ಮಂಗಳೂರು: ಚಿನ್ನ ಕಳ್ಳ ಸಾಗಣೆ, ಇಬ್ಬರ ಬಂಧನ

ಮಂಗಳೂರು, ಫೆಬ್ರವರಿ 9 : ರೇಡಿಯೋ ಟ್ರಾನ್ಸ್ ಫಾರ್ಮರ್ ನಲ್ಲಿ ಅಡಗಿಸಿ ಅಕ್ರಮ ಚಿನ್ನದ ಪ್ಲೆಟ್ ಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಗುರುವಾರ ಮಂಗಳೂರಿನ ಪಂಪ್ ವೆಲ್ ವೃತ್ತದ ಬಳಿ ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರನ್ನ ಕಾಸರಗೋಡು ಮೂಲದ ಹ್ಯಾರಿಸ್ ಮಹಮ್ಮದ್ ಕುಂಞ ಹಾಗೂ ಫೈಸಲ್ ಎಂದು ಗುರುತಿಸಲಾಗಿದೆ. ದುಬೈನಿಂದ ಜೆಟ್ ಏರ್‌ವೇಸ್ ವಿಮಾನದ ಮೂಲಕ ಮಂಗಳೂರಿಗೆ ಬಂದಿದ್ದ ಈ ಆರೋಪಿಗಳಿಂದ 20 ಲಕ್ಷ ರೂಪಾಯಿ ಮೌಲ್ಯದ 36 ಚಿನ್ನದ ಪ್ಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

DRI nabs gold smuggler, accomplice red-handed at Pumpwell Mangaluru

ಇವರಿಬ್ಬರು ಅಕ್ರಮ ಚಿನ್ನದ ಪ್ಲೆಟ್ಸ್ ಗಳ ವ್ಯವಹಾರ ನಡೆಸುತ್ತಿದ್ದರು ಎಂದು ಡಿಆರ್ ಐ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇವರಿಬ್ಬರು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದರು.

ಇದನ್ನು ಗಮನಿಸಿದ ಡಿಆರ್ ಐ ಅಧಿಕಾರಿಗಳು ಆರೋಪಿಗಳನ್ನು ಫಾಲೋ ಮಾಡಿ ಮಂಗಳೂರಿನ ಪಂಪ್ ವೆಲ್ ವೃತ್ತದ ಬಳಿ ಬಂಧಿಸಿ ತಪಾಸಣೆಗೆ ಒಳಪಡಿಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+