ಮಂಗಳೂರಿನಲ್ಲಿ ಡ್ರಗ್ಸ್ ದಂಧೆ; ಮಗಳನ್ನು ರಕ್ಷಿಸುವಂತೆ ತಾಯಿಯ ಮೊರೆ

ಮಂಗಳೂರು, ಡಿಸೆಂಬರ್ 27; ಮಂಗಳೂರಿನಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ ಅನ್ನುವ ಆರೋಪ ಮತ್ತೆ ಜೀವಂತವಾಗಿದೆ. ಡ್ರಗ್ಸ್ ಜಾಲದಿಂದ ತನ್ನ ಮಗಳನ್ನು ರಕ್ಷಿಸಿ ಎಂದು ತಾಯಿಯೊಬ್ಬರು ವಿಶ್ವ ಹಿಂದೂ ಪರಿಷತ್ ಕಛೇರಿಗೆ ಪತ್ರ ಬರೆದ ಘಟನೆ ನಡೆದಿದೆ. ಡ್ರಗ್ಸ್ ವ್ಯಸನಿಯ ಸಹವಾಸದಿಂದ, ಡ್ರಗ್ಸ್ ದಾಸಳಾದ ಮಗಳನ್ನು ರಕ್ಷಣೆ ಮಾಡುವಂತೆ ತಾಯಿ ಪೊಲೀಸರು ಮತ್ತು ಸಂಘಟನೆಗಳ ಮೊರೆ ಹೋಗಿದ್ದಾರೆ.

ಕರಾವಳಿಯಲ್ಲಿ ಡ್ರಗ್ಸ್‌ ಜಾಲದ ಬೇರು ಸದ್ದಿಲ್ಲದೇ ದಟ್ಟವಾಗಿ ಹರಡಿಕೊಂಡಿರೋದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.‌ ಕಾಲೇಜು ವಿದ್ಯಾರ್ಥಿಗಳನ್ನೇ ಡ್ರಗ್ಸ್ ದಂಧೆಕೋರರು ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನೋದು ಮತ್ತೆ ಬಹಿರಂಗವಾಗಿದೆ. ಕ್ರೈಸ್ತ ‌ಮಹಿಳೆಯೊಬ್ಬರು ತನ್ನ ಮಗಳು ಡ್ರಗ್ಸ್‌ ಚಟಕ್ಕೆ ಬಿದ್ದು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಅಂತ ದೂರಿದ್ದಾರೆ.

ಮಾದಕ ವಸ್ತುವಿನ ಚಟಕ್ಕೆ ಒಮ್ಮೆ ಬಿದ್ದರೆ ಸಾಕು ಜೀವನವೇ ಬರ್ಬಾದ್ ಆಗಿ ಹೋಗುತ್ತದೆ. ಫೋಟೋದಲ್ಲಿರುವ ಈ ಯುವತಿಯು ವ್ಯಕ್ತಿಯೊಬ್ಬನ ಸಹವಾಸ ದೋಸದಿಂದ ಡ್ರಗ್ಸ್‌ನ ದಾಸಳಾಗಿದ್ದಾಳೆ. ಹೀಗಾಗಿ ಯುವತಿಯ ತಾಯಿ ಮಂಗಳೂರಿನ ಬಿಜೈ ನಿವಾಸಿ ಗ್ರೇಸಿ ಪಿಂಟೋ ಮಗಳನ್ನು ರಕ್ಷಿಸಿ ಎಂದು ವಿಎಚ್‌ಪಿ ಸಂಘಟನೆ ಹಾಗೂ ಮಂಗಳೂರು ಪೊಲೀಸರ ಮೊರೆ ಹೋಗಿದ್ದಾರೆ.

Drugs Mangaluru Based Women Moved Police Station To Save Daughter

27 ವರ್ಷ ವಯಸ್ಸಿನ ಯುವತಿಗೆ ನಾಲ್ಕು ವರ್ಷದ ಹಿಂದೆ ಫೇಸ್‌ಬುಕ್ ಮೂಲಕ ಸುರತ್ಕಲ್ ಮೂಲದ ಶರೀಫ್ ಸಿದ್ದಿಕಿ ಎಂಬಾತನ ಪರಿಚಯವಾಗಿತ್ತು. ಆತನ ಜೊತೆ ಸುಲುಗೆಯಿಂದ ಇದ್ದ ಯುವತಿಗೆ ಡ್ರಗ್ಸ್ ಚಟ ಹತ್ತಿಸಿದ್ದಾನೆ. ಬಳಿಕ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಲೈಂಗಿಕ ದೌರ್ಜನ್ಯವನ್ನು ನೀಡುತ್ತಾ ಬಂದಿದ್ದಾನೆ. ಹೀಗಾಗಿ ಆರೋಪಿ ಮಹಮ್ಮದ್ ಸಿದ್ದಿಕಿ ವಿರುದ್ದ ಯುವತಿಯ ತಾಯಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಯುವತಿಯ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಸುರತ್ಕಲ್ ಠಾಣಾ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 354 ಮತ್ತು 506 ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ಮಹಮ್ಮದ್ ಶರೀಫ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ಸಂದರ್ಭ ಶರೀಫ್ ಸಿದ್ಧಿಕಿಗೆ ಈಗಾಗಲೇ ಮೂರು ಮದುವೆಯಾಗಿದೆ ಎಂದು ಗೊತ್ತಾಗಿದೆ. ಇದರ ಜೊತೆ ಗ್ರೇಸಿ ಪಿಂಟೋ ಮಗಳ ಜೊತೆಯೂ ಸುಮಾರು ವರ್ಷಗಳ ಸಂಬಂಧವಿರುವುದು ತಿಳಿದು ಬಂದಿದೆ.

ಆರೋಪಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಈ ಹಿಂದೆಯೇ ಎಂ. ಡಿ. ಎಂ. ಎ ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಎರಡು ಪ್ರಕರಣ ಇದೆ. ಸದ್ಯ ಯುವತಿಗೆ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಬಳಿಕ ಯುವತಿಯ ಹೇಳಿಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಯುವತಿಯ ತಾಯಿ ಆರೋಪಿಸುವಂತೆ, ನನ್ನ ಮಗಳನ್ನ ಸಿದ್ದಿಕಿ ಮತ್ತು ಅವನ ಸಹಚರರು ಕರೆದುಕೊಂಡು ಹೋಗುತ್ತಿದ್ದರು. ಅವಳಿಗೆ ಡ್ರಗ್ಸ್ ಕೊಟ್ಟು ಕರೆದುಕೊಂಡು ಹೋಗಿ ಉಪಯೋಗಿಸಿಕೊಂಡಿದ್ದಾರೆ. ಅವಳಿಗೆ ಡ್ರಗ್ಸ್ ಬೇಕೇ ಬೇಕು, ಅದು ಇಲ್ಲ ಅಂದರೆ ಅವಳಿಗೆ ಆಗಲ್ಲ. ಅವಳ ಫೋನ್ ಕೂಡ ಕೊಡಲ್ಲ, ಅವಳು ಹುಚ್ಚಿಯ ಹಾಗೆ ಆಡುತ್ತಾಳೆ ಎಂದು ತಾಯಿ ಹೇಳಿದ್ದಾರೆ.

ಅವಳು ಅಲೋಶಿಯಸ್ ಕಾಲೇಜಿನಲ್ಲಿ ‌ವ್ಯಾಸಂಗ ಮಾಡುತ್ತಿದ್ದಳು. ಅಲ್ಲೇ ಅವನ ಪರಿಚಯ ಆಗಿದೆ, ಅವನು ನನ್ನ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾನೆ, ಗನ್ ಇದೆ ಶೂಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅವಳು ಡ್ರಗ್ ನಶೆಯಲ್ಲಿ ನನ್ನನ್ನೂ ತಾಯಿ ಅಂತ ಒಪ್ಪುತ್ತಿಲ್ಲ. ಈಗ ಅವಳನ್ನ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ಗೆ ಹಾಕಲಾಗಿದೆ. ಅವಳು ಕಾಲೇಜಿನಲ್ಲಿ ಇರುವಾಗಲೇ ಅವಳಿಗೆ ಡ್ರಗ್ ‌ಚಟ ಇತ್ತು ಎಂದು ತಿಳಿಸಿದ್ದಾರೆ.

ಇನ್ನು ಬಂಧಿತ ಆರೋಪಿ ಸಿದ್ದಿಕಿ ಡ್ರಗ್ ಪೆಡ್ಲರ್ ಆಗಿದ್ದು, ಈತನ ವಿರುದ್ದ ಡ್ರಗ್ ಪೆಡ್ಲಿಂಗ್ ಸಂಬಂಧ ಎರಡು ಪ್ರಕರಣಗಳು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ದಾಖಲಾಗಿದೆ. ಆರೋಪಿ ಸಿದ್ದಿಕಿಗೆ ಮೂರು ಮದುವೆ ಆಗಿದ್ದು, ಮುಂಬೈ, ಗೋವಾ ಮತ್ತು ಸುರತ್ಕಲ್ ಯುವತಿಯರ ಜೊತೆ ಮದುವೆಯಾಗಿದೆ. ಅಲ್ಲದೇ ಈ ಯುವತಿ ಜೊತೆಗೂ ಹಲವು ವರ್ಷಗಳ ಸಂಪರ್ಕ ಇತ್ತು.

ಒಟ್ಟಿನ್ನಲ್ಲಿ ಮತ್ತೊಮ್ಮೆ ಕರಾವಳಿ ಡ್ರಗ್ಸ್ ದಂಧೆಯ ಹೆಸರಿನಲ್ಲಿ ಸುದ್ದಿಯಾಗಿದೆ. ಯುವತಿಯರ ತಲೆ ಕೆಡಿಸಿ ಡ್ರಗ್ಸ್ ದಾಸರಾಗಿ ಮಾಡುತ್ತಿರುವ ಜಾಲ ಹೆತ್ತವರಿಗೆ ಶಾಕ್ ಕೊಟ್ಟಿದೆ. ಸದ್ಯ ಈ ಕ್ರಿಶ್ಚಿಯನ್ ಯುವತಿ ಗುಣಮುಖಳಾಗಿ ಬಂದು ಆತನ ವಿರುದ್ದ ದೂರು ಅಥವಾ ಹೇಳಿಕೆ ಕೊಟ್ಟರಷ್ಟೇ ಪ್ರಕರಣ ಗಂಭೀರತೆ ಪಡೆಯಬಹುದು.

ಯುವತಿಯ ತಂದೆ ಎರಡು ವರ್ಷಗಳ ಹಿಂದೆ ಮಗಳ ಈ ಸ್ಥಿತಿಯಿಂದ ಕೊರಗಿ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮನೆಯಲ್ಲಿ ಯುವತಿಯ ತಾಯಿ ಮಾತ್ರ ಇದ್ದು ಆರೋಪಿ ತಡರಾತ್ರಿ ಬಂದು ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ. ಇದನ್ನು ಪ್ರಶ್ನಿಸಿದರೆ ಯುವತಿಯ ತಾಯಿಗೆ ಕೊಲೆ ಬೆದರಿಕೆ ಹಾಕುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+