ಮಳೆಗಾಲದಲ್ಲಿ ತಪ್ಪದೇ ಭೇಟಿ ನೀಡಬೇಕಾದ ಕರ್ನಾಟಕ ಸೇರಿ ಭಾರತದ ಈ 5 ಸುಂದರ ಪ್ರವಾಸಿ ತಾಣಗಳು

ಮಳೆಗಾಲ ಎಂದರೆ ಪ್ರಕೃತಿ ತನ್ನ ಅತ್ಯಂತ ಸುಂದರ ರೂಪವನ್ನು ಪ್ರದರ್ಶಿಸುವ ಸಮಯ. ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು, ಮಂಜಿನ ಹೊದಿಕೆಯಲ್ಲಿರುವ ಕಣಿವೆಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮತ್ತು ತಂಪಾದ ವಾತಾವರಣ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮಳೆಯ ಸೊಬಗನ್ನು ಆಸ್ವಾದಿಸಲು ಭಾರತದಲ್ಲಿ ಕೆಲವು ವಿಶೇಷವಾದ ಸ್ಥಳಗಳು ಹೆಸರುವಾಸಿಯಾಗಿವೆ.

1. ಕೂರ್ಗ್, ಕರ್ನಾಟಕ

ಪ್ರಕೃತಿಯ ಅಪರೂಪದ ಸೌಂದರ್ಯವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಕೂರ್ಗ್, ಮಳೆಗಾಲದಲ್ಲಿ ಪ್ರವಾಸಿಗರ ಮೊದಲ ಆಯ್ಕೆಯಾಗಿ ಹೊರಹೊಮ್ಮುತ್ತದೆ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಸುಂದರ ಗಿರಿಧಾಮವನ್ನು ಪ್ರೀತಿಯಿಂದ 'ಭಾರತದ ಸ್ಕಾಟ್ಲೆಂಡ್' ಎಂದು ಕರೆಯಲಾಗುತ್ತದೆ.

Coorg Tops the List

ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಇಲ್ಲಿನ ದಟ್ಟ ಅರಣ್ಯಗಳು, ಮೈದುಂಬಿ ಧುಮ್ಮಿಕ್ಕುವ ಜಲಪಾತಗಳು ಮತ್ತು ಮಂಜಿನ ಮುಸುಕು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಇದರೊಂದಿಗೆ ಇಲ್ಲಿನ ಕಾಫಿ ತೋಟಗಳ ವಿಶಿಷ್ಟ ಸುವಾಸನೆಯು ಪ್ರವಾಸದ ಅನುಭವವನ್ನು ಇಮ್ಮಡಿಗೊಳಿಸುತ್ತದೆ. ಜೂನ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯು ಈ ರಮಣೀಯ ವಾತಾವರಣವನ್ನು ಕಣ್ತುಂಬಿಕೊಳ್ಳಲು ಅತ್ಯಂತ ಸೂಕ್ತವಾದ ಸಮಯವಾಗಿದೆ ಎಂದು ಪ್ರವಾಸೋದ್ಯಮ ತಜ್ಞರು ಹೇಳುತ್ತಾರೆ.

ಆನಂದ್ ಮಹೀಂದ್ರಾ ಮನಗೆದ್ದ ನಮ್ಮ ಹೊನ್ನಾವರ! ಕೇರಳಕ್ಕೆ ಸಿಕ್ಕಷ್ಟು ಮಾನ್ಯತೆ ಕರ್ನಾಟಕ್ಕೆ ಇಲ್ವಾ?
ಆನಂದ್ ಮಹೀಂದ್ರಾ ಮನಗೆದ್ದ ನಮ್ಮ ಹೊನ್ನಾವರ! ಕೇರಳಕ್ಕೆ ಸಿಕ್ಕಷ್ಟು ಮಾನ್ಯತೆ ಕರ್ನಾಟಕ್ಕೆ ಇಲ್ವಾ?

2. ಮುನ್ನಾರ್, ಕೇರಳ

ಮುನ್ನಾರ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಅತ್ಯಂತ ಸುಂದರವಾದ ಗಿರಿಧಾಮವಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ಮಳೆಯಿಂದ ಇಲ್ಲಿನ ವಿಶಾಲ ಚಹಾ ತೋಟಗಳು ಹಸಿರಿನಿಂದ ಕಂಗೊಳಿಸುತ್ತವೆ. ಮಂಜಿನಿಂದ ಬೆಟ್ಟಗಳ ನಡುವೆ ತೇಲಾಡುವ ಮೋಡಗಳು ಮತ್ತು ತಂಪಾದ ವಾತಾವರಣ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತವೆ.

Coorg Tops the List

3. ವ್ಯಾಲಿ ಆಫ್ ಫ್ಲವರ್ಸ್, ಉತ್ತರಾಖಂಡ

ಉತ್ತರಾಖಂಡದ ಪ್ರಸಿದ್ಧ 'ವ್ಯಾಲಿ ಆಫ್ ಫ್ಲವರ್ಸ್' ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಣ್ಣ ಬಣ್ಣದ ಹೂಗಳಿಂದ ಅರಳಿರುತ್ತದೆ. ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಈ ಪ್ರದೇಶ ಟ್ರೆಕ್ಕಿಂಗ್ ಹಾಗೂ ಛಾಯಾಗ್ರಹಣ ಪ್ರಿಯರಿಗೆ ಸ್ವರ್ಗದಂತಿದೆ.

Waterfalls: ಜೋಗದಿಂದ ಚುಂಚಿವರೆಗೆ; ಈ ಬೇಸಿಗೆಯಲ್ಲಿ ನೀವು ಭೇಟಿ ನೀಡಲೇಬೇಕಾದ 10 ಜಲಪಾತಗಳಿವು
Waterfalls: ಜೋಗದಿಂದ ಚುಂಚಿವರೆಗೆ; ಈ ಬೇಸಿಗೆಯಲ್ಲಿ ನೀವು ಭೇಟಿ ನೀಡಲೇಬೇಕಾದ 10 ಜಲಪಾತಗಳಿವು

4. ಮೇಘಾಲಯ

ಮೇಘಾಲಯವನ್ನು ಮಳೆಗಾಲದ ಸ್ವರ್ಗ ಎಂದು ಕರೆಯಲಾಗುತ್ತದೆ. ಹಸಿರು ಬೆಟ್ಟಗಳು, ಮೋಡಗಳಿಂದ ಆವರಿಸಿದ ಕಣಿವೆಗಳು ಮತ್ತು ಭವ್ಯ ಜಲಪಾತಗಳು ಇಲ್ಲಿನ ಪ್ರಮುಖ ಆಕರ್ಷಣೆ. ಚೆರಾಪುಂಜಿ ಮತ್ತು ಮಾವ್ಸಿನ್ರಾಂ ಪ್ರದೇಶಗಳು ಭಾರೀ ಮಳೆಯ ಕಾರಣ ವಿಶ್ವದಾದ್ಯಂತ ಪ್ರಸಿದ್ಧವಾಗಿವೆ.

5. ಲೋಣಾವಾಲಾ, ಮಹಾರಾಷ್ಟ್ರ

ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಲೋಣಾವಾಲಾದಲ್ಲಿ ಮಳೆಗಾಲದ ಭವ್ಯ ದಿನಗಳು ಆರಂಭವಾಗಿವೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಕೊನೆಯವರೆಗೆ ಇಲ್ಲಿನ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಯಲ್ಲಿ ಸುಂದರ ಹವಾಮಾನ ಇರಲಿದ್ದು, ಪ್ರವಾಸಕ್ಕೆ ಇದು ಅತ್ಯುತ್ತಮ ಸಮಯವಾಗಿದೆ. ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಕಣಿವೆಗಳು ಸಂಪೂರ್ಣ ಹಸಿರಾಗಿ ಮಾರ್ಪಟ್ಟಿದ್ದು, ಬೆಟ್ಟಗಳ ತಿರುವುಗಳಲ್ಲಿ ಹೊಸ ಜಲಪಾತಗಳು ಸೃಷ್ಟಿಯಾಗಿವೆ. ವಾರಾಂತ್ಯದ ರಜೆಯನ್ನು ಕಳೆಯಲು ಮತ್ತು ಮಂಜಿನ ನಗರಿಯ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಈಗ ಲೋಣಾವಾಲಾ ಕಡೆಗೆ ಮುಖ ಮಾಡುತ್ತಿದ್ದಾರೆ.

ಮಳೆಗಾಲದ ಪ್ರವಾಸಕ್ಕೆ ಸೂಕ್ತ ತಾಣಗಳು

ಮಳೆಗಾಲವು ಕೇವಲ ಮಳೆಯ ಸೊಬಗಷ್ಟೇ ಅಲ್ಲ, ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಅನುಭವಿಸುವ ಸಮಯವೂ ಹೌದು. ಕೂರ್ಗ್‌ನ ಕಾಫಿ ತೋಟಗಳಿಂದ ಹಿಡಿದು ಮುನ್ನಾರ್‌ನ ಚಹಾ ತೋಟಗಳವರೆಗೆ, ಮೇಘಾಲಯದ ಜಲಪಾತಗಳಿಂದ ವ್ಯಾಲಿ ಆಫ್ ಫ್ಲವರ್ಸ್‌ನ ಬಣ್ಣ ಬಣ್ಣದ ಹೂಗಳವರೆಗೆ ಪ್ರತಿಯೊಂದು ತಾಣವೂ ವಿಭಿನ್ನ ಅನುಭವ ನೀಡುತ್ತದೆ. ಈ ಮಳೆಗಾಲದಲ್ಲಿ ಪ್ರಕೃತಿಯ ಸೊಬಗನ್ನು ಸವಿಯಲು ಈ ಐದು ತಾಣಗಳನ್ನು ನಿಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+