ಸಾವಿನಲ್ಲೂ ಸಾರ್ಥಕತೆ; ಅಂಗಾಂಗ ದಾನ ಮಾಡಿದ ಮಂಗಳೂರಿನ ಮಹಿಳೆ

ಮಂಗಳೂರು, ಜುಲೈ 19; ಮೆದುಳು ನಿಷ್ಕ್ರಿಯಗೊಂಡಿದ್ದ ಅವಿವಾಹಿತ ಮಹಿಳೆ ಅಂಗಾಂಗಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ಜೀವದಾನ ಮಾಡಿದ್ದಾರೆ. ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಿನ್ನಿಗೊಳಿಯ ನಿವಾಸಿ ಲಿಂಡಾ ಶಾರೆನ್ ಡಿಸೋಜಾ (41) ರಕ್ತದೊತ್ತಡ ಮತ್ತು ತಲೆನೋವಿನಿಂದ ಬಳಲುತ್ತಿದ್ದರು. ಜುಲೈ 11ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು.

ಪ್ರಜ್ಞಾಹೀನರಾಗಿದ್ದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶನಿವಾರ ಲಿಂಡಾ ಶಾರೆನ್ ಡಿಸೋಜಾ ಮೆದುಳು ನಿಷ್ಕ್ರಿಯಗೊಂಡಿದ್ದು, ಸಹೋದರರು ಅಂಗಾಂಗ ದಾನಕ್ಕೆ ತೀರ್ಮಾನ ಮಾಡಿದರು. ಭಾನುವಾರ ಸಂಜೆ ಅಂಗಾಂಗ ದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

 Brain Dead Mangaluru Woman Donate Heart Lungs Liver Kidney

ಹೃದಯ ಮತ್ತು ಶ್ವಾಸಕೋಶವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆ. ಯಕೃತ್‌ ಅನ್ನು ಬೆಂಗಳೂರಿನ ಪೋರ್ಟಿಸ್, ಒಂದು ಕಿಡ್ನಿ ಮಣಿಪಾಲದ ಕೆಎಂಸಿ, ಮತ್ತೊಂದು ಮಂಗಳೂರಿನ ಎ. ಜೆ. ಆಸ್ಪತ್ರೆಗೆ ದಾನ ಮಾಡಲಾಗಿದೆ. ಭಾಗಶಃ ಚರ್ಮವನ್ನು ದೇರಳ ಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ನೀಡಲಾಗಿದೆ.

ಹೃದಯ ಮತ್ತು ಶ್ವಾಸಕೋಶವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಗ್ರೀನ್ ಕಾರಿಡಾರ್ ಮೂಲಕ ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ವಿಮಾನದ ಮೂಲಕ ಬೆಂಗಳೂರು ಮತ್ತು ಚೆನ್ನೈಗೆ ಸಾಗಣೆ ಮಾಡಲಾಯಿತು.

ಲಿಂಡಾ ಶಾರೆನ್ ಡಿಸೋಜಾ ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ತಿಳಿದ ವೈದ್ಯರು ಸಹೋದರರಾದ ಲ್ಯಾನ್ಸಿ ಪ್ರಕಾಶ್ ಡಿಸೋಜಾ ಮತ್ತು ಸಂತೋಷ್ ಡಿಸೋಜಾಗೆ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದ್ದರು. ಅವರ ಒಪ್ಪಿಗೆ ಬಳಿಕ ಅಂಗಾಂಗ ದಾನ ಪ್ರಕ್ರಿಯೆಗಳನ್ನು ನಡೆಸಲಾಯಿತು.

ಬೆಂಗಳೂರು ನಗರದಲ್ಲಿ ಬ್ಯಾಂಕ್‌ವೊಂದರಲ್ಲಿ ಲಿಂಡಾ ಶಾರೆನ್ ಡಿಸೋಜಾ ಕೆಲಸ ಮಾಡುತ್ತಿದ್ದರು. ರಕ್ತದೊತ್ತಡದ ಕಾಯಿಲೆ ಹಿನ್ನಲೆಯಲ್ಲಿ 4 ವರ್ಷಗಳ ಹಿಂದೆ ಕೆಲಸವನ್ನು ಬಿಟ್ಟು ಕಿನ್ನಿಗೊಳಿಯಲ್ಲಿ ತಾಯಿಯ ಜೊತೆ ವಾಸವಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+