Video; ಲೈಫ್ ಬಾಯ್ ಸೋಪ್‌ನಲ್ಲಿ ಮೂಡಿದ ಪುನೀತ್ ಚಿತ್ರ
ಮಂಗಳೂರು, ಮಾರ್ಚ್ 17; ಗುರುವಾರ ಕನ್ನಡ ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬ. ಅಭಿಮಾನಿಗಳು ಅಗಲಿದ ನಟನ ಕೊನೆಯ ಚಿತ್ರ 'ಜೇಮ್ಸ್' ವೀಕ್ಷಣೆ ಮಾಡುವ ಮೂಲಕ ಅಪ್ಪುವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಪುನೀತ್ ರಾಜ್ಹುಟ್ಟುಹಬ್ಬದ ಪ್ರಯುಕ್ತ ಬೇರೆ ಬೇರೆ ರೀತಿಯಲ್ಲಿ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಮಂಗಳೂರಿನಲ್ಲಿರುವ ಅಪ್ಪಟ ಅಪ್ಪು ಅಭಿಮಾನಿ ಲೈಫ್ ಬಾಯ್ ಸೋಪ್‌ನಲ್ಲಿ ಪುನೀತ್ ರಾಜ್‍ಕುಮಾರ್ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.
ಕೇವಲ 2 ಗಂಟೆಯಲ್ಲಿ ಸೋಪ್‌ನಲ್ಲಿ ಅಪ್ಪು ಚಿತ್ರವನ್ನು ಗುಂಡು ಪಿನ್ ಮೂಲಕ ರಚನೆ ಮಾಡಿದ್ದಾರೆ ಮಂಗಳೂರಿನ ಗಣೇಶಪುರದ ಕಲಾವಿದ ದೇವಿಕಿರಣ್. ಬೇರೆ ಸೋಪ್‌ನಿಂದ ಅವರು ಅಪ್ಪು ಚಿತ್ರ ರಚಿಸಲು ಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ.
ಆ ಬಳಿಕ ಲೈಫ್ ಬಾಯ್ ಸೋಪ್‌ನಿಂದ ಅಪ್ಪು ಚಿತ್ರ ಮಾಡಿ ಯಶಸ್ಸು ಕಂಡಿದ್ದಾರೆ ದೇವಿಕಿರಣ್. ಅಪ್ಪು ಚಿತ್ರ ರಚನೆಯ ವೀಡಿಯೋವನ್ನು ದೇವಿಕಿರಣ್ ಬುಧವಾರ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇಂಟರ್‌ನೆಟ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾರ್ಚ್ 17 ದಿ. ನಟ ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬ. ಅಪ್ಪು ಇಲ್ಲದೇ ಹುಟ್ಟು ಆಚರಿಸುತ್ತಿರುವ ಅಭಿಮಾನಿಗಳು ನೆಚ್ಚಿನ ನಟನ ಹೆಸರಿನಲ್ಲಿ ಅನ್ನದಾನ, ರಕ್ತದಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಭಿಯನದ ಕೊನೆಯ ಚಿತ್ರ 'ಜೇಮ್ಸ್' ಗುರುವಾರ ಬಿಡುಗಡೆಯಾಗಿದೆ. ನೆಚ್ಚಿನ ನಟನ ಸಿನಿಮಾ ವೀಕ್ಷಣೆ ಮಾಡಲು ಅಭಿಮಾನಿಗಳು ರಾತ್ರಿಯಿಂದಲೇ ಕಾದು ಕುಳಿತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, 'ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ , ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಮಾಡಿದ ಜನಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು' ಎಂದು ಹೇಳಿದ್ದಾರೆ.












Click it and Unblock the Notifications