ಮೋದಿ, ಇಮ್ರಾನ್ ಖಾನ್ 'ಒಂದೇ ತಾಯಿಯ ಮಕ್ಕಳು': ರಮಾನಾಥ್ ರೈ
Recommended Video
ಮಂಗಳೂರು, ಸೆ 9: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ್ ರೈ, ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಪ್ರಧಾನಿ ಮೋದಿಯನ್ನು, ಪಾಕಿಸ್ತಾನದ ಪಿಎಂಗೆ ಹೋಲಿಸಿರುವ ರೈ, "ಮೋದಿ ಮತ್ತು ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು" ಎಂದು ಟೀಕಿಸಿದ್ದಾರೆ.
"ಇವರಿಬ್ಬರದ್ದೂ ಒಂದೇ ಗುಣ" ಎಂದು ಲೇವಡಿ ಮಾಡಿರುವ ರಮಾನಾಥ್ ರೈ, " ಚುನಾವಣೆಯಲ್ಲಿನ ಗೆಲುವಿಗಾಗಿ ಇವರಿಬ್ಬರು ಪರಸ್ಪರ ಬೈದಾಡಿಕೊಳ್ಳುತ್ತಾರೆ" ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

" ಮೋದಿಯವರಿಗೆ ಯಾವುದೇ ಅಭಿವೃದ್ದಿ ಕೆಲಸದಲ್ಲಿ ಉತ್ಸುಕತೆಯಿಲ್ಲ. ಅವರು ಬರೀ ಭಾಷಣದಲ್ಲೇ ಕಾಲ ಕಳೆಯುತ್ತಾರೆ" ಎಂದು ರೈ, ಪ್ರಧಾನಿ ವಿರುದ್ದ ಕಿಡಿಕಾರಿದ್ದಾರೆ.
" ಕೇಂದ್ರ ಸರಕಾರದ ನೀತಿಯ ವಿರುದ್ದ ಸೆಟೆದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದಾರೆ. ಈಗ, ಬಿಜೆಪಿ ಮತ್ತು ಸಂಘ ಪರಿವಾರ ಅವರ ವಿರುದ್ದ ತಪ್ಪು ಅಭಿಪ್ರಾಯಗಳನ್ನು ಹರಡುತ್ತಿದೆ" ಎಂದು ರಮಾನಾಥ್ ರೈ ಬೇಸರ ವ್ಯಕ್ತಪಡಿಸಿದ್ದಾರೆ.
' ಓಟಿಗಾಗಿ ಇಮ್ರಾನ್ ಖಾನ್ ಭಾರತದ ವಿರುದ್ದ ಮೋದಿಯ ವಿರುದ್ದ ಮಾತನಾಡುತ್ತಾರೆ. ನಮ್ಮ ಪ್ರಧಾನಿಗಳು, ಅದನ್ನೇ ತಿರುಗಿ ಮಾಡುತ್ತಾರೆ. ಇವರಿಬ್ಬರ ನಡುವೆ ಏನೂ ವ್ಯತ್ಯಾಸವಿಲ್ಲ" ಎಂದು ರಮಾನಾಥ್ ರೈ ಹೇಳಿದ್ದಾರೆ.












Click it and Unblock the Notifications