ಶತಮಾನಗಳ ಇತಿಹಾಸವಿರುವ ದೇವಾಸ್ಥಾನದಲ್ಲಿ ಅಹೋರಾತ್ರಿ ಭಜನಾ ಸಪ್ತಾಹ
ಮಂಗಳೂರು, ನ 17: ಶತಮಾನಗಳ ಇತಿಹಾಸವಿರುವ ನಗರದ ವಿ ಟಿ ರಸ್ತೆಯ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಸಪ್ತಾಹ ಸೋಮವಾರ (ನ 16) ಆರಂಭಗೊಂಡಿದೆ.
ನವೆಂಬರ್ 23ರ ಬೆಳಗ್ಗೆ ಎಂಟು ಗಂಟೆಗೆ ಕಾರ್ತಿಕ ಏಕಾದಶಿಯಂದು ಪವಮಾನ ಅಭಿಷೇಕ, ಪುಳಕಾಭಿಷೇಕ, ಸಿಯಾಳ ಅಭಿಷೇಕ ಜರಗಲಿದೆ. (ಕಾರ್ತಿಕ ಮಾಸದ ಪಂಚಾಂಗ)
ರಾತ್ರಿ ಏಳಕ್ಕೆ ವಾದ್ಯಘೋಷ, ಚಂಡೆಗಳೊಂದಿಗೆ ವಿಜೃಂಭಣೆಯಿಂದ ರಥಬೀದಿ ಮಾರ್ಗವಾಗಿ ವಿಠೋಭ ದೇವಳಕ್ಕೆ ಹೊರೆ ಕಾಣಿಕೆ ತಲುಪಲಿದೆ. ಇದೇ 23ರಂದು ಭಜನಾ ಸಪ್ತಾಹದ ಮಂಗಳ ಕಾರ್ಯಕ್ರಮ ಜರುಗಲಿದೆ.

ವಿಠೋಭ ರುಕುಮಾಯಿ ದೇವಳವು 'ಸಪ್ತಾಹದ ದೇವಳ' ಎಂದೇ ಪ್ರಖ್ಯಾತಿ ಹೊಂದಿದೆ. ಗೌಡ ಸಾರಸ್ವತ ಬ್ರಾಹ್ಮಣ (GSB) ಸಮುದಾಯದ ಪ್ರಾಚೀನ ದೇವಳಗಳಲ್ಲಿ ಒಂದಾದ ಈ ದೇವಸ್ಥಾನ, ಪಂಚ ಪರ್ವಗಳಲ್ಲಿ ಪ್ರಖ್ಯಾತ.
ದಕ್ಷಿಣದ ಪಂಡಾರಪುರ ಎಂದೂ ಕರೆಯಲ್ಪಡುವ ಈ ದೇವಳದಲ್ಲಿ ನಡೆಯುವ ಪಂಚ ಪರ್ವಗಳಲ್ಲಿ ಭಜನಾ ಸಪ್ತಾಹವೂ ಒಂದಾಗಿದೆ.
1899ರಲ್ಲಿ ಅಂದಿನ ಕಾಶೀ ಮಠಾಧೀಶರಾದ ಶ್ರೀಮದ್ ವಂದೇಂದ್ರ ತೀರ್ಥ ಸ್ವಾಮೀಜಿವರ ಆಶೀರ್ವಾದಗಳೊಂದಿಗೆ ಶ್ರೀವಿಠೋಭ ರುಕುಮಾಯಿ ದೇವಳ ಪ್ರತಿಷ್ಟಾಪನೆಗೊಂಡಿತ್ತು. (ಚಿತ್ರ: ಮಂಜು ನೀರೇಶ್ವಾಲ್ಯ)












Click it and Unblock the Notifications