ನೋಡಿದವರ ಮುಖದಲ್ಲಿ ನಗು ಮೂಡಿಸ್ತಾನೆ ಈ ಬನ್ನಿ ಹೆಲ್ಮೆಟ್ ಝೊಮ್ಯಾಟೊ ಬಾಯ್
ಮಂಗಳೂರು, ನವೆಂಬರ್ 28: ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಸಂತೋಷದ ಹೊರತು ಮತ್ತೊಬ್ಬರ ನೋವು - ನಲಿವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಿದೇ ಇಲ್ಲ ಬಿಡಿ. ಆದರೆ ಇಲ್ಲೊಬ್ಬ ಕಾಲೇಜು ವಿದ್ಯಾರ್ಥಿ ಮತ್ತೊಬ್ಬರಿಗೆ ಸಂತೋಷ ಸಿಗಲಿ, ನೋವಿನಲ್ಲಿರುವವರ ಮುಖದಲ್ಲೊಂದು ಸಣ್ಣ ಮಂದಹಾಸ ಮೂಡಲಿ ಎಂದು ವಿಶಿಷ್ಟ ಪ್ರಯತ್ನ ಮಾಡುತ್ತಿದ್ದಾನೆ.
ಅದಕ್ಕಾಗಿ ಆತ ಮಹತ್ತರದ್ದೇನು ಮಾಡಿಲ್ಲ. ಮಾಡಿದ್ದಿಷ್ಟೇ, ವಿಶಿಷ್ಟವಾದ ಹೆಲ್ಮೆಟ್ ಧರಿಸಿ ಮತ್ತೊಬ್ಬರ ಮುಖದಲ್ಲೊಂದು ನಗು ಮೂಡಿಸುತ್ತಿದ್ದಾನೆ. ಈತನ ಹೆಸರು ಅಜಿತ್ ಶೆಟ್ಟಿ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ.

ರಜೆಯಲ್ಲಿ ಮಂಗಳೂರಿನಲ್ಲಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಈ ವೇಳೆ ಬೈಕ್ ಬಿಡುವಾಗ ಧರಿಸುವ ಹೆಲ್ಮೆಟ್‌ನಿಂದಲೇ ಮತ್ತೊಬ್ಬರ ಮುಖದಲ್ಲಿ ಈತ ನಗು ಮೂಡಿಸುವ ಪ್ರಯತ್ನದಲ್ಲಿದ್ದಾನೆ.
ಅಜಿತ್ ಶೆಟ್ಟಿ ಧರಿಸುವ ಹೆಲ್ಮೆಟ್‌ಗೆ ಬನ್ನಿ ಹೆಲ್ಮೆಟ್ ಎಂದು ಹೆಸರು. ನೋಡುವಲ್ಲಿ ಹೊರತುಪಡಿಸಿ ಹೆಲ್ಮೆಟ್ ಉಳಿದ ಭಾಗ ಮೊಲದ ತುಪ್ಪಳದಂತಹ ನುಣುಪಾದ ಗುಲಾಬಿ ರಂಗಿನ ವಸ್ತುವಿನಿಂದ ಆವರಿಸಿದೆ. ಉದ್ದನೆಯ ಮೊಲದ ಕಿವಿಯೂ ಇದೆ. ಕಣ್ಣು, ಎರಡು ಉದ್ದನೆಯೂ ಹಲ್ಲೂ ಇದೆ.
ಇವರು ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಓಡಾಡಿದರೆ ಸಾಕು, ನೋಡಿದವರ ಮುಖದಲ್ಲೊಂದು ನಗು ಮೂಡುತ್ತದೆ. ಕೆಲವರು ಹಿಂದಿರುಗಿ ನೋಡುತ್ತಾರೆ. ಮತ್ತೆ ಕೆಲವರು ಕರೆದು ಮಾತನಾಡಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ತಮಿಳುನಾಡಿನ ಕ್ರೇಜಿ ವ್ಲಾಗರ್ ಅನ್ನು ಫಾಲೋ ಮಾಡುತ್ತಿದ್ದ ಅಜಿತ್ ಶೆಟ್ಟಿ ಉತ್ತೇಜಿತಗೊಂಡು ಈ ಹೆಲ್ಮೆಟನ್ನು 2,500 ರೂಪಾಯಿಗೆ ತಮಿಳುನಾಡಿನಿಂದ ತರಿಸಿದ್ದಾನೆ. ಈ ಹೆಲ್ಮೆಟ್ ನೋಡಿ ಟ್ರಾಫಿಕ್ ಪೊಲೀಸ್ ತಡೆದದ್ದೂ ಇದೆಯಂತೆ. ಆದರೆ ಬಳಿಕ ಇದು ಐಎಸ್ಐ ಮಾರ್ಕ್ ಹೆಲ್ಮೆಟ್ ಎಂದು ಗೊತ್ತಾಗಿ ಬಿಟ್ಟು ಕಳಿಸಿದ್ದಾರಂತೆ.
ತನ್ನಿಂದ ತನಗೊಬ್ಬನಿಗೆ ಸಂತೋಷ ಸಿಗಬಾರದು, ಇತರರಿಗೂ ಸಂತೋಷ ಸಿಗಬೇಕೆಂದು ಇಂತಹ ವಿಶಿಷ್ಟ ಪಯತ್ನದಲ್ಲಿದ್ದಾನೆ ಈ ಯುವಕ. ಅಜಿತ್ ಶೆಟ್ಟಿಯಿಂದ ಮತ್ತಷ್ಟು ಮಂದಿ ಉತ್ತೇಜಿತರಾಗಿ ಅವರೂ ಇದೇ ರೀತಿ ಸಂತೋಷ ಹಂಚಲಿ.












Click it and Unblock the Notifications