ಸಾರ್ವಜನಿಕ ಕಾರ್ಯಕ್ರಮದಲ್ಲಿ ದೀಪ ಬೆಳಗಿದ ಮುಸ್ಲಿಂ ಲೀಗ್ ಶಾಸಕಿ: ಕೇರಳದಲ್ಲಿ ಭುಗಿಲೆದ್ದ ವಿವಾದ

ಕೇರಳದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಇದೀಗ ಹೊಸದೊಂದು ವಿವಾದ ಭುಗಿಲೆದ್ದಿದೆ. ಆಡಳಿತಾರೂಢ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಮೊದಲ ಮಹಿಳಾ ಶಾಸಕಿ ಫಾತಿಮಾ ತಹ್ಲಿಯಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಾಂಪ್ರದಾಯಿಕ 'ನಿಲವಿಳಕ್ಕು' (ದೀಪ) ಬೆಳಗಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆಯು ಸಾಮಾಜಿಕ ಜಾಳತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಇಸ್ಲಾಮಿಕ್ ವಿದ್ವಾಂಸರು ಶಾಸಕಿಯ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಒಂದು ಸಾಮಾನ್ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಯಾಗಿ ಭಾಗವಹಿಸಿ ದೀಪ ಬೆಳಗಿದ ಘಟನೆಯು ಇದೀಗ ದೊಡ್ಡ ಮಟ್ಟದ ಧಾರ್ಮಿಕ ಹಾಗೂ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ.

MLA Fathima

ಕೋಯಿಕ್ಕೋಡ್ ಜಿಲ್ಲೆಯ ಪೆರಂಬ್ರಾ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಫಾತಿಮಾ ತಹ್ಲಿಯಾ ಅವರು ಇತ್ತೀಚೆಗೆ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಹೋಟೆಲ್ ಒಂದರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಆಯೋಜಕರ ಕೋರಿಕೆಯ ಮೇರೆಗೆ ಅಲ್ಲಿ ಇರಿಸಲಾಗಿದ್ದ ಸಾಂಪ್ರದಾಯಿಕ ದೀಪವನ್ನು ಬೆಳಗುವ ಮೂಲಕ ಹೋಟೆಲ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಈ ಉದ್ಘಾಟನಾ ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಹೊರಬೀಳುತ್ತಿದ್ದಂತೆಯೇ, ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳು ಇಂತಹ ಇತರ ಧರ್ಮಗಳ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ನೇರವಾಗಿ ಭಾಗಿಯಾಗಬಹುದೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸದ್ಯಕ್ಕೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

ಶಾಸಕಿ ಫಾತಿಮಾ ತಹ್ಲಿಯಾ ಅವರ ಈ ಕ್ರಮವನ್ನು ಕೇರಳದ ಪ್ರಮುಖ ಸುನ್ನಿ-ಶಾಫಿ ಇಸ್ಲಾಮಿಕ್ ವಿದ್ವಾಂಸರ ಸಂಘಟನೆಯಾದ 'ಕೇರಳ ಜಮೀಯತುಲ್ ಉಲಮಾ' ತೀವ್ರವಾಗಿ ಖಂಡಿಸಿದೆ. ಹೋಟೆಲ್ ಉದ್ಘಾಟನೆ ವೇಳೆ ದೀಪ ಬೆಳಗಿದ ಶಾಸಕಿ ಹಾಗೂ ಆ ಸಂದರ್ಭದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಇತರ ಮುಸ್ಲಿಂ ಸಮುದಾಯದ ಪ್ರತಿನಿಧಿಗಳ ನಡವಳಿಕೆಯನ್ನು ಈ ಸಂಘಟನೆಯು ಕಟುವಾಗಿ ಟೀಕಿಸಿದೆ. ಈ ವಿವಾದದ ಕುರಿತು ಮುಖಂಡರು ಸುದೀರ್ಘವಾದ ಸಭೆ ನಡೆಸಿ ಚರ್ಚಿಸಿದ್ದಾರೆ. ಸಭೆಯ ಬಳಿಕ ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿರುವ ಸಂಘಟನೆಯು, "ಮುಸ್ಲಿಮರು ಇತರ ಧರ್ಮಗಳ ಧಾರ್ಮಿಕ ಆಚರಣೆಗಳು ಮತ್ತು ಇಸ್ಲಾಮಿಕ್ ಬೋಧನೆಗಳಲ್ಲಿ ಇಲ್ಲದ ಪದ್ಧತಿಗಳಿಂದ ಕಡ್ಡಾಯವಾಗಿ ದೂರವಿರಬೇಕು" ಎಂದು ಸಮುದಾಯದ ಜನರಿಗೆ ಕಠಿಣ ಸಂದೇಶವನ್ನು ರವಾನಿಸಿದೆ.

ಈ ವಿವಾದವು ಕೇವಲ ಪತ್ರಿಕಾ ಪ್ರಕಟಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಮುಸ್ಲಿಂ ಮುಖಂಡರು ಶಾಸಕಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಜಮೀಯತುಲ್ ಉಲಮಾ ಮುಖಂಡರಾದ ಅಬ್ದುಲ್ ಹಮೀದ್ ಫೈಝಿ ಅವರು ಈ ವಿಚಾರವಾಗಿ ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರು, "ಇಸ್ಲಾಂ ಧರ್ಮದಲ್ಲಿ ಇತರ ಧರ್ಮಗಳ ಆಚರಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ. ಬೇರೆ ಧರ್ಮದ ನಂಬಿಕೆಗಳನ್ನು ಒಪ್ಪಿಕೊಂಡು, ಸಾರ್ವಜನಿಕವಾಗಿ ಈ ರೀತಿ ದೀಪ ಬೆಳಗಿದರೆ, ಅವರು ಇಸ್ಲಾಂ ಧರ್ಮದ ಚೌಕಟ್ಟಿನಿಂದಲೇ ಹೊರಹೋದಂತೆ " ಎಂದು ಕಟುವಾಗಿ ಎಚ್ಚರಿಸಿದ್ದಾರೆ.

ಒಟ್ಟಾರೆಯಾಗಿ, ಒಬ್ಬ ಜನಪ್ರತಿನಿಧಿಯಾಗಿ ಎಲ್ಲರೊಂದಿಗೂ ಬೆರೆಯುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮದ ಶಿಷ್ಟಾಚಾರದ ಭಾಗವಾಗಿ ಶಾಸಕಿ ಫಾತಿಮಾ ತಹ್ಲಿಯಾ ಅವರು ಮಾಡಿದ ಒಂದು ಸಣ್ಣ ಕೆಲಸ ಇದೀಗ ಅವರದ್ದೇ ಸಮುದಾಯದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಕೇರಳದ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಸದ್ಯಕ್ಕೆ ಭಾರಿ ಸದ್ದು ಮಾಡುತ್ತಿರುವ ಈ 'ದೀಪ' ವಿವಾದ ಇನ್ನೆಷ್ಟು ದಿನಗಳ ಕಾಲ ಮುಂದುವರೆಯಲಿದೆ ಹಾಗೂ ಶಾಸಕಿ ಫಾತಿಮಾ ಅವರು ಈ ಟೀಕೆಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಜನಪ್ರತಿನಿಧಿಗಳ ಕರ್ತವ್ಯಗಳು ಮತ್ತು ಧಾರ್ಮಿಕ ಚೌಕಟ್ಟುಗಳ ನಡುವಿನ ಸಂಘರ್ಷಕ್ಕೆ ಈ ಘಟನೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+