ಡಿ.ಸಿ.ತಮ್ಮಣ್ಣ ಹೇಳಿಕೆಗೆ ತಿರುಗೇಟು ಕೊಟ್ಟ ಸುಮಲತಾ
Recommended Video

ಮಂಡ್ಯ, ಮಾರ್ಚ್ 07 : 'ಅತಿಥಿ ಸತ್ಕಾರವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಅಂಬಿ ಕುಟುಂಬಕ್ಕೆ ಹೇಳಿ ಕೊಡುವುದು ಬೇಕಾಗಿಲ್ಲ' ಎಂದು ಸುಮಲತಾ ಅಂಬರೀಶ್ ಅವರು ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಗುರುವಾರ ಮಾತನಾಡಿದ ಸುಮಲತಾ ಅಂಬರೀಶ್ ಅವರು, 'ಅಂಬರೀಶ್ ಅವರ ನೆರವು ಪಡೆದು ಯಾರೆಲ್ಲಾ ಏನು ಮಾಡಿದ್ದರು ಎಂಬುದು ತಿಳಿದಿದೆ. ಯಾರು ಏನು ಮಾಡಿಕೊಂಡಿದ್ದಾರೆ ಎಂಬುದು ತಿಳಿದಿದೆ' ಎಂದರು.
'ಅಂಬರೀಶ್ ಇದ್ದಾಗ ಯಾರು ನಮ್ಮ ಮನೆಗೆ ಬರುತ್ತಿದ್ದರು. ಯಾರ ಮನೆಗೆ ನಾವು ಹೋಗುತ್ತಿದ್ದೆವು ನನಗೆ ಗೊತ್ತಿದೆ. ನಮ್ಮಲ್ಲಿ ತಪ್ಪಿದ್ದರೆ ಸಂಬಂಧಿಕರಾಗಿ ನಮ್ಮ ಮನೆಗೆ ಬಂದು ಹೇಳಬಹುದಿತ್ತು' ಎಂದು ಬೇಸರ ವ್ಯಕ್ತಪಡಿಸಿದರು.

'ತಮ್ಮಣ್ಣ ಅಂಬಿಗೆ ಅಣ್ಣ ಆಗಬೇಕು, ಅಂದರೆ ನಾನವರ ಸೊಸೆ ಅಲ್ಲವೇ. ನಾವು ಅದೆಷ್ಟು ಬಾರಿ ಅವರ ಮನೆಗೆ ಹೋಗಿ ಊಟ ಮಾಡಿದ್ದೇವೆ. ಈ ತರಹ ಮಾತನಾಡುವ ಸಂಸ್ಕೃತಿ ನಮ್ಮದಲ್ಲ' ಎಂದು ಸುಮಲತಾ ಅಂಬರೀಶ್ ಅವರು ಹೇಳಿದರು.
ಮದ್ದೂರಿನಲ್ಲಿ ಗುರುವಾರ ಮಾತಾಡಿದ್ದ ಡಿ.ಸಿ.ತಮ್ಮಣ್ಣ ಅವರು, 'ಅಂಬರೀಶ್ ಅವರು ಶಾಸಕರು, ಸಚಿವರು ಆಗಿದ್ದಾಗ ಅವರ ಮನೆಗೆ ಹೋದ ಜನಸಾಮಾನ್ಯರನ್ನು ಈಯಮ್ಮ ಮಾತನಾಡಿಸಿದ್ದಾರೆಯೇ?. ಎಷ್ಟು ಜನಕ್ಕೆ ಒಂದು ಲೋಕ ಕುಡಿಯಲು ನೀರು ಕೊಟ್ಟಿದ್ದಾರೆ?' ಎಂದು ಪ್ರಶ್ನಿಸಿದ್ದರು.
'ಮಂಡ್ಯ ಜಲ್ಲೆಯ ಜನರು ಬಣ್ಣದವರ ಮಾತಿಗೆ ಬೆರಗಾಗುವುದು ಬೇಡ. ನಮ್ಮ ಕ್ಷೇತ್ರದ ಹಣೆ ಬರಹವನ್ನು ಬರೆಯುವವರು ನೀವು. ರೈತರ ಮಗನಾದ ನಿಖಿಲ್‌ರನ್ನು ಈ ಬಾರಿ ಆಯ್ಕೆ ಮಾಡುವಂತೆ' ಡಿ.ಸಿ.ತಮ್ಮಣ್ಣ ಮನವಿ ಮಾಡಿದ್ದರು.












Click it and Unblock the Notifications