ಬೆಂಗಳೂರು-ಮಂಗಳೂರು ನಡುವೆ ಏ.10 ರಿಂದ 3 ರೈಲು

ಮಂಗಳೂರು, ಏಪ್ರಿಲ್ 4; ಬೆಂಗಳೂರು- ಮಂಗಳೂರು ನಡುವೆ ಏಪ್ರಿಲ್ 10ರಿಂದ ಮೂರು ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸಲಿವೆ. ರಾಜಧಾನಿ ಮತ್ತು ಕರಾವಳಿ ನಡುವೆ ಸಂಚಾರ ನಡೆಸುವ ಜನರಿಗೆ ಇದು ಅನುಕೂಲವಾಗಲಿದೆ.

ಪ್ರತಿದಿನ 3 ಎಕ್ಸ್‌ಪ್ರೆಸ್ ರೈಲುಗಳು ಕುಣಿಗಲ್, ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗವಾಗಿ ಸಂಚಾರ ನಡೆಸಲಿವೆ. ಹಾಸನ-ಶ್ರವಣಬೆಳಗೊಳ-ಚಿಕ್ಕಬಣಾವರ ನಡುವೆ ನೂತನ ರೈಲು ಮಾರ್ಗ ನಿರ್ಮಾಣವಾಗಿತ್ತು. ಈಗ ಅದು ಉಪಯೋಗಕ್ಕೆ ಬರುತ್ತಿದೆ.

ಈ ಮೂರು ರೈಲುಗಳ ಜೊತೆ ಬೆಂಗಳೂರು-ಹಾಸನ ನಡುವೆ ಸಂಚರಿಸುತ್ತಿರುವ ಡೆಮು ರೈಲು ಜೊತೆಗೆ ಮತ್ತೆರಡು ರೈಲುಗಳು ಸಂಚಾರ ನಡೆಸಲಿವೆ. ಸೊಲ್ಹಾಪುರ-ಹಾಸನ ನಡುವೆ ಪ್ರತಿದಿನ ಸಂಚಾರ ನಡೆಸುವ ರೈಲು ಸಹ ಏಪ್ರಿಲ್ 10 ರಿಂದ ಆರಂಭವಾಗುತ್ತಿದೆ.

ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು-ಮಂಗಳೂರು ನಡುವೆ ಶ್ರವಣಬೆಳಗೊಳ ಮಾರ್ಗವಾಗಿ ರಾತ್ರಿ 2 ರೈಲು, ಬೆಳಗ್ಗೆ 1 ರೈಲು ಸಂಚಾರ ನಡೆಸಲಿದೆ. ಬೆಂಗಳೂರು, ಮಂಗಳೂರು, ಹಾಸನ ಜಿಲ್ಲೆಗಳ ನಡುವೆ ಸಂಚಾರ ನಡೆಸುವವರಿಗೆ ಸಹಾಯಕವಾಗಲಿದೆ.

ಮಂಗಳೂರು-ಬೆಂಗಳೂರು ರೈಲು

ಮಂಗಳೂರು-ಬೆಂಗಳೂರು ರೈಲು

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಮೆಜೆಸ್ಟಿಕ್‌)ನಿಂದ ಸಂಜೆ 6.40ಕ್ಕೆ ಹೊರಡುವ ರೈಲು 9.30ಕ್ಕೆ ಹಾಸನವನ್ನು ತಲುಪಲಿದೆ. ಮರುದಿನ ಬೆಳಗ್ಗೆ 8.35ಕ್ಕೆ ಕಾರವಾರ ತಲುಪಲಿದೆ. ಈ ರೈಲು ಮಂಗಳೂರು ನಿಲ್ದಾಣಕ್ಕೆ ಹೋಗದೆ ಪಡೀಲ್ ರೈಲು ನಿಲ್ದಾಣದಿಂದ ಕಾರವಾರಕ್ಕೆ ಸಂಚರಿಸಲಿದೆ. ಕಾರವಾರದಿಂದ ಸಂಜೆ 6.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್ ತಲುಪಲಿದೆ.

ಬೆಂಗಳೂರು-ಹಾಸನ-ಮಂಗಳೂರು

ಬೆಂಗಳೂರು-ಹಾಸನ-ಮಂಗಳೂರು

ಪ್ರತಿದಿನ ರಾತ್ರಿ 9.30ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಡುವ ರೈಲು. 12.30ಕ್ಕೆ ಹಾಸನ ತಲುಪಲಿದೆ. ಮರುದಿನ ಬೆಳಗ್ಗೆ 7.50ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರಿನಿಂದ ಬೆಳಗ್ಗೆ 8.50ಕ್ಕೆ ಹೊರಡುವ ರೈಲು ಸಂಜೆ 7.30ಕ್ಕೆ ಬೆಂಗಳೂರಿಗೆ ಬಂದು ತಲುಪಲಿದೆ.

ಯಶವಂತಪುರ-ಹಾಸನ-ಮಂಗಳೂರು

ಯಶವಂತಪುರ-ಹಾಸನ-ಮಂಗಳೂರು

ಬೆಂಗಳೂರು ನಗರದ ಯಶವಂತಪುರದಿಂದ ಪ್ರತಿದಿನ ಬೆಳಗ್ಗೆ 7.10ಕ್ಕೆ ಹೊರಡುವ ಎಕ್ಸ್‌ಪ್ರೆಸ್ ರೈಲು 10.05ಕ್ಕೆ ಹಾಸನ ತಲುಪಲಿದೆ. ಹಾಸನದಿಂದ ಹೊರಟ ರೈಲು ಸಂಜೆ 4.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ವಾರದಲ್ಲಿ 4 ದಿನ ಮಂಗಳೂರು ಜಂಕ್ಷನ್ ಮತ್ತು 3 ದಿನ ಕಾರವಾರದ ತನಕ ಈ ರೈಲು ಸಂಚಾರ ನಡೆಸಲಿದೆ.

Recommended Video

    Shreyas Iyer ಗೆ ಒಲಿದು ಬಂದ ಅದೃಷ್ಟ | Oneindia Kannada
    ವಾರದ 7 ದಿನವೂ ಸಂಚಾರ

    ವಾರದ 7 ದಿನವೂ ಸಂಚಾರ

    ಇಷ್ಟು ದಿನ ವಾರದಲ್ಲಿ 4 ದಿನ ಕುಣಿಗಲ್, ಶ್ರವಣಬೆಳಗೊಳ ಹಾಸನ ಮಾರ್ಗವಾಗಿ, ವಾರದಲ್ಲಿ ಮೂರು ದಿನ ಮಂಡ್ಯ, ಮೈಸೂರು, ಹಾಸನ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 10ರಿಂದ ವಾರದ 7 ದಿನವೂ ಬೆಂಗಳೂರಿನಿಂದ ಕುಣಿಗಲ್, ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಮಂಗಳೂರು ಸೆಂಟ್ರಲ್‌ಗೆ ಸಂಚಾರ ನಡೆಸಲಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+