ಕಾಸರಗೋಡು: ಮೂರು ದಶಕದ ನಂತರ ಗೆದ್ದ ಕಾಂಗ್ರೆಸ್
ಮಂಗಳೂರು ಮೇ 24 : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರ ಬಹಳ ಕುತೂಹಲ ಕೆರಳಿಸಿತ್ತು. ಮೂರು ದಶಕದ ಬಳಿಕ ಸಿಪಿಎಂನ ಭದ್ರಕೋಟೆಯಾದ ಕಾಸರಗೋಡು ಲೋಕಸಭಾ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಮ್ಮ ಪ್ರತಿಸ್ಪರ್ಧಿ ಸಿಪಿಎಂನ ಕೆ.ಪಿ ಸತೀಶ್ಚಂದ್ರನ್ ರನ್ನು ಸುಮಾರು 41, 648 ಅಂತರದಿಂದ ಸೋಲಿಸಿದ್ದಾರೆ.

ಆರಂಭದಿಂದಲೇ ಏರಿಳಿಕೆ ಕಂಡುಬಂದರೂ ಅಂತಿಮ ಸುತ್ತಿಗೆ ಬಂದಾಗ ಉಣ್ಣಿತ್ತಾನ್ ಮೇಲುಗೈ ಸಾಧಿಸಿದರು. ರಾಜ್ ಮೋಹನ್ ಉಣ್ಣಿತ್ತಾನ್ 4,70,345, ಸತೀಶ್ಚಂದ್ರನ್ 4,28, 697 ಮತಗಳನ್ನು ಪಡೆದರೆ, ಬಿಜೆಪಿಯ ರವೀಶ ತಂತ್ರಿ ಕುಂಟಾರು 1, 73,934 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 30 ವರ್ಷಗಳ ಬಳಿಕ ಕಾಂಗ್ರೆಸ್ ಇದೀಗ ಗೆಲುವಿನ ನಗೆ ಬೀರಿದೆ.












Click it and Unblock the Notifications