ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ಕೈದು ತಿಂಗಳಿಗಾಗಿ ಚುನಾವಣೆ ಯಾಕೆ ಬೇಕಿತ್ತು: ಅಂಬರೀಶ್

|
Google Oneindia Kannada News

Recommended Video

Mandya By-elections 2018 : ಇಂದಿನ ಉಪಚುನಾವಣೆ ಬಗ್ಗೆ ಅಂಬರೀಷ್ ಹೇಳಿದ್ದು ಹೀಗೆ | Oneindia Kannada

ಮಂಡ್ಯ, ನವೆಂಬರ್ 3: ಲೋಕಸಭಾ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಇದೀಗ ಉಪ ಚುನಾವಣೆಯ ಅಗತ್ಯವಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ನಟ ಅಂಬರೀಶ್ ಹೇಳಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಶನಿವಾರ ಮಂಡ್ಯದಲ್ಲಿ ಮತ ಚಲಾಯಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಬಾಕಿ ಇದೆ ಹೀಗಿರುವಾಗ ಇದರ ಮಧ್ಯೆ ಇನ್ನೊಂದು ಚುನಾವಣೆಯ ಅಗತ್ಯವಿರಲಿಲ್ಲ. ಈ ಚುನಾವಣೆಯಲ್ಲಿ ಉತ್ಸಾಹವೇ ಇಲ್ಲ ಎಂದರು.

ಶಿವಮೊಗ್ಗದಲ್ಲಿ ಶೇ.101ರಷ್ಟು ರಾಘವೇಂದ್ರ ಗೆಲ್ಲುತ್ತಾರೆ : ಯಡಿಯೂರಪ್ಪ ಶಿವಮೊಗ್ಗದಲ್ಲಿ ಶೇ.101ರಷ್ಟು ರಾಘವೇಂದ್ರ ಗೆಲ್ಲುತ್ತಾರೆ : ಯಡಿಯೂರಪ್ಪ

ಐದು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷವೇ ಗೆಲ್ಲಲಿದೆ, ರಾಮನಗರ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ವಿಚಾರದ ಕುರಿತು ಮಾತನಾಡಿ ಈ ಬೆಳವಣಿಗೆ ಸರಿ ಇಲ್ಲ, ಆಂತರಿಕವಾಗಿ ಏನಾಗಿದೆ, ಮಾತುಕತೆ ಏನು ಎಂಬುದು ನನಗೆ ಗೊತ್ತಿಲ್ಲ, ಜೆಡಿಎಸ್ ಅಭ್ಯರ್ಥಿ ಐದು ಲಕ್ಷಕ್ಕೂ ಹೆಚ್ಚು ಮತಪಡೆಯಲಿದ್ದಾರೆ. ನನ್ನ ಆರೋಗ್ಯ ಸ್ಥಿತಿ ಸರಿ ಇಲ್ಲದ ಕಾರಣ ವಿಶ್ರಾಂತಿ ಪಡೆಯುತ್ತಿದ್ದೇನೆ ಇಲ್ಲವಾದಲ್ಲಿ ಖಂಡಿತವಾಗಿಯೂ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದೆ ಎಂದರು.

ಸುಮಲತಾ ಅಂಬರೀಶ್ ಮತ ಚಲಾಯಿಸಿಲ್ಲ

ಸುಮಲತಾ ಅಂಬರೀಶ್ ಮತ ಚಲಾಯಿಸಿಲ್ಲ

ಅಂಬರೀಶ್ ಪತ್ನಿ ಸುಮಲತಾ ಮತ ಚಲಾವಣೆಗೆ ಗೈರಾಗಿದ್ದರು. ಮದ್ದೂರು ತಾಲೂಕು ದೊಡ್ಡರಸಿನಕೆರೆಯಲ್ಲಿ ಅಂಬರೀಶ್ ಮತದಾನ ಮಾಡಿದರು ಆದರೆ ಸುಮಲತಾ ಬಂದಿರಲಿಲ್ಲ.

ರಾಮನಗರ ಬಿಜೆಪಿಗೆ ಮತ್ತೆ ಶಾಕ್ ಕೊಟ್ಟ ಪಲಾಯನ ಅಭ್ಯರ್ಥಿ ಚಂದ್ರಶೇಖರ್ ರಾಮನಗರ ಬಿಜೆಪಿಗೆ ಮತ್ತೆ ಶಾಕ್ ಕೊಟ್ಟ ಪಲಾಯನ ಅಭ್ಯರ್ಥಿ ಚಂದ್ರಶೇಖರ್

ಅಂಬಿರೀಶ್ ಗೆ ಬೆಳಕಿನ ಸಮಸ್ಯೆ ಎದುರಾಯಿತು

ಅಂಬಿರೀಶ್ ಗೆ ಬೆಳಕಿನ ಸಮಸ್ಯೆ ಎದುರಾಯಿತು

ಮಾಜಿ ಸಚಿವ, ನಟ ಅಂಬರೀಶ್ ಅವರು ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಮತ ಚಲಾಯಿಸಲು ತೆರಳಿದ್ದರು, ಆದರೆ ಆ ಸಮಯದಲ್ಲಿ ಬೆಳಕಿನ ಸಮಸ್ಯೆ ಎದುರಾಯಿತು ಬಳಿಕ ಟಾರ್ಚ್ ತರಿಸಿಕೊಂಡು ಮತದಾನ ಮಾಡಿದರು.

ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಹೆಸರು ಮತಯಂತ್ರದಲ್ಲಿ ಇರುತ್ತೆ! ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಹೆಸರು ಮತಯಂತ್ರದಲ್ಲಿ ಇರುತ್ತೆ!

ಸಚಿವ ಡಿಸಿ ತಮ್ಮಣ್ಣ ಮತದಾನ

ಸಚಿವ ಡಿಸಿ ತಮ್ಮಣ್ಣ ಮತದಾನ

ಅಂಬರೀಶ್ ಅವರಿಗೆ ಡಿಸಿ ತಮ್ಮಣ್ಣ ಸಾಥ್ ನೀಡಿದರು. ದೊಡ್ಡರಸಿನಕೆರೆಯಲ್ಲಿ ಅಂಬರೀಶ್ ಮತದಾನ ಮಾಡಿದರೆ, ಮತಗಟ್ಟೆ ಸಂಖ್ಯೆ 166ರಲ್ಲಿ ಸಚಿವ ಡಿಸಿ ತಮ್ಮಣ್ಣ ಮತ ಚಲಾಯಿಸಿದರು.

ಒಟ್ಟು ಐದು ಕ್ಷೇತ್ರಗಳಿಗೆ ಉಪ ಚುನಾವಣೆ

ಒಟ್ಟು ಐದು ಕ್ಷೇತ್ರಗಳಿಗೆ ಉಪ ಚುನಾವಣೆ

ಒಟ್ಟು ಐದು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಶಿವಮೊಗ್ಗ, ಬಳ್ಳಾರಿ , ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

English summary
Former minister Amabreesh opines that there was no need of elections for MP seats in Karnataka. Because there is just 3or 4 months duration for this members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X