ಪುತ್ತೂರು; ಹನಿಟ್ರ್ಯಾಪ್ ಜಾಲ ಬಯಲು, ಯುವತಿ ಬಂಧನ

ಮಂಗಳೂರು, ಜುಲೈ 04; ಯುವಕನನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಿ, 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಯುವತಿಯನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡದಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಚೀಚಗದ್ದೆ ಇಬ್ರಾಹಿಂ ಪುತ್ರ ಅಬ್ದುಲ್ ನಾಸೀರ್ ಹೈಟೆಕ್ ಹನಿಟ್ರ್ಯಾಪ್‌ಗೆ ಒಳಗಾದ ಯುವಕ. ಪುತ್ತೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಅಬ್ದುಲ್ ನಾಸೀರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಮೂಲದ ತನಿಶಾ ಎಂಬಾಕೆಯ ಪರಿಚಯವಾಗಿತ್ತು.

ಪರಿಚಯವಾದ ಕೆಲವೇ ದಿನಗಳಲ್ಲಿ ಇಬ್ಬರೂ ಕಾಮದಾಟಕ್ಕೆ ಕೈ ಹಾಕಿದ್ದಾರೆ. ಅರೆನಗ್ನ ಸ್ಥಿತಿಯಲ್ಲಿ ವಿಡಿಯೋ ಕಾಲ್ ಮಾಡಿದ್ದು, ಈ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡರ್ ಮೂಲಕ ತನಿಶಾ ದಾಖಲಿಸಿಕೊಂಡಿದ್ದು, ಆನಂತರ ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ.

Honey Trap Gang Busted In Puttur One Arrested

ದಿನ ಕಳೆಯುತ್ತಿದ್ದಂತೆಯೇ ಯುವತಿ ಮತ್ತು ಆಕೆಯ ಸಹಚರರ ಬೆದರಿಕೆ ಜಾಸ್ತಿಯಾಗಿದ್ದು, ಕೊನೆಗೆ ಯುವಕ ಅಬ್ದುಲ್ ನಾಸೀರ್ ಪುತ್ತೂರು ಗ್ರಾಮಾಂತರ ಠಾಣಾ ಮೆಟ್ಟಿಲೇರಿದ್ದಾನೆ. ಪುತ್ತೂರು ಪೊಲೀಸರು ತನಿಶಾಳನ್ನು ಬಂಧಿಸಿದ್ದು, ಆಕೆಯ ಆರು ಮಂದಿ ಸಹಚರರಿಗಾಗಿ ಹುಡುಕಾಟ ನಡೆಸಿದ್ದಾರೆ.

ನೆಟ್ಟಣಿಗೆ ಮುಡ್ನೂರು ಚೀಚಗದ್ದೆತ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯಿದ್ ಮೋನು ಮತ್ತು ನಾಸೀರ್ ಎಂಬುವವರಿಗೆ ಪೊಲೀಸರು ಶೋಧ ಕಾರ್ಯ ಮಾಡುತ್ತಿದ್ದಾರೆ.

ಏಪ್ರಿಲ್12ರಂದು ಹನಿಟ್ರ್ಯಾಪ್ ಘಟನೆ ನಡೆದಿದ್ದು, ಉನ್ನತ ಅಧಿಕಾರಿಗಳ ಸೂಚನೆಯಂತೆ ಈಗ ಸಂತ್ರಸ್ತ ಯುವಕ ನಾಸೀರ್, ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+