ಮಂಗಳೂರಿನ ಎಂಡೋಸಲ್ಫಾನ್ ಪೀಡಿತನ ಅಪೂರ್ವ ಸಾಧನೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 12 : ಎಂಡೋ ಪೀಡಿತನಾಗಿ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ಮಂಗಳೂರಿನ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರದೀಪ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 536 (ಶೇ.89.33) ಅಂಕಗಳಿಸಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ.

ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಡ ಪುತ್ತೂರು ತಾಲೂಕು ಗೋಳಿತೊಟ್ಟು ಗ್ರಾಮದ ಶಾಂತಿನಗರ ಬರೆಮೇಲ್ ನಿವಾಸಿ ಜನಾರ್ದನ ಗೌಡ ಮತ್ತು ಬೇಬಿ ದಂಪತಿಯ ಹಿರಿಯ ಪುತ್ರನಾಗಿರುವ ಪ್ರದೀಪ್ ಗೆ ದೇಹದ ಅರ್ಧಭಾಗ ಸ್ವಾಧೀನ ಕಳೆದುಕೊಂಡಿದೆ.[ಕರ್ನಾಟಕ ಪಿಯುಸಿ ಫಲಿತಾಂಶ: ಇವರ ಫಲಿತಾಂಶ ಕಂಡು ಅಂಧತ್ವವೂ ನಾಚಿತು!]

Karnataka 2nd PUC results: an endosulfan affected boys achievement

ಎಂಡೋ ಸಲ್ಫಾನ್ ಪೀಡಿತನಾಗಿರುವ ಈತ ಸೊಂಟದಿಂದ ಕೆಳಗೆ ಸಂಪೂರ್ಣ ಬಲ ಕಳೆದುಕೊಂಡಿದ್ದು, ಪರಾವಲಂಬಿಯಾಗಿ ಬದುಕಬೇಕಾದ ಅನಿವಾರ್ಯ ಸ್ಥಿತಿಲಯಲ್ಲಿದ್ದಾನೆ. ಇಷ್ಟೆಲ್ಲ ಅಸಹಾಯಕತೆಯ ನಡುವೆಯೂ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 86, ಇಂಗ್ಲೀಷಿನಲ್ಲಿ 82, ಇತಿಹಾಸ 91, ಅರ್ಥಶಾಸ್ತ್ರ 85, ಬಿಸ್ನೆಸ್ ಸ್ಟಡಿ (ವ್ಯವಹಾರ ಅಧ್ಯಯನ) 96, ಅಕೌಂಟೆನ್ಸಿಯಲ್ಲಿ (ಲೆಕ್ಕಶಾಸ್ತ್ರ) 96 ಅಂಕಗಳನ್ನು ಪಡೆದು ಶೇ. 86.33 ಫಲಿತಾಂಶ ಪಡೆದು ಉಳಿದ ಮಕ್ಕಳಿಗೆ ಆದರ್ಶವಾಗಿದ್ದಾನೆ.

Karnataka 2nd PUC results: an endosulfan affected boys achievement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An endosulfan affected boy from Mangaluruhas scored 89.33% in 2nd PUC examination. The results for karnataka 2nd PUC examinations announced yesterday (May 11th)
Please Wait while comments are loading...