ವರ್ಲ್ಡ್ ಆಫ್ ಬುಕ್ ರೆಕಾರ್ಡ್ ಗೆ ಸೇರಿತು ಬೆಳುವಾಯಿ ಚಿಟ್ಟೆ ಪಾರ್ಕ್

ಮಂಗಳೂರು, ಜೂನ್.24: ಶಿಕ್ಷಣಕ್ಕೆ ಖ್ಯಾತಿವೆತ್ತ ಮೂಡಬಿದಿರೆ ಈಗ ಮತ್ತೊಂದು ಗರಿಯನ್ನು ತನ್ನದಾಗಿಸಿಕೊಂಡಿದೆ. ಮೂಡಬಿದಿರೆಯ ಬೆಳುವಾಯಿ ಎಂಬ ಪುಟ್ಟ ಊರು ಈಗ ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ.

ಮೂಡಬಿದಿರೆ ಸಮೀಪದ ಬೆಳುವಾಯಿಯಲ್ಲಿರುವ ಸಮ್ಮಿಲನ್ ಶೆಟ್ಟಿ ಅವರ ಚಿಟ್ಟೆ ಪಾರ್ಕ್ ವರ್ಲ್ಡ್ ಆಫ್ ಬುಕ್ ರೆಕಾರ್ಡ್ ನಲ್ಲಿ ಸ್ಥಾನ ಪಡೆಯವ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದೆ.

 ರಾಜ್ಯದ ಪ್ರಥಮ ಚಿಟ್ಟೆ ಪಾರ್ಕ್

ರಾಜ್ಯದ ಪ್ರಥಮ ಚಿಟ್ಟೆ ಪಾರ್ಕ್

ಮಂಗಳೂರು ಹೊರವಲಯದ ಬೆಳವಾಯಿಯಲ್ಲಿ ನಿರ್ಮಾಣಗೊಂಡಿರುವ ಈ ಸಮ್ಮಿಲನ್ ಶೆಟ್ಟೀಸ್ ಚಿಟ್ಟೆ ಪಾರ್ಕ್ ಖಾಸಗಿಯಾಗಿ ನಿರ್ಮಾಣಗೊಂಡ ರಾಜ್ಯದ ಪ್ರಥಮ ಚಿಟ್ಟೆ ಪಾರ್ಕ್ ಎಂಬ ಮನ್ನಣೆ ಪಡೆದಿದೆ.

 ಸುಂದರ ಚಿಟ್ಟೆಗಳ ಲೋಕ ಸೃಷ್ಠಿ

ಸುಂದರ ಚಿಟ್ಟೆಗಳ ಲೋಕ ಸೃಷ್ಠಿ

2013ರಲ್ಲಿ ಅಧಿಕೃತವಾಗಿ ಆರಂಭಗೊಂಡ ಈ ಚಿಟ್ಟೆ ಪಾರ್ಕ್ ಸುಮಾರು 7 ಎಕರೆ ವಿಸ್ತೀರ್ಣದ ಹಸಿರು ತಾಣದಲ್ಲಿ ಹರಡಿಕೊಂಡಿದ್ದು, ಸುಂದರ ಚಿಟ್ಟೆಗಳ ಲೋಕವನ್ನೆ ಸೃಷ್ಠಿ ಮಾಡಿದೆ. ಪರಿಸರ ಸಂರಕ್ಷಣೆ ಮತ್ತು ಕಾಳಜಿಯ ಉದ್ದೇಶದಿಂದ ಈ ಪಾರ್ಕ್ ಸ್ಥಾಪಿಸಲಾಗಿದೆ.

 ವಿದ್ಯಾರ್ಥಿಗಳಿಗೆ ನೆಚ್ಚಿನ ತಾಣ

ವಿದ್ಯಾರ್ಥಿಗಳಿಗೆ ನೆಚ್ಚಿನ ತಾಣ

ಚಿಟ್ಟೆ ಸಂರಕ್ಷಕ ಯುವಕ ಸಮ್ಮಿಲನ್ ಶೆಟ್ಟಿ ಅವರ ಪರಿಶ್ರಮದ ಫಲವಾಗಿ ಈ ಪಾರ್ಕ್ ರೂಪು ತಳೆದಿದ್ದು, ಇಲ್ಲಿ ವಿವಿಧ ಪ್ರಭೇದದ ಚಿಟ್ಟೆಗಳನ್ನು ಕಾಣಬಹುದಾಗಿದೆ. ಸದ್ಯ ಆಸಕ್ತರು, ಪರಿಸರ ಪ್ರೇಮಿಗಳು, ವಿದ್ಯಾರ್ಥಿಗಳಿಗೆ ನೆಚ್ಚಿನ ತಾಣವಾಗಿದೆ.

 148 ಪ್ರಬೇಧಗಳ ಚಿಟ್ಟೆಗಳಿವೆ

148 ಪ್ರಬೇಧಗಳ ಚಿಟ್ಟೆಗಳಿವೆ

ಚಿಟ್ಟೆಗಳ ಬಗ್ಗೆ ಸಂಶೋಧನೆ, ಹೆಚ್ಚಿನ ಅಧ್ಯಯನ ಮಾಡಲು ಅವಕಾಶ ನೀಡಲಾಗಿದ್ದು, ಇಲ್ಲಿ ವಿಶೇಷ 5 ಅಪರೂಪದ ಚಿಟ್ಟೆ ಪ್ರಬೇಧಗಳು ಸೇರಿ ಒಟ್ಟು 148 ಪ್ರಬೇಧಗಳು ಚಿಟ್ಟೆಗಳು ಈ ಪಾರ್ಕ್ ನಲ್ಲಿ ದಾಖಲಾಗಿದೆ.

 ವಿಶ್ವ ಮಟ್ಟದಲ್ಲಿ ದಾಖಲಾಯ್ತು

ವಿಶ್ವ ಮಟ್ಟದಲ್ಲಿ ದಾಖಲಾಯ್ತು

ಚಿಟ್ಟೆಗಳ ಕುರಿತಾಗಿ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮಕ್ಕಾಗಿ ಲಂಡನ್ ವರ್ಲ್ಡ್ ಬುಕ್ ಈ ಗೌರವ ನೀಡಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗಿರುವ ಚಿಟ್ಟೆಪಾರ್ಕ್ ಈಗ ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ. ಬೆಳುವಾಯಿ ಗ್ರಾಮ ಕೂಡ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+