ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮಳೆಯ ಅಬ್ಬರ, ವಾಹನ ಸವಾರರು ಹೈರಾಣಾ

|
Google Oneindia Kannada News

ಮಂಗಳೂರು, ಜೂನ್ 06 : ಸೋಮವಾರ ಮಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು, ನಗರವಾಸಿಗಳನ್ನು ಹೈರಾಣಾಗಿಸಿದೆ.

ಮಂಗಳೂರು ನಗರದಲ್ಲಿ ಕೆಲವು ಗಂಟೆಗಳ ಕಾಲ ಜೋರಾಗಿ ಮಳೆ ಸುರಿದ ಪರಿಣಾಮ ಪ್ರಮುಖ ಹಾಗೂ ಒಳ ರಸ್ತೆಗಳೆಲ್ಲಾ ಜಲಾವೃತವಾಗಿ, ಹಲವು ಕಡೆಗಳಲ್ಲಿ ಗಂಟೆಗಟ್ಟಲೆ ಸಂಚಾರದಟ್ಟಣೆ ಸೃಷ್ಟಿಯಾಗಿತ್ತು.[ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಆಗಮನ]

Heavy rain in Mangaluru, main city roads flooded creats huge traffic

ಮಳೆಯ ಅಬ್ಬರಕ್ಕೆ ನಗರದ ಚರಂಡಿಗಳು ತುಂಬಿ ಹರಿದು ಹಲವು ವೃತ್ತಗಳಲ್ಲಿ ರಸ್ತೆಗಳು ಜಲಾವೃತಗೊಂಡವು. ಜ್ಯೋತಿ ವೃತ್ತದಲ್ಲಿ ರಸ್ತೆಯ ಮೇಲೆ ಹೆಚ್ಚಿನ ನೀರು ನಿಂತಿದ್ದರಿಂದ ವಾಹನ ಸವಾರರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಮಾತ್ರವಲ್ಲದೆ ಪಾದಚಾರಿಗಳು ವಾಹನಗಳಿಂದ ನೀರು ಸಿಂಚನವಾಗುವ ಆತಂಕವನ್ನು ಎದುರಿಸಬೇಕಾಯಿತು.

ಮಂಗಳೂರಿನ ಬಲ್ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಈಜುಕೊಳ. ಮಂಗಳೂರು ದಕ್ಷಿಣ ಶಾಸಕ ಮಾನ್ಯ ಶ್ರೀ ಜೆ ಅರ ಲೋಬೊರವರು ಈ ಈಜುಕೊಳವನ್ನು ಲೋಕಾರ್ಪಣೆ ಮಾಡಲಿದ್ದು, ಮೇಯರ್ ಕವಿತಾ ಸನಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.[ಕರ್ನಾಟಕಕ್ಕೆ ಈ ಬಾರಿ ಸಾಧಾರಣ ಮುಂಗಾರು ಮಳೆ]

Heavy rain in Mangaluru, main city roads flooded creats huge traffic

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಸ್ಥಳೀಯ ಕೊರ್ಪರೇಟರ್ ಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂಬ ಟ್ರೋಲ್ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿವೆ.

English summary
Heavy rain in Mangaluru, on Monday afternoon affected the movement of traffic following waterlogging in several areas, including Thokkottu Junction and Ambedkar Circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X