ಮಂಗಳೂರಿನಲ್ಲಿ ನಡುರಸ್ತೆಯಲ್ಲಿ ಕುಡಿದು ತೂರಾಡಿದ ಟ್ರಾಫಿಕ್ ಪೊಲೀಸ್ ಅಮಾನತು
Recommended Video

ಮಂಗಳೂರು, ಸೆಪ್ಟೆಂಬರ್ .19: ನಿನ್ನೆ ಬುಧವಾರ ಮಧ್ಯಾಹ್ನ (ಸೆ.20) ಮದ್ಯ ಸೇವಿಸಿ ತೂರಾಡಿದ ಪೊಲೀಸಪ್ಪ ನನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಲಾಗಿದೆ. ನಗರದ ಲಾಲ್ ಬಾಗ್ ಬಳಿ ಟ್ರಾಫಿಕ್ ಪೊಲೀಸ್ ಅಶೋಕ್ ಗೌಡ ಮದ್ಯ ಸೇವಿಸಿ ರಸ್ತೆಯಲ್ಲಿ ತೂರಾಡಿದ್ದರು .
ಅಶೋಕ್ ಗೌಡ ಅವರ ಈ ವರ್ತನೆಯನ್ನು ಸಾರ್ಜನಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅಶೋಕ ಗೌಡ ಅವರನ್ನು ಅಮಾನತುಗೊಳಿಸಿ ಅದೇಶ ಹೊರಡಿಸಿದ್ದಾರೆ.
ಲಾಲ್‌ಬಾಗ್ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ ಗೌಡ, ಮದ್ಯ ಸೇವಿಸಿ ತೂರಾಡುತ್ತಾ ವಾಹನಗಳನ್ನು ತಳ್ಳುತ್ತಿದ್ದ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಾಹನ ಡಿಕ್ಕಿಯಾಗಿ ಅಪಾಯ ಸಂಭವಿಸುವ ಸಾಧ್ಯತೆಯನ್ನು ಮನಗಂಡ ಸಾರ್ವಜನಿಕರು ಅಶೋಕ್ ಗೌಡರನ್ನು ಬದಿಗೆ ತಂದು ಕೂರಿಸಿ ಉಪಚರಿಸಿದ್ದರು.

ಅಶೋಕ ಗೌಡ ಸಮವಸ್ತ್ರ ಧರಿಸಿ ತೋರಿದ ಈ ವರ್ತನೆಗೆ ಸಾರ್ಜಜನಿಕ ವಲಯದಲ್ಲಿ ಭಾರೀ ಟೀಕೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡ ಪೊಲೀಸ್ ಇಲಾಖೆ ಅಶೋಕ್ ಅವರನ್ನು ಅಮಾನತು ಮಾಡಿದೆ.
ಅಶೋಕ ಗೌಡ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.











Click it and Unblock the Notifications