ಸುಳ್ಯದ ಸಂಪಾಜೆ ಅರಣ್ಯದಲ್ಲಿ ಇಪ್ಪತ್ತು ವರ್ಷದ ಗಂಡಾನೆ ಸಾವು

ಮಂಗಳೂರು, ಜನವರಿ 9: ಸುಳ್ಯದ ಸಂಪಾಜೆ ಮೀಸಲು ಅರಣ್ಯದ ಬಂಟೋಡಿ ದೊಡ್ಡಕಜೆ ಎಂಬಲ್ಲಿ ಆನೆಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಕಲ್ಲಾನೆ ಜಾತಿಗೆ ಸೇರಿದ ಸುಮಾರು 20 ವರ್ಷ ಪ್ರಾಯದ ಗಂಡಾನೆಯು ಸಾವನ್ನಪ್ಪಿದ್ದು, ಎರಡು ದಿನಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಆನೆಗಳ ನಡುವೆ ಉಂಟಾದ ಕಾದಾಟದಿಂದ ಆನೆ ಸತ್ತಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸತ್ತ ಆನೆಯ ಹೊಟ್ಟೆ ಮತ್ತು ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯದಲ್ಲಿ ಬೀಟ್ ಗೆ ಹೋದ ಸಂದರ್ಭದಲ್ಲಿ ಆನೆ ಸತ್ತಿರುವುದು ಗಮನಕ್ಕೆ ಬಂದಿದೆ.[ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿ, ನೀರಿಗಾಗಿ ಪಂಪ್ ಕೀಳುವ ಕಾಡಾನೆಗಳು!]

Elephant found dead in Sampaje reserve forest in Mangaluru

ಎತ್ತರ ಕಡಿಮೆ ಇರುವ ಕಲ್ಲಾನೆ ಗುಂಪಿಗೆ ಸೇರಿದ ಆನೆ ಇದಾಗಿದ್ದು, ಸುಮಾರು ಐದು ಅಡಿ ಎತ್ತರದ ಗಂಡಾನೆಗೆ ಒಂದು ಅಡಿಗಿಂತಲೂ ಹೆಚ್ಚು ಉದ್ದದ ಕೋರೆಯೂ ಇದೆ. ದೊಡ್ಡಕಜೆ ಭಾಗ ಹೆಚ್ಚು ತೇವಾಂಶ ಇರುವ ಪ್ರದೇಶವಾಗಿದ್ದು ಇದರ ಸುತ್ತ ಮುತ್ತ ಕಾಡಾನೆಗಳ ಹಿಂಡು ಕೆಲವು ದಿನಗಳಿಂದ ಬೀಡು ಬಿಟ್ಟಿದ್ದು ಈ ಸಂದರ್ಭದಲ್ಲಿ ಆನೆಗಳ ಮಧ್ಯೆ ಕಾದಾಟ ಉಂಟಾಗಿ ಆನೆ ಸಾವನ್ನಪ್ಪಿರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+