ಮಂಗಳೂರಿನಲ್ಲಿ ವಿಜೃಂಭಣೆಯ ಶಾರದಾ ಮಹೋತ್ಸವ ಸಂಪನ್ನ
ಮಂಗಳೂರು, ಅ 24: ಜಿಲ್ಲೆಯ ಹೆಸರಾಂತ ಉತ್ಸವಗಳಲ್ಲಿ ಒಂದಾದ ಸಾರ್ವಜನಿಕ ಮಂಗಳೂರು ಶ್ರೀಶಾರದಾ ಮಹೋತ್ಸವದ 93ನೇ ವರ್ಷದ ಆಚರಣೆ ಎಂದಿನಂತೆ ಮಂಗಳೂರು ರಥಬೀದಿಯಲ್ಲಿರುವ ಶ್ರೀವೆಂಕಟರಮಣ ದೇವಳದ ವಠಾರದಲ್ಲಿ ಸಕಲ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿದವು.
ಮನ್ಮಥನಾಮ ಸಂವತ್ಸರದ ಪಂಚಮಿಯಿಂದ ಪ್ರಾರಂಭಗೊಂಡು ಏಕಾದಶಿ ಪ್ರಯುಕ್ತ ಶ್ರೀಶಾರದಾಮಾತೆಯ ವಿಗ್ರಹ ಪ್ರತಿಷ್ಠಾಪಿಸಿ ವಿಶೇಶ ಪೂಜಾ ವಿಧಿ - ವಿಧಾನದೊಂದಿಗೆ ಸಹಸಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಶನಿವಾರ (ಅ 24) ಸಾಯಂಕಾಲ ಪೂರ್ಣಾಲಂಕಾರಗೊಂಡ ಶ್ರೀಶಾರದಾಮಾತೆಯ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು ನಂತರ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಿತು.
ಉತ್ಸವ ಸ್ಥಾನದಿಂದ ಹೊರಟ ಮೆರವಣಿಗೆ ಶ್ರೀಮಹಾಮಾಯಿ ದೇವಸ್ಥಾನ, ಗದ್ದೆಕೇರಿ, ನವಭಾರತ ವೃತ್ತ, ಡೊಂಗರಕೇರಿ, ನ್ಯೂಚಿತ್ರಾ, ಬಸವನಗುಡಿ, ಜಾಮರಗಲ್ಲಿ ಮೂಲಕ ರಥಬೀದಿಯಾಗಿ ಸಾಗಿತು.

ನೂರಾರು ವೇಷಧಾರಿಗಳು ತಮ್ಮತಮ್ಮ ಹರಕೆಯ ಪ್ರಕಾರ ವಿವಿಧ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ವಿಶೇಷವಾಗಿ ಶಾರದಾ ಹುಲಿಗಳು ಶೋಭಾಯಾತ್ರೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದವು.
ಬಳಿಕ ಶ್ರೀಮಾತೆಯ ವಿಗ್ರಹವನ್ನು ಶ್ರೀಮಹಾಮಾಯ ತೀರ್ಥದಲ್ಲಿ ವಿಸರ್ಜನೆ ಮಾಡಲಾಯಿತು. (ಮಾಹಿತಿ, ಫೋಟೋ: ಮಂಜು ನೀರೇಶ್ವಾಲ್ಯ)












Click it and Unblock the Notifications