ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬಂಟ್ವಾಳದ ನವೀನ್ ಭಟ್ ಗೆ 37ನೇ Rank
ಮಂಗಳೂರು : 2016ನೆ ಸಾಲಿನ ಕೇಂದ್ರ ಲೋಕಸೇವಾ ಆಯೋಗ ( ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಬಂಟ್ವಾಳದ ನವೀನ್ ಭಟ್ 37ನೇ ರ್ಯಾಂಕ್ ಗಳಿಸಿ ತೇರ್ಗಡೆಯಾಗಿದ್ದಾರೆ.
ಮೂಡಬಿದಿರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಪ್ರಾಥಮಿಕ, ಬಂಟ್ವಾಳ ತಾಲೂಕು ಮೊಡಂಕಾಪು ಇನ್‌ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢಶಾಲೆ ಮತ್ತು ಅಳಿಕೆ ಶ್ರೀಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿರುವ ನವೀನ್ ಭಟ್, 2009ನೇ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದರು. ಐಎಎಸ್ ಪರೀಕ್ಷೆ ಬರೆಯುವ ಕನಸನ್ನು ಆಗಲೇ ಅವರು ಬಿಚ್ಚಿಟ್ಟಿದ್ದರು.

ಮೂಲತಃ ಉಡುಪಿಯ ಎಲ್ಲೂರಿನವರಾಗಿರುವ ನವೀನ್, ಸದ್ಯ ಮಂಗಳೂರಿನ ಬಿ.ಸಿ.ರೋಡ್‌ನಲ್ಲಿ ನೆಲೆಸಿದ್ದಾರೆ. ಇವರ ತಂದೆ ಉಮೇಶ್ ಭಟ್ ಎಂಜಿನಿಯರ್ ಉದ್ಯೋಗದಲ್ಲಿದ್ದಾರೆ ಹಾಗೂ ತಾಯಿ ಶ್ರೀಕಲಾ.
"ನನ್ನ ಈ ಯಶಸ್ಸು ಹೆತ್ತವರಿಗೆ ಸಲ್ಲಬೇಕು. ದೇವರು ಕೊಟ್ಟ ಕೃಪೆಯಿಂದ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯಲು ಸಾಧ್ಯವಾಯಿತ್ತು. ನನ್ನ ಪೋಷಕರ ಶ್ರಮ, ಬೆಂಬಲ, ಹಿರಿಯರ ಹಾರೈಕೆ, ದೇವರ ಕೃಪೆ ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದ್ದು, ಎಲ್ಲರಿಗೂ ನನ್ನ ಕೃತಜ್ಞತೆಗಳು," ಎಂದು ನವೀನ್ 'ಒನ್ ಇಂಡಿಯಾ' ಕನ್ನಡ ಜೊತೆಗೆ ತಮ್ಮ ಸಂತಸವನ್ನು ಹಚ್ಚಿಕೊಂಡಿದ್ದಾರೆ.












Click it and Unblock the Notifications