ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ವಿನಂತಿಸಿಕೊಳ್ಳಲು ಕಾರಣವೇನು?
ಮಂಗಳೂರು, ಜನವರಿ 06: ಯಾರಿಗೂ ನೋವಾಗುವ ರೀತಿ ನಾನು ಈವರೆಗೆ ನಡೆದುಕೊಂಡಿಲ್ಲ. ನನ್ನ ಹಾಡುಗಳನ್ನು ಕೇಳಿ ಆನಂದಿಸಿ. ಆದರೆ ವಿನಾಕಾರಣ ನನ್ನ ಬಗ್ಗೆ ಯಾವುದೇ ಅಪಪ್ರಚಾರ ಮಾಡಬೇಡಿ. ನನ್ನ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಬೇಡಿ ಎಂದು ಖ್ಯಾತ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ಕೋರಿದ್ದಾರೆ.
'ಇಂಪೀರಿಯಲ್ ಬ್ಲ್ಯೂ ಸೂಪರ್ ಹಿಟ್ ನೈಟ್ಸ್' ಕಾರ್ಯಕ್ರಮ ನೀಡಲು ಮಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮದ್ಯಪಾನದಿಂದ ತೊಂದರೆ ಇಲ್ಲ. ಮದ್ಯಪಾನ ಮಾಡುವುದು ತಪ್ಪಲ್ಲ. ಆದರೆ ಮದ್ಯಪಾನ ಮಾಡಿ, ತಪ್ಪು ಡ್ರೈವಿಂಗ್ ಮಾಡುವುದು ಸರಿಯಲ್ಲ. ಸಂತೋಷಕ್ಕಾಗಿ ಮದ್ಯಪಾನ ಮಾಡಬಹುದು. ಆದರೆ, ಮದ್ಯಪಾನ ಮಾಡಿ, ವಾಹನ ಓಡಿಸುವುದು, ಗಲಾಟೆ ಮಾಡುವುದು ಇಂಥದ್ದೆಲ್ಲ ತಪ್ಪು ಎಂದು ತಿಳಿಸಿದರು.
ತಮ್ಮ ಇನ್‌ಸ್ಟಾಗ್ರಾಂನಲ್ಲಿ ದುಃಖದಲ್ಲಿದ್ದೇನೆ ಎಂದು ಬರೆದುಕೊಂಡಿರುವ ವಿಚಾರದ ಬಗ್ಗೆ ಮಾತನಾಡಿದ ನೇಹಾ ಕಕ್ಕರ್, ನಾನು ಕೂಡ ನಿಮ್ಮಂತೆಯೇ ಮನುಷ್ಯಳು. ಎಲ್ಲರಂತೆಯೇ ನನಗೂ ಬದುಕಿದೆ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಆದಾಗ್ಯೂ ನನ್ನ ಬಗ್ಗೆ ಗಾಸಿಪ್ ಗಳನ್ನು ಹರಡುವುದು ಎಷ್ಟು ಸರಿ.

ಜನಸಾಮಾನ್ಯರು ಒತ್ತಡದಲ್ಲಿದ್ದರೆ ಯಾರಿಗೂ ತಿಳಿಯುವುದಿಲ್ಲ. ಆದರೆ ಸೆಲೆಬ್ರೆಟಿಗಳು ಒತ್ತಡದಲ್ಲಿ ಏನಾದರೂ ಬರೆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಅದು ದೊಡ್ಡ ಮಟ್ಟದ ಸುದ್ದಿಯಾಗುತ್ತದೆ ಎಂದು ವಿಷಾದವ್ಯಕ್ತಪಡಿಸಿದರು.












Click it and Unblock the Notifications