ಮೂರು ದಶಕಗಳಿಂದ ಸಾರ್ಥಕ ಸೇವೆ, ವಿದ್ಯಾರ್ಥಿಗಳಿಂದ ಶಿಕ್ಷಕಿಗೆ ಚಿನ್ನಾಭರಣ ಉಡುಗೊರೆ
ಮಂಗಳೂರು, ಜನವರಿ 19: ಮೂರು ದಶಕಗಳಿಂದ ಶಿಕ್ಷಕಿಯಾಗಿ ಸಾರ್ಥಕ ಸೇವೆ ಸಲ್ಲಿಕೆ. ಕಡೆಗೂ ಆ ಶಿಕ್ಷಕಿಗೆ ಸೇವೆಯಿಂದ ನಿವೃತ್ತಿಯಾಗುವ ದಿನ ಬಂದೇ ಬಿಟ್ಟಿತು. ಅದಕ್ಕಾಗಿ ವಿದಾಯ ಕೂಟವೂ ಏರ್ಪಟ್ಟಿತ್ತು. ಈ ವೇಳೆ ಹಳೆ ವಿದ್ಯಾರ್ಥಿಗಳಿಂದ ದೊರಕಿದ ಉಡುಗೊರೆಯನ್ನು ಕಂಡು ಶಿಕ್ಷಕಿಯೇ ಬೆರಗಾದ ಅಪೂರ್ವ ಘಟನೆಯೊಂದು ಬಂಟ್ವಾಳದ ಪಾಣೆಮಂಗಳೂರಿನ ಅಕ್ಕರಂಗಡಿಯ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಜಯಲಕ್ಷ್ಮೀ ಆರ್. ಭಟ್, ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2020ರಲ್ಲಿ ಅವರು ನಿವೃತ್ತಿಗೊಂಡಿದ್ದರೂ ಶಿಕ್ಷಕರ ಕೊರತೆಯಿಂದ ಅದೇ ಶಾಲೆಯಲ್ಲಿ ವೇತನ ಪಡೆಯದೆ ತಮ್ಮ ಸೇವೆಯನ್ನು ಮುಂದುವರಿಸಿದ್ದರು.

ಈ ಮೂಲಕ ಒಟ್ಟು 31 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದ ಜಯಲಕ್ಷ್ಮೀ ಆರ್. ಭಟ್ ಈ ಅವಧಿಯಲ್ಲಿ ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಮಾರ್ಗದರ್ಶನ ಮಾಡಿದ್ದರು.
ಇದೀಗ ಅವರು ನಿವೃತ್ತಿ ಪಡೆಯುವ ಸಮಯ ಬಂದೇ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿಗೆ ವಿದಾಯಕೂಟವೊಂದನ್ನು ಏರ್ಪಡಿಸಿದ್ದರು. ಜೊತೆಗೆ ಅವರಿಗೊಂದು ಮರೆಯಲಾಗದ ಉಡುಗೊರೆ ನೀಡಬೇಕೆಂದು ಉದ್ದೇಶಿಸಿದ್ದರು.

ಆದ್ದರಿಂದ ಹಳೆ ವಿದ್ಯಾರ್ಥಿಗಳು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಚರ್ಚಿಸಿ ಚಿನ್ನದ ಸರ ನೀಡಲು ನಿರ್ಧರಿಸಿದ್ದರು. ಅದಕ್ಕಾಗಿ ತಮ್ಮೊಳಗೆ ಹಣ ಸಂಗ್ರಹಿಸಿ ಸುಮಾರು 2.10 ಲಕ್ಷ ರೂ. ಮೌಲ್ಯದ 33 ಗ್ರಾಂನ ಬೆಂಡೋಲೆ ಸಹಿತ ಚಿನ್ನದ ನೆಕ್ಲೇಸ್ ಅನ್ನು ಖರೀದಿಸಿ ವಿದಾಯ ಕೂಟದಲ್ಲಿ ಶಿಕ್ಷಕಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ಉಡುಗೊರೆ ನೀಡುವ ವಿಚಾರವನ್ನು ಶಿಕ್ಷಕಿಗೆ ತಿಳಿಯದಂತೆ ಅತ್ಯಂತ ಗೌಪ್ಯವಾಗಿರಿಸಲಾಗಿದೆ. ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವದಂದು ಶಿಕ್ಷಕಿಗೆ ಸನ್ಮಾನಿಸಿ ಈ ಉಡುಗೊರೆಯನ್ನು ನೀಡಿದ್ದಾರೆ. ಈ ವೇಳೆ ಆಶ್ಚರ್ಯಕರವೆಂಬಂತೆ ವಿದ್ಯಾರ್ಥಿಗಳಿಂದ ಚಿನ್ನದೊಡವೆ ಉಡುಗೊರೆಯಾಗಿ ದೊರಕಿದ್ದನ್ನು ಕಂಡು ಶಿಕ್ಷಕಿ ಅವಕ್ಕಾಗಿದ್ದಾರೆ. ಒಟ್ಟಿನಲ್ಲಿ ಇಂತಹ ಅಪೂರ್ವ ಕಾರ್ಯಕ್ರಮಕ್ಕೆ ದಾರುಲ್ ಇಸ್ಲಾಂ ಶಾಲೆ ಸಾಕ್ಷಿಯಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications