ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟ್ವಾಳ ಬಳಿ ವನ್ಯ ಪ್ರಾಣಿ ಬೇಟೆಗೆ ಯತ್ನ: ನಾಲ್ವರ ಬಂಧನ

|
Google Oneindia Kannada News

ಮಂಗಳೂರು, ಡಿಸೆಂಬರ್ 14: ಕಾಡಿಗೆ ಅಕ್ರಮ ಪ್ರವೇಶ ಮಾಡಿ ವನ್ಯಪ್ರಾಣಿ ಬೇಟೆಗೆ ಯತ್ನಿಸುತ್ತಿದ್ದ ಭೇಟೆಗಾರರನ್ನು ಬಂಟ್ವಾಳ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.

7 ಸರಗಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು7 ಸರಗಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು

ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಗ್ರಾಮದ ಕೊಡ್ಯಮಲೆ ಮೀಸಲು ಅರಣ್ಯದ ಮಯ್ಯಿದೊಟ್ಟು ಎಂಬಲ್ಲಿ ಕಾಡಿಗೆ ಅಕ್ರಮ ಪ್ರವೇಶ ಮಾಡಿ ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು 4 ಮಂದಿ ಬೇಟೆಗಾರರನ್ನು ಬಂಧಿಸಿದ್ದಾರೆ.

ಹದಿನೈದು ವರ್ಷದ ವಿದ್ಯಾರ್ಥಿಗೆ ನಗ್ನ ಚಿತ್ರ ಕಳಿಸಿದ 'ಮಾಜಿ ಸುಂದರಿ' ಬಂಧನಹದಿನೈದು ವರ್ಷದ ವಿದ್ಯಾರ್ಥಿಗೆ ನಗ್ನ ಚಿತ್ರ ಕಳಿಸಿದ 'ಮಾಜಿ ಸುಂದರಿ' ಬಂಧನ

4 arrested for hunting in Bantwal

ಬಂಧಿತ ಆರೋಪಿಗಳನ್ನು ಸರಪಾಡಿ ಗ್ರಾಮದ ಸುಲೈಮಾನ್, ಅಹಮ್ಮದ್ ಶರೀಫ್, ಝೈನುದ್ದೀನ್ ಹಾಗೂ ದೇವಸ್ಯ ಪಡೂರು ಗ್ರಾಮದ ಅಬ್ದುಲ್ ಕುಂಞ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಕೋವಿ ಹಾಗೂ ಅದರ ಪರಿಕರಗಳು, 1 ಚಾಕು ಹಾಗೂ 2 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಟ್ವಾಳ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

English summary
Four arrested for hunting in forest near Bantwal. Forest officials have seized singal barrel gun, knives and other things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X