ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಟು ನಿಷೇಧಕ್ಕೆ 5 ವರ್ಷ; ಮಂಗಳೂರಲ್ಲಿ ಒಂದು ಮುಕ್ಕಾಲು ಕೋಟಿ ಪತ್ತೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 19; 500 ಮತ್ತು 1 ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡು 5 ವರ್ಷ ಕಳೆದಿದೆ. ಆದರೆ ಇಷ್ಟು ವರ್ಷ ಆದರೂ ಸಹ ಇದೀಗ ಬೃಹತ್ ಮೊತ್ತದ ಅಮಾನ್ಯೀಕರಣಗೊಂಡ ನಗದು ಪತ್ತೆಯಾಗಿದೆ. ಈ ನೋಟಿನ ಕಂತೆಗಳಿಗೆ ಬ್ಯಾಂಕ್‌ನಲ್ಲಿ ವ್ಯಾಲ್ಯೂ ಇದೆ ಎಂದು ಹೇಳಿ ವಂಚಿಸಲು ರೆಡಿಯಾಗಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.

2016ರ ನವೆಂಬರ್ 8ರಂದು 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳನ್ನು ಭಾರತ ಸರ್ಕಾರ ಅಮಾನ್ಯೀಕರಣಗೊಳಿಸಿತು. ಬಳಿಕ ಒಂದಷ್ಟು ಸಮಯದಲ್ಲಿ ಹಳೆಯ ನೋಟು ಬದಲಾಯಿಸಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು.

 ನೋಟು ಅಮಾನ್ಯೀಕರಣವಾಗಿ 5 ವರ್ಷ: ಇಲ್ಲಿದೆ ನೋಡಿ Memes ನೋಟು ಅಮಾನ್ಯೀಕರಣವಾಗಿ 5 ವರ್ಷ: ಇಲ್ಲಿದೆ ನೋಡಿ Memes

ಆದರೆ ಬಳಿಕ ಈ ಹಳೆಯ 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ಘೋಷಿಸಲಾಯಿತು. ಆದರೆ ಈ ಪ್ರಕ್ರಿಯೆ ನಡೆದು 5 ವರ್ಷ ಆದರೂ ಸಹ ಕಡಲನಗರಿ ಮಂಗಳೂರಿನಲ್ಲಿ ನಿಷೇಧಗೊಂಡ 1 ಕೋಟಿ 92 ಲಕ್ಷದ 50 ಸಾವಿರ ಮೌಲ್ಯದ 500 ಹಾಗೂ 1000 ಮುಖಬೆಲೆಯ ನಗದು ಪತ್ತೆಯಾಗಿದೆ.

ಕಳೆದ 2 ವರ್ಷಗಳಿಂದ 2 ಸಾವಿರ ಮುಖಬೆಲೆಯ ನೋಟು ಮುದ್ರಿಸಿಲ್ಲ: ಕೇಂದ್ರ ಸರ್ಕಾರ ಕಳೆದ 2 ವರ್ಷಗಳಿಂದ 2 ಸಾವಿರ ಮುಖಬೆಲೆಯ ನೋಟು ಮುದ್ರಿಸಿಲ್ಲ: ಕೇಂದ್ರ ಸರ್ಕಾರ

 1 Crore Lakh Old Notes Found In Mangaluru

ಈ ನೋಟುಗಳನ್ನು ಇನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಕಣ್ಣೂರಿನ ಮೋರುಗುಡ್ಡೆ ನಿವಾಸಿ ಜುಬೈರ್ ಹಮ್ಮಬ್ಬ, ಮಂಗಳೂರಿನ ಪಡೀಲ್‌ನ ವೀರನಗರ ನಿವಾಸಿ ದೀಪಕ್ ಕುಮಾರ್, ಮಂಗಳೂರಿನ ಬಜ್ಪೆ ನಿವಾಸಿ ಅಬ್ದುಲ್ ನಾಸೀರ್ ಎಂದು ಗುರುತಿಸಲಾಗಿದೆ.

 ಡಿಜಿಟಲ್ ಯುಗದಲ್ಲಿ ಜನರನ್ನು ಸೆಳೆದ ಹಳೆಯ ನೋಟು, ನಾಣ್ಯ ಡಿಜಿಟಲ್ ಯುಗದಲ್ಲಿ ಜನರನ್ನು ಸೆಳೆದ ಹಳೆಯ ನೋಟು, ನಾಣ್ಯ

ಬಂಧಿತರನ್ನು ಪ್ರಾಥಮಿಕ ವಿಚಾರಣೆ ನಡೆಸಿದಾಗ ಚಿತ್ರದುರ್ಗ, ಶಿವಮೊಗ್ಗದಿಂದ ಈ ಹಣವನ್ನು ತಂದಿರುವುದಾಗಿ ಹೇಳಿದ್ದಾರೆ. ಈ ಹಣವನ್ನು ಮಂಗಳೂರು ಮೂಲದ ಕೆಲ ಮಂದಿಗೆ ನೀಡುವ ಪ್ಲ್ಯಾನ್‌ ಸಹ ಮಾಡಿಕೊಂಡಿದ್ದರು.

ವಿಶೇಷ ಅವಕಾಶದ ಮೂಲಕ ಬ್ಯಾನ್ ಆದ ಈ ನೋಟುಗಳನ್ನು ಬ್ಯಾಂಕ್‌ಗಳಿಗೆ ನೀಡಿದರೆ ಇದರ 50 ಶೇಕಡಾ ವ್ಯಾಲ್ಯೂ ಹಣ ಕೊಡ್ತಾರೆ. ನಾವು ಒಂದೇ ಸಾರಿ ಇಷ್ಟು ಹಣ ಬ್ಯಾಂಕ್‌ಗೆ ನೀಡಿದರೆ ಬ್ಯಾಂಕ್‌ ಅಧಿಕಾರಿಗಳಿಗೆ ಸಂಶಯ ಬರುತ್ತದೆ.

ಹೀಗಾಗಿ ಇದರ 20 ಶೇಕಡ ಮೌಲ್ಯದ ಹಣವನ್ನು ನಮಗೆ ಕೊಟ್ಟರೆ ಈ ನೋಟುಗಳನ್ನು ನಿಮಗೆ ನೀಡುವುದಾಗಿ ಜನರನ್ನು ವಂಚನೆ ಮಾಡುವ ಪ್ಲ್ಯಾನ್‌ ಅನ್ನು ಈ ತಂಡ ಮಾಡಿಕೊಂಡಿತ್ತು. ಆದರೆ ಈ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದರಿಂದ ಪೊಲೀಸರು ವಾಹನ, ನಗದು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ.

ಗುರುವಾರ ರಾತ್ರಿ ಪೊಲೀಸರು ತಪಾಸಣಾ ನಿರತರಾಗಿದ್ದಾಗ ಕೆಎ 03, ಎಮ್-ಪಿ-0300 ನಂಬರ್‌ನ ಇನ್ನೋವಾ ಕಾರ್ ಅನ್ನು ಪರಿಶೀಲಿಸಿದಾಗ ಆರೋಪಿಗಳ ಗೊಂದಲಕ್ಕೊಳಗಾಗಿದ್ದರಿಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಕಾರಿನಲ್ಲಿ ನೋಟಿನ ಕಂತೆಗಳು ಪತ್ತೆಯಾಗಿದೆ.

ಅಮಾನ್ಯೀಕರಣಗೊಂಡ ಈ ನೋಟುಗಳನ್ನು ಪಡೆದರೆ ಅಥವಾ ವರ್ಗಾವಣೆ ಮಾಡಿದರೆ ಅಂಥವರಿಗೆ ಶಿಕ್ಷೆ ನೀಡುವುದಕ್ಕೆಂದೆ 2017ರಲ್ಲಿ ಕಾಯಿದೆಯೊಂದನ್ನು ತರಲಾಗಿದೆ. ಇದರ ಪ್ರಕಾರ ವಶಪಡಿಸಿಕೊಂಡ ಮೊತ್ತದ ಐದು ಪಟ್ಟು ಹೆಚ್ಚು ದಂಡ ವಿಧಿಸುವ ಅವಕಾಶವಿದೆ.

ಈ ಪ್ರಕರಣದಲ್ಲಿ 9 ಕೋಟಿ 60 ಲಕ್ಷ ದಂಡ ವಿಧಿಸುವ ಅವಕಾಶವು ಇದೆ. ಒಟ್ಟಿನಲ್ಲಿ ಅಮಾನ್ಯೀಕರಣಗೊಂಡ ನೋಟುಗಳಿಗೆ ಯಾವುದೇ ವ್ಯಾಲ್ಯೂ ಇಲ್ಲ ಎಂಬುದನ್ನು ಜನ ತಿಳಿದುಕೊಂಡು ಎಚ್ಚರಿಕೆಯಿಂದ ಇರಬೇಕಾಗಿದೆ.

English summary
1 Crore 92 lakh 500 and 1000 demonetisation note found in Mangaluru. Three persons arrested in connection with the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X