ ಅಭಿಮಾನಿಗಳು ಮುತ್ತಿಗೆ ಹಾಕಿದರು. ನೆಚ್ಚಿನ ನಟನ ಜೊತೆ ಒಂದು ಚಿತ್ರ ತೆಗೆಸಿಕೊಳ್ಳುವ ಆಸೆ ಎಲ್ಲರಿಗೂ ಇತ್ತು.

ಅದರೆ, ವಿಮಾನ ನಿಲ್ದಾಣದಲ್ಲಿ ರಜನಿ ಅವರು ಹೆಚ್ಚು ಹೊತ್ತು ಮಂಗಳೂರಿನಲ್ಲಿ ಕಳೆಯದೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ವಾಹನ ಏರಿ ಶಿವಮೊಗ್ಗ ಕಡೆ ಪ್ರಯಾಣ ಬೆಳೆಸಿದರು.

ಎಂದಿನಂತೆ ಸೂಪರ್ ಸ್ಟಾರ್ ರಜನಿ ಅವರು ಬಿಳಿ ಬಟ್ಟೆ ಧರಿಸಿ ಹಸನ್ಮುಖಿಯಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರ ಆಗಮನದ ಬಗ್ಗೆ ಮೊದಲೇ ತಿಳಿದಿದ್ದ ನಿಲ್ದಾಣದ ಸಿಬ್ಬಂದಿ ವಿಶೇಷ ಕೊಠಡಿಯನ್ನು ನೀಡಿದ್ದರು. ಕೆಲಕಾಲ ವಿಶ್ರಾಂತಿ ಪಡೆದ ನಂತರ 'ಲಿಂಗಾ' ಚಿತ್ರದ ಶೂಟಿಂಗ್ ಗಾಗಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಪ್ರಯಣಿಸಿದರು.[ರಜನಿ 'ಲಿಂಗಾ' ಬಗ್ಗೆ ಸುದ್ದಿ ಪ್ರಸಾರಕ್ಕೆ ತಡೆ]

ಕೆಲ ಅದೃಷ್ಟಶಾಲಿಗಳು ಮಾತ್ರ ರಜನಿ ಜೊತೆ ಭಾವಚಿತ್ರ ತೆಗೆಸಿಕೊಂಡು ಕೈ ಕುಲಿ ಆನಂದ ಪಟ್ಟರು. ಹಲವಾರು ಅಭಿಮಾನಿಗಳು ದೂರದಿಂದಲೆ ತಮ್ಮ ಆರಾಧ್ಯ ದೈವವನ್ನು ಕಂಡು ಸಂತಸ ಪಟ್ಟರು.

ಇದಾದ ನಂತರ ಬಾಲಿವುಡ್ ಬೆಡಗಿ ಲಿಂಗಾ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಕೂಡಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಹೊಸ ಚಿತ್ರದ ಶೂಟಿಂಗ್ ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುವ ಬಗ್ಗೆ ಸಂತಸ ವ್ಯಕ್ತಪಡಿಸಿ ಮಿಂಚಂತೆ ಮರೆಯಾದರು.

ಲಿಂಗಾ ಸಿನಿಮಾ ಯಾವಾಗ ರಿಲೀಸ್

ಲಿಂಗಾ ಸಿನಿಮಾ ಯಾವಾಗ ರಿಲೀಸ್

ಸುವರ್ಣ ಸುದ್ದಿ ವಾಹಿನಿ ವರದಿಗಾರರೊಂದಿಗೆ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್, ಲಿಂಗಾ ಸಿನಿಮಾ ರಿಲೀಸ್ ಬಗ್ಗೆ ಹೇಳಿದರು. ನನ್ನ ಹುಟ್ಟುಹಬ್ಬದ ದಿನ ಡಿಸೆಂಬರ್ 12 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದರು

ಕುಡ್ಲಗೆ ಬಂದಿದ್ದಕ್ಕೆ ಸಂತಸ: ರಜನಿ

ಕುಡ್ಲಗೆ ಬಂದಿದ್ದಕ್ಕೆ ಸಂತಸ: ರಜನಿ

ಸುಮಾರು ಎರಡು ದಶಕಗಳ ನಂತರ ಕರ್ನಾಟಕ ಕರಾವಳಿಗೆ ಕಾಲಿಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಶಿವಮೊಗ್ಗದಲ್ಲಿ ಸುಮಾರೂ 21 ದಿನ ಲಿಂಗ ಚಿತ್ರದ ಶೂಟಿಂಗ್ ನಡೆಯಲಿದೆ ಎಂದರು.

ಲಿಂಗಾ ಚಿತ್ರದ ಒಂದು ಭಾಗದ ಶೂಟಿಂಗ್ ಈಗಾಗಲೆ ಮಂಡ್ಯ,ಮದ್ದೂರು, ಮಳವಳ್ಳಿ, ಮೈಸೂರಿನಲ್ಲಿ ಸಂಪೂರ್ಣ ಗೊಂಡಿದೆ.

ರಾಜಕೀಯ ಪ್ರವೇಶದ ಬಗ್ಗೆ ರಜನಿ

ರಾಜಕೀಯ ಪ್ರವೇಶದ ಬಗ್ಗೆ ರಜನಿ

ರಾಜಕೀಯ ಪ್ರವೇಶದ ಬಗ್ಗೆ ರಜನಿ ಮಾತನಾಡುತ್ತಾ ಎಲ್ಲವೂ ದೈವೇಚ್ಛೆ. ಮುಖ್ಯಮಂತ್ರಿ ಮಾಡುವುದು ಬಿಡುವುದು ಜನರ ಇಚ್ಛೆ ಎಂದರು.

ನನ್ನ ಆರೋಗ್ಯ ಈಗ ಸ್ಥಿರವಾಗಿದೆ ಇಲ್ಲಿನ ಸಿಬ್ಬಂದಿಗೆ ಥ್ಯಾಂಕ್ಸ್ ಎಂದು ಕನ್ನಡದಲ್ಲಿ ರಜನಿ ಹೇಳಿದರು. ಶಿವಮೊಗ್ಗಕ್ಕೆ ತೆರಳುವುದಕ್ಕೂ ಮುನ್ನ ಸುಮಾರು ಒಂದು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ತಂಗಿದ್ದ ರಜನಿ ಕಾಂತ್ ಅಲ್ಲಿನ ಸಿಬ್ಬಂದಿ ಜತೆ ಆತ್ಮೀಯವಾಗಿ ಕಲೆತು, ಬೆರೆತರಂತೆ.

ಮೊದಲ ಬಾರಿಗೆ ಕುಡ್ಲದಲ್ಲಿ ಸೋನಾಕ್ಷಿ

ಮೊದಲ ಬಾರಿಗೆ ಕುಡ್ಲದಲ್ಲಿ ಸೋನಾಕ್ಷಿ

ಮೊದಲ ಬಾರಿಗೆ ಮಂಗಳೂರಿಗೆ ಬಂದಿಳಿದ ಸೋನಾಕ್ಷಿ ಸಿನ್ಹಾ ಹೆಚ್ಚು ಮಾತನಾಡದೆ ತಮ್ಮ ಕ್ಯಾಪ್ ಸರಿ ಪಡಿಸಿಕೊಳ್ಳುತ್ತಾ ಬೇಗ ಬೇಗ ತಮ್ಮ ಕಾರಿನತ್ತ ತೆರಳಿದರು. ಮಂಗಳೂರಿನ ಹೋಟೆಲ್ ನಲ್ಲಿ ಉಳಿದು ನಂತರ ಶೂಟಿಂಗ್ ಗೆ ತೆರಳುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+