ಸುರತ್ಕಲ್: ಅನಿಲ ಸೋರಿಕೆ, ತಪ್ಪಿದ ಭಾರೀ ಅನಾಹುತ

ಸುರತ್ಕಲ್, ಮಾರ್ಚ್ 31 : ಸುರತ್ಕಲ್ ನ ಎಂಆರ್ ಪಿಎಲ್ ನಲ್ಲಿ ಅನಿಲ ಸಾಗಿಸುವ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾದ ಘಟನೆ ಗುರುವಾರ ರಾತ್ರಿ ನೆಡದಿದ್ದು, ಸ್ಥಳೀಯರನ್ನು ಆತಂಕಕ್ಕೆ ಬೀಳಿಸಿದೆ.

ಪ್ರಾಥಮಿಕ ಮಾಹಿತಿಯಂತೆ ಯಾರ್ಡ್ ನಲ್ಲಿ ಅನಿಲ ತುಂಬಿರುವ 15 ಟ್ಯಾಂಕರ್ ಗಳು ನಿಲುಗಡೆಯಾಗಿದ್ದು, ಈ ಪೈಕಿ ಟ್ಯಾಂಕ್‌ ವೊಂದರ ಅನಿಲ ಸೋರಿಕೆಯಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.[ಉಗ್ರವಾದ ಬಿತ್ತುತ್ತಿದ್ದವನಿಗೆ ಸುರತ್ಕಲ್ ನಂಟಿತ್ತೆ?]

Gas Leakage from Tanker at MRPL Yard in Surathkal

ಅನಿಲ ಸೋರಿಕೆಯಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬರಲು ವಿಳಂಬ ಮಾಡಿದರು. ಅಲ್ಲದೆ, ಸೋರಿಕೆಯಾಗುತ್ತಿರುವ ಟ್ಯಾಂಕರ್ ನಿಂದ ಅನಿಲ ವರ್ಗಾವಣೆಗೆ ಕ್ರಮ ಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಆರ್ ಪಿಎಲ್ ನ ಒಳಭಾಗದ ಯಾರ್ಡ್ ನಲ್ಲೇ ಅನಿಲ ಸೋರಿಕೆ ಯಾಗುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಸುರತ್ಕಲ್ ಪೊಲೀಸರು ಭೇಟಿ ನಿಡಿದ್ದು, ಯಾರ್ಡ್ ಸಮೀಪಕ್ಕೆ ಸಾರ್ವಜನಿಕರು ಮತ್ತು ವಾಹನಗಳನ್ನು ಹೋಗದಂತೆ ತಡೆಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+