ಕಾಸರಗೋಡು ಬಳಿ ಭೀಕರ ಅಪಘಾತ:ಅಜ್ಜಿನಡ್ಕದ ಐವರು ಸಾವು
ಕಾಸರಗೋಡು, ಜು.9: ಲಾರಿ-ಜೀಪು ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಾಸರಗೋಡಿನ ಉಪ್ಪಾಳ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಜೀಪು ಕಾಸರಗೋಡಿನಿಂದ ಮಂಗಳೂರು ಮಾರ್ಗವಾಗಿ ತೆರಳುತ್ತಿತ್ತು. ನಯಾ ಬಜಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬೆಳಗಿನ ಜಾವ 6 ಗಂಟೆಗೆ ಅಪಘಾತ ಸಂಭವಿಸಿದೆ. ಜೀಪು ಚಾಲಕ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಜೀಪಿನಲ್ಲಿ ಒಟ್ಟು 13 ಮಂದಿ ಇದ್ದರು, ಒಟ್ಟು ಐದು ಮಂದಿ ಮೃತಪಟ್ಟಿದ್ದು ಅದರಲ್ಲಿ ಮೂವರು ಮಂದಿ ಮಹಿಳೆಯರಾಗಿದ್ದಾರೆ.

ಬೀಫಾತಿಮ(65), ಅಸ್ಮಾ(30), ನಸೀಮಾ (38), ಮುಸ್ತಾಕ್(41) ಇಮ್ತಿಯಾಜ್(35) ಮೃತರು. ಜೀಪು ಸಂಪೂರ್ಣವಾಗಿ ಜಖಂಗೊಂಡಿದೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications