ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳುನಾಡಿನ ಕೋಳಿ ಅಂಕಕ್ಕೆ ಗ್ರೀನ್ ಸಿಗ್ನಲ್; ಫೈಟರ್ ಹುಂಜಗಳಿಗೆ ಹೆಚ್ಚಾದ ಬೇಡಿಕೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 25: ತುಳುನಾಡಿನ ಗ್ರಾಮೀಣ ಭಾಗದ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಕೋಳಿ ಅಂಕಕ್ಕೆ ನ್ಯಾಯಾಲಯ ಷರತ್ತು ಬದ್ಧ ಅನುಮತಿ ನೀಡಿದೆ. ಪೊಲೀಸ್ ದಾಳಿಯ ಭಯದಿಂದ‌ ಇಲ್ಲಿಯವರೆಗೆ ತೆರೆಮರೆಯಲ್ಲಿ ನಡೆಯುತ್ತಿದ್ದ ಕರಾವಳಿಯ ಕೋಳಿ ಅಂಕಗಳು, ಇನ್ನು ಮುಂದೆ ಬಹಿರಂಗವಾಗಿಯೇ ನಡೆಯಲಿದೆ. ಆದರೆ ಕೋರ್ಟ್ ಈ ಅಂಕ‌ ನಡೆಯಬೇಕಾದರೆ ಹಲವು ಷರತ್ತುಗಳನ್ನು ಪಾಲಿಸಲು ಆದೇಶ ನೀಡಿದ್ದು, ಸದ್ಯ ಕಾದಾಟದ ಕೋಳಿಗಳಿಗೆ ಭರ್ಜರಿ ಮಾರುಕಟ್ಟೆ ಲಭ್ಯವಾಗಿದೆ.

ತುಳುನಾಡಿನ ಮನರಂಜನಾ ಕ್ರೀಡೆಗಳಲ್ಲಿ ಒಂದಾದ ಕೋಳಿ ಅಂಕಕ್ಕೆ ನ್ಯಾಯಾಲಯ ಷರತ್ತು ಬದ್ಧ ಅನುಮತಿ ನೀಡಿದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ನಡೆಯುವ ಸಂಖ್ಯೆ ಹೆಚ್ಚಾಗಿದೆ. ಕೋಳಿ ಅಂಕ ಹೆಚ್ಚಾದಂತೆ ಫೈಟರ್ ಕೋಳಿಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಸ್ಥಳೀಯ ಹಾಗೂ ಸೇಲಂ ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದು, ಈ ಕೋಳಿಗಳಿಗೆ ಕಾಳಗಕ್ಕಾಗಿ ಸ್ಪೆಷಲ್ ತರಬೇತಿಯನ್ನೂ ನೀಡಲಾಗುತ್ತದೆ.

ಕೋಳಿ ಅಂಕ ಅಡ್ಡೆ ಮೇಲೆ ಪೊಲೀಸರ ದಾಳಿ, 39 ಹುಂಜ ವಶಕೋಳಿ ಅಂಕ ಅಡ್ಡೆ ಮೇಲೆ ಪೊಲೀಸರ ದಾಳಿ, 39 ಹುಂಜ ವಶ

ಕೋಳಿ ಅಂಕಕ್ಕೆ ಅನುಮತಿ ದೊರೆತ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಊರಿನ ಕೋಳಿ ಹಾಗೂ ಸೇಲಂ ಕೋಳಿಗಳನ್ನು ಕೋಳಿ ಅಂಕದಲ್ಲಿ ಕಾದಾಟಕ್ಕೆ ಬಳಸಲಾಗುತ್ತಿದೆ.

Mangaluru: Court Gives Conditional Green Signal to Conduct Hens Fight in Tulunadu

ಕೋಳಿ ಅಂಕಕ್ಕೆ ಬರುವ ಮೊದಲು ಕೋಳಿಗಳಿಗೆ ಹಲವು ರೀತಿಯ ತರಬೇತಿಗಳನ್ನೂ ನೀಡಲಾಗುತ್ತದೆ. ಖರೀದಿ ಮಾಡಿದ ಕೋಳಿಗಳನ್ನು ವಾರಕ್ಕೆ ಮೂರು ಬಾರಿ ಈಜಾಡಿಸುವುದು, ದಿನವಿಡೀ ಭತ್ತವನ್ನು ಆಹಾರವಾಗಿ ನೀಡುವುದು, ಪ್ರತಿದಿನ ಕಾಳಗದ ತರಬೇತಿ ನೀಡುವುದು ಹೀಗೆ ಕೋಳಿಗಳನ್ನು ದಷ್ಟ-ಪುಷ್ಟವಾಗಿ ತಯಾರು ಮಾಡಿದ ಬಳಿಕವೇ ಕೋಳಿಗಳನ್ನು ಕಾದಾಟದ ಅಂಕಕ್ಕೆ ಕರೆ ತರಲಾಗುತ್ತದೆ.

10 ರಿಂದ 30 ಸಾವಿರದವರೆಗಿನ ಫೈಟರ್ ಕೋಳಿಗಳೂ ಕೋಳಿ ಅಂಕದಲ್ಲಿ ಕಾದಾಟಕ್ಕೆ ಬರುತ್ತಿದ್ದು, ಇವುಗಳ ಮೇಲೆ ಲಕ್ಷಕ್ಕೂ ಮಿಕ್ಕಿದ ಜೂಜನ್ನೂ ಕಟ್ಟಲಾಗುತ್ತದೆ. ಕರ್ಬೊಳ್ಳೆ, ಮೈಪೆ, ಉರಿಯೆ, ಕಡ್ಲೆ, ಕಾವೆ, ಕೆಮೈರೆ, ನೀಳೆ ಹೀಗೆ ಹಲವು ತರಹದ ಕೋಳಿಗಳನ್ನು ಕೋಳಿ ಅಂಕದಲ್ಲಿ ಕಾದಾಟಕ್ಕೆ ಬಿಡಲಾಗುತ್ತಿದ್ದು, ಕೋಳಿಗಳ ಕಾದಾಟವನ್ನು ವೀಕ್ಷಿಸಲು ನೂರಾರು ಮಂದಿ ಸೇರುತ್ತಾರೆ.

ನ್ಯಾಯಾಲಯದ ಷರತ್ತಿನ ಪ್ರಕಾರ ಕೋಳಿ ಅಂಕದಲ್ಲಿ ಕಾದಾಟ ನಡೆಸುವ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟುವಂತಿಲ್ಲ, ಜೂಜಾಟ ನಡೆಸುವಂತಿಲ್ಲ ಎನ್ನುವ ಅಂಶಗಳ ಉಲ್ಲೇಖವಿದ್ದರೂ, ಬಹುತೇಕ ಕೋಳಿ ಅಂಕಗಳಲ್ಲಿ ಇವೆರಡು ಇಲ್ಲದೆ ಕೋಳಿ ಅಂಕಗಳು ನಡೆಯುವುದೇ ಇಲ್ಲ. ಹೆಚ್ಚಾಗಿ ದೈವ ಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕೋಳಿ ಅಂಕಗಳು ಆರಂಭವಾಗುತ್ತಿದ್ದು, ಹಿಂದೆ ಕೃಷಿಕರು ಮನರಂಜನಾ ಕ್ರೀಡೆಯಾಗಿ ಕೋಳಿ ಅಂಕವನ್ನು ನೋಡುತ್ತಿದ್ದರು.

ಆದರೆ ಕಾಲ ಕ್ರಮೇಣ ಕೋಳಿ ಅಂಕಕ್ಕೂ ಜೂಜಿನ ಅಮಲು ಅಂಟಿಕೊಂಡ ಬಳಿಕ ಕೋಳಿ ಅಂಕ ಜನಾಕರ್ಷಣೆಯ ಪ್ರಮುಖ ಕ್ರೀಡೆಯಾಗಿಯೂ ಬದಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ದೈವಾರಾಧನೆ ಇರುವ ಕಡೆಗಳಲ್ಲಿ ಸ್ಥಳಿಯ ಆಡಳಿತವು ಈ ಕೋಳಿ ಅಂಕಕ್ಕೆ ಅನುಮತಿಯನ್ನೂ ನೀಡುತ್ತಿದ್ದು, ಉಳಿದ ಕಡೆಗಳಲ್ಲಿ ಇದಕ್ಕೆ ಅವಕಾಶವಿರಲಿಲ್ಲ.

ಆದರೆ ನ್ಯಾಯಾಲಯದ ತೀರ್ಪಿನ ಬಳಿಕ ಕೋಳಿ ಅಂಕಗಳು ಪ್ರತಿದಿನ ಒಂದಲ್ಲ ಒಂದು ಕಡೆಗಳಲ್ಲಿ ನಡೆಯುತ್ತಿದ್ದು, ಇದನ್ನೇ ಒಂದು ಕಸುಬಾಗಿ ಆಯ್ದುಕೊಂಡವರೂ ನೂರಾರು ಜನರಿದ್ದಾರೆ. ನ್ಯಾಯಾಲಯ ಷರತ್ತುಬದ್ಧ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕೋಳಿ ಅಂಕದ ಅಭಿಮಾನಿ ವಾಮದಪದವಿನ ಇಮ್ಮಿ ಶೆಟ್ಟಿ, ಕೋಳಿ ಅಂಕಕ್ಕಾಗಿ ಮನೆಯಲ್ಲಿ ಹಲವು ಹುಂಜಗಳಿದ್ದರೂ, ಅಂಕಗಳು ಕಡಿಮೆಯಾಗುತ್ತಿದ್ದರಿಂದ ನಿರಾಸೆಯಾಗುತಿತ್ತು. ಆದರೆ ಈಗ ಷರತ್ತುಬದ್ಧ ಅನುಮತಿ‌ ಸಿಕ್ಕಿದೆ. ತುಳುನಾಡಿನ ಜನರ ಜಾನಪದೀಯ ಕ್ರೀಡೆ ಮತ್ತೆ ನಡೆಯುತ್ತಿರುವುದು ಖುಷಿಯಾಗಿದೆ ಅಂತಾ ಹೇಳಿದ್ದಾರೆ.

ಕೋಳಿ ಅಂಕದ ಹುಂಜಗಳಿಗೆ ದರ ಮಾತ್ರವಲ್ಲದೆ ಅವುಗಳ ಮಾಂಸಕ್ಕೂ ಕರಾವಳಿಯಲ್ಲಿ ಭಾರೀ ಬೇಡಿಕೆಯಿದ್ದು, ಕಟ್ಟದ ಕೋರಿ ಅಂತಾನೇ ವಿಶೇಷ ಕೋಳಿ ಖಾದ್ಯ ಮಾಡಲಾಗುತ್ತದೆ.

English summary
Mangaluru: Court Gives Conditional Green Signal to Conduct Hens Fight in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X