ಮೆಡಿಕಲ್ ಶಾಪಿನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಭೂಪ ಅಂದರ್
ಮಂಗಳೂರು, ಮೇ 10 : ಮೆಡಿಕಲ್ ಶಾಪ್ ನಲ್ಲಿ ಸರಿಯಾಗಿ ಔಷಧಿಗಳನ್ನು ನೀಡಯ್ಯ ಅಂದರೆ ಹೆಚ್ಚಿನ ದುರಾಸೆಯಿಂದ ಕಾಸರಗೋಡಿನ ಬಂದ್ಯೋಡಿನ ಔಷಧಿ ಅಂಗಡಿವೊಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹೆಸರಿಗೆ ಮೆಡಿಕಲ್ ಸ್ಟೋರ್ ಇಟ್ಟುಕೊಂಡು ಮದ್ಯ ಮಾರಾಟ ಮಾಡುತ್ತಿದ್ದ ಸೂರಂಬೈಲ್ ನ ಉದಯಕುಮಾರ್ (40) ಎಂಬಾತನನ್ನು ಕುಂಬಳೆ ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿ 49 ಪ್ಯಾಕೆಟ್ ಮದ್ಯವನ್ನು ವಶ ಪಡೆಸಿಕೊಂಡಿದ್ದಾರೆ.

ಬಂದ್ಯೋಡು ಪೇಟೆಯಲ್ಲಿರುವ ಬೆಸ್ಟ್ ಮೆಡಿಕಲ್ ಶಾಪ್ ನಲ್ಲಿ ಔಷಧಿ ಮಾರಾಟ ಮಾಡುವ ನೆಪದಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಅಬಕಾರಿ ದಳಕ್ಕೆ ಮಾಹಿತಿ ಲಭಿಸಿತ್ತು.
ಮದ್ಯ ಖರೀದಿ ನೆಪದಲ್ಲಿ ತೆರಳಿದ್ದ ಅಬಕಾರಿ ಸಿಬ್ಬಂದಿಯೋರ್ವರು ವಿಚಾರಿಸಿದಾಗ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ನೀಡಿದ ಮಾಹಿತಿಯಂತೆ ಅಬಕಾರಿ ಸಿಬ್ಬಂದಿಗಳು ತಪಾಸಣೆ ನಡೆಸಿದಾಗ 49 ಪ್ಯಾಕೆಟ್ ಮದ್ಯ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಅಕ್ರಮ ಮದ್ಯ ಮಾರಾಟ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದ ಹಲವು ತಂತ್ರಗಾರಿಕೆ ಮೂಲಕ ಮದ್ಯ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ.












Click it and Unblock the Notifications