ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುರತ್ಕಲ್‌ನಲ್ಲಿ ಅನ್ಯಧರ್ಮದ ವಿದ್ಯಾರ್ಥಿಗಳ ಮೇಲೆ ದಾಳಿ; ಆರು ಮಂದಿ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 16: ಕಡಲ ನಗರಿ ಮಂಗಳೂರಿನಲ್ಲಿ ಮತ್ತೊಮ್ಮೆ ಅನ್ಯಧರ್ಮದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಮೇಲೆ ದಾಳಿ ಪ್ರಕರಣ ನಡೆದಿದೆ. ಸುರತ್ಕಲ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ ಪುನರಾವರ್ತನೆಯಾಗಿದ್ದು, ಆರು ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರ ಹೊರವಲಯದ ಸುರತ್ಕಲ್‌ನಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಬೈಕ್‌ನಲ್ಲಿ ತೆರಳುತ್ತಿದ್ದ ಅನ್ಯಧರ್ಮದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಮೇಲೆ ಯುವಕರ ಗುಂಪು ದಾಳಿ ಮಾಡಿದೆ.

ಮಂಗಳೂರು ನಗರ ಹೊರವಲಯದ ಮುಕ್ಕಾ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಾದ, ಕೇರಳ ಮೂಲದ ಮಹಮ್ಮದ್ ಯಾಸೀನ್ ಮತ್ತು ಆತನ ಸ್ನೇಹಿತೆ ಅನ್ಸಿ ವಿನ್ನಿ ಡಯಾಸ್ ಎಂಬಾಕೆಯ ಮೇಲೆ ಆರೋಪಿಗಳು ದಾಳಿ ಮಾಡಿದ್ದಾರೆ.

ವಿದ್ಯಾರ್ಥಿನಿ ಅನ್ಸಿ ವಿನ್ನಿ ಡಯಾಸ್ ವಾಸವಿದ್ದ ಅಪಾರ್ಟ್‌ಮೆಂಟ್ ಖಾಲಿ ಮಾಡಿ ಬೇರೆ ಅಪಾರ್ಟ್‌ಮೆಂಟ್‌ಗೆ ತನ್ನ ರೂಂನ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದಳು. ಯುವತಿಗೆ ಆಕೆ ಸ್ನೇಹಿತ ಮಹಮ್ಮದ್ ಯಾಸೀನ್ ನೆರವಾಗಿದ್ದಾನೆ.

Mangaluru: Attacks On Heathen Students In Surathkal; Six Youths Arrest

ಎಲ್ಲಾ ವಸ್ತುಗಳನ್ನು ಶಿಫ್ಟ್ ಮಾಡಿದ ಮೇಲೆ ಮಹಮ್ಮದ್ ಯಾಸೀನ್ ಆಕೆಯನ್ನು ಅಪಾರ್ಟ್‌ಮೆಂಟ್‌ಗೆ ಡ್ರಾಪ್ ಮಾಡಲು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆರು ಮಂದಿ ಆರೋಪಿಗಳ ತಂಡ ಜೋಡಿ ಮೇಲೆ ಹಲ್ಲೆ ಮಾಡಿದೆ.

ಸುರತ್ಕಲ್‌ನ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್‌ಮೆಂಟ್ ಬಳಿ ಆರೋಪಿಗಳು ಯುವಕನ ಬೈಕ್ ಅಡ್ಡಗಟ್ಟಿ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಯುವತಿಗೂ ಧಮ್ಕಿ ಹಾಕಿದ್ದು, ಅನ್ಯಧರ್ಮದವನ ಜೊತೆ ಓಡಾಡುತ್ತೀಯಾ ಅಂತಾ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.

ಪ್ರಕರಣ ನಡೆದ ಬೆನ್ನಲ್ಲೇ ಸಂತ್ರಸ್ತರ ದೂರಿನ ಅನ್ವಯ ಸುರತ್ಕಲ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್ ಮತ್ತು ಸುಕೇಶ್ ಎಂದು ಗುರುತಿಸಲಾಗಿದೆ.

Mangaluru: Attacks On Heathen Students In Surathkal; Six Youths Arrest

ಘಟನೆ ನಡೆದ ತಕ್ಷಣ ಸೋಮವಾರ ತಡರಾತ್ರಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಸುರತ್ಕಲ್‌ನ ಘಟನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳ ಜೊತೆ ಮಾಹಿತಿ ಪಡೆದಿದ್ದಾರೆ.

ಮಾನಹಾನಿ ಪ್ರಯತ್ನ: ಯುವತಿ ದೂರು
ಆರೋಪಿಗಳು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಯುವತಿಯ ಮೈ ಮೇಲೆ ಕೈ ಹಾಕಿ ಮಾನಹಾನಿ ಮಾಡಲು ಯತ್ನಿಸಿರುವುದಾಗಿ ಯುವತಿ ದೂರಿದ್ದಾಳೆ. ಈ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

ಸುರತ್ಕಲ್‌ನಲ್ಲಿ ಅನ್ಯ ಧರ್ಮದ ಯುವಕ ಮತ್ತು ಯುವತಿಯರ ಮೇಲೆ ನಡೆದ ದಾಳಿಯ ಎರಡನೇ ಪ್ರಕರಣ ಇದಾಗಿದ್ದು, ಈ ಹಿಂದೆ ಸುರತ್ಕಲ್ ಟೋಲ್ ಗೇಟ್ ಬಳಿ ಹಿಂದೂ ಕಾರ್ಯಕರ್ತರು, ವಾಹನವೊಂದನ್ನು ತಡೆದು ವಾಹನದೊಳಗೆ ಹಿಂದೂ ಧರ್ಮದ ಯುವತಿಯ ಜೊತೆಗಿದ್ದ ಅನ್ಯಧರ್ಮದ ಯುವಕರಿಗೆ ಥಳಿಸಿದ್ದರು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಘಟನೆ ಸಂಬಂಧ ವಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದವು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೈತಿಕತೆಗೆ ಧಕ್ಕೆಯಾದಾಗ ಕ್ರಿಯೆ-ಪ್ರತಿಕ್ರಿಯೆ ಸಾಮಾನ್ಯ ಎಂದು ಹೇಳಿದ್ದರು. ಈ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ತಿಂಗಳೊಳಗೆ ಮತ್ತೆ ಸುರತ್ಕಲ್‌ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದ್ದು, ಸರ್ಕಾರ ವಿಪಕ್ಷಗಳಿಗೆ ಮತ್ತೆ ಆಹಾರವಾಗಿದೆ.

English summary
In Surathkal, there was once again an attack on a heathen student and young woman, Mangaluru police have arrested six accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X