ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಡೆತ್ತುಗಳ ವಿರುದ್ಧ ಮತ್ತೆ ಸಮರ ಸಾರಿದ ಎಲ್‌ಆರ್ ಶಿವರಾಮೇಗೌಡ

|
Google Oneindia Kannada News

ಮಂಡ್ಯ, ಅಕ್ಟೋಬರ್ 12: 'ಜೋಡೆತ್ತುಗಳ ನಟನೆ ಸಿನಿಮಾಗಷ್ಟೇ ಸೀಮಿತವಾಗಿರಲಿ' ಎಂದು ನಾಗಮಂಗಲ ಮಾಜಿ ಸಂಸದ ಎಲ್‌ಆರ್ ಶಿವರಾಮೇಗೌಡ ಮತ್ತೆ ನಟರನ್ನು ಕೆಣಕಿದ್ದಾರೆ.

ದರ್ಶನ್, ಯಶ್ ನಟನೆ ಸಿನಿಮಾರಂಗಕ್ಕೆ ಸೀಮಿತವಾಗಿರಲಿ. ಸಿನಿಮಾದವರು ರಾಜಕೀಯಕ್ಕೆ ಬೇಡ. ಸಿನಿಮಾದವರ ಹಣೆಬರಹಗಳು ನನಗೆ ಗೊತ್ತಿದೆ. ಸಿನಿಮಾ ರಂಗದವರನ್ನ ಸಿನಿಮಾದಲ್ಲಿ ನೋಡೋದಕ್ಕಷ್ಟೇ ಚೆಂದ. ರಾಜಕೀಯದಲ್ಲಿ ನೋಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ಕೆ.ಆರ್.ಪೇಟೆಗೆ ಹೋದರೆ ಬಿಜೆಪಿ ಜೊತೆ, ನಾಗಮಂಗಲಕ್ಕೆ ಬಂದರೆ ಕಾಂಗ್ರೆಸ್ ಜೊತೆ ಹೋಗುತ್ತಾರೆ, ತಮ್ಮದು ಯಾವ ಪಕ್ಷ ಎಂದು ತೀರ್ಮಾನ ಮಾಡಲಿ. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಅವರು ಸ್ವಾಭಿಮಾನದ ಹೆಸರಿನಲ್ಲಿ ಹೋರಾಡಿದ್ದಾರೆ.

ಬಿಜೆಪಿ ಸೇರ್ತಾರಾ ಪಕ್ಷೇತರ ಸಂಸದೆ ಸುಮಲತಾ? ಬಿಜೆಪಿ ಸೇರ್ತಾರಾ ಪಕ್ಷೇತರ ಸಂಸದೆ ಸುಮಲತಾ?

ಈಗ ಸುಮಲತಾ ಅವರು ಯಾರಿಗೆ ಎಷ್ಟೆಷ್ಟು ಪಾಲು ಕೊಡ್ತಾರೆ ನೋಡಬೇಕು. ಚುನಾವಣೆಯಲ್ಲಿ ಜೆಡಿಎಸ್ ನವರು ನನ್ನ ಪರ ಕೆಲಸ ಮಾಡಿದ್ದಾರೆ ಕರೆದರೆ ಜೆಡಿಎಸ್ ಕಚೇರಿಗೂ ಹೋಗುತ್ತೇನೆ ಎಂಬ ಸುಮಲತಾ ಹೇಳಿಕೆ ವಿಚಾರ ಕುರಿತು ಮಾತನಾಡಿರುವ ಅವರು, ವೋಟ್ ಹಾಕಿದ್ರೆ ಅವರಮನೆಯಲ್ಲಿ ಹೋಗಿ ಊಟ ಮಾಡಲಿ. ನಾವು ಜೆಡಿಎಸ್ ಕಚೇರಿಗೆ ಕರೆಯುವುದಿಲ್ಲ. ಅವರನ್ನು ಕರೆದುಕೊಳ್ಳಲು ಕಾಯ್ದುಕುಳಿತಿರುವವರು ಕಾಂಗ್ರೆಸ್, ಬಿಜೆಪಿಯವರು ಎಂದು ಹೇಳಿದರು.

ಯಶ್, ದರ್ಶನ್ ಸಿನಿಮಾಕ್ಕಷ್ಟೇ ಸೀಮಿತವಾಗಿರಲಿ

ಯಶ್, ದರ್ಶನ್ ಸಿನಿಮಾಕ್ಕಷ್ಟೇ ಸೀಮಿತವಾಗಿರಲಿ

ಅಂಬರೀಶ್ ಅವರನ್ನು ಚುನಾವಣೆಯಲ್ಲಿ ನಾವು ಬಳಸಿಕೊಂಡಿದ್ದೇವೆ. ಊರೂರು ತಿರುಗಿ ತಮಟೆ ಬಾರಿಸಿಕೊಂಡು ಬರುತ್ತಿದ್ದ ಅಂಬಿ ಜನರಿಗೆ ನಾವಿದ್ದೀವಿ. ನಿಮ್ಮ ಎಲ್ಲಾ ಕಷ್ಟ ನಿವಾರಣೆ ಮಾಡ್ತೀವಿ ಎಂದು ಎಲ್ಲೂ ಹೇಳಿರಲಿಲ್ಲ.

ಆದ್ರೆ ಈ ಇಬ್ಬರು ನಟರು ಹಾಗೆ ಹೇಳಿದ್ದರು ಹಾಗಾಗಿ ನಾನೂ ಹಾಗೆ ಹೇಳಿದ್ದೆ, ದರ್ಶನ್, ಯಶ್ ನಟನೆ ಸಿನೆಮಾ, ಚಿತ್ರರಂಗಕ್ಕಷ್ಟೇ ಸೀಮಿತವಾಗಿರಲಿ. ಅವರು ರಾಜಕೀಯಕ್ಕೆ ಬರುವುದು ಬೇಡ.

ಸಿನಿಮಾದವರಿಗೆ ಗೌರವ ನೀಡೋಣ

ಸಿನಿಮಾದವರಿಗೆ ಗೌರವ ನೀಡೋಣ

ಸಿನಿಮಾದವರಿಗೆ ಗೌರವ ನೀಡೋಣ. ಅವರ ಸಿನೆಮಾವನ್ನ ದುಡ್ಡು ಕೊಟ್ಟು ನೋಡೋಣ. ಕಡೆಗೆ ನಿಮ್ಮ ಕಷ್ಟಕ್ಕೆ ಬರೋದು ಸಿನೆಮಾದವರಲ್ಲ. ನಾವೇ ಅನ್ನೋದು ಜನರಿಗೆ ಅರ್ಥವಾಗಬೇಕು. ನಾಗಮಂಗಲದಲ್ಲಿ ಜೆಡಿಎಸ್ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.

ನಾನು ಯಾವ ಪಕ್ಷಕ್ಕೂ ಸೇರಲ್ಲ, ನನಗೆ ಯಾವ ಹೈಕಮಾಂಡ್ ಇಲ್ಲ ಎಂದ ಸುಮಲತಾನಾನು ಯಾವ ಪಕ್ಷಕ್ಕೂ ಸೇರಲ್ಲ, ನನಗೆ ಯಾವ ಹೈಕಮಾಂಡ್ ಇಲ್ಲ ಎಂದ ಸುಮಲತಾ

ಸುಮಲತಾ ಹೆಸರು ಹೇಳಿ ರಾಜಕೀಯ ಮಾಡುವ ದುಸ್ಥಿತಿ ಬಂದಿಲ್ಲ

ಸುಮಲತಾ ಹೆಸರು ಹೇಳಿ ರಾಜಕೀಯ ಮಾಡುವ ದುಸ್ಥಿತಿ ಬಂದಿಲ್ಲ

ಸುಮಲತಾ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ದುಸ್ಥಿತಿ ಬಂದಿಲ್ಲ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿರುಗೇಟು.

ಸುಮಲತಾ ಅವರು ರಾಜಕೀಯಕ್ಕೆ ಬರುವುದಕ್ಕೂ ಮುಂಚೆ ಚೆನ್ನಾಗಿ ರಾಜಕೀಯ ಮಾಡಿದ್ದೇವೆ.

ರೈತರು ಸಮಸ್ಯೆ ಹೇಳಿಕೊಂಡಾಗ ಜನರ ಮುಂದೆ ವಿಚಾರ ಇಟ್ಟಿದ್ದೇನೆ. ಸುಮಲತಾ ಅವರ ವೈಯಕ್ತಿಕ ವಿಚಾರ ಹೇಳಿಲ್ಲ. ಕ್ರಮ ತೆಗೆದುಕೊಳ್ಳಲಿ ಎಂದಿದ್ದೇನೆ. ಅದಕ್ಕೆ ಬಾಷಣ ಮಾಡಿ ಹೋಗ್ತಾರೆ ಎಂದಿದ್ದಾರೆ.

ಸುಮಲತಾ ಭಾಷಣ ಮಾಡದೆ ಗುದ್ದಲಿಯಲ್ಲಿ ಅಗೆಯುತ್ತಿದ್ದಾರಾ?

ಸುಮಲತಾ ಭಾಷಣ ಮಾಡದೆ ಗುದ್ದಲಿಯಲ್ಲಿ ಅಗೆಯುತ್ತಿದ್ದಾರಾ?

ಸುಮಲತಾ ಅವರು ಭಾಷಣ ಮಾಡದೆ ಗುದ್ದಲಿ ತೆಗೆದುಕೊಂಡು ಅಗೆಯುತ್ತಿದ್ದಾರಾ?. ತಮ್ಮ ಹೆಸರೇಳದಿದ್ದರೆ ಕೆಲವರಿಗೆ ಮಾರ್ಕೆಟ್ ಕಡಿಮೆಯಾಗುತ್ತದೆ ಎಂಬ ಸುಮಲತಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಮೈಷುಗರ್ ಕಾರ್ಖಾನೆಗೆ ಹಣ ನೀಡಿದರೆ ಅಧ್ಯಕ್ಷರ ಜೇಬು ತುಂಬುತ್ತೆ.

ಹಳೆಯ ಕಾರ್ಖಾನೆಗೆ ಹಣ ನೀಡುವ ಬದಲು, ಹೊಸ ಕಾರ್ಖಾನೆ ಮಾಡುವಂತೆ ಒತ್ತಾಯಿಸಿ. ಹೊಸ ಕಾರ್ಖಾನೆಗೆ ಕುಮಾರಸ್ವಾಮಿ ಸಂಕಲ್ಪದಂತೆ ಯಡಿಯೂರಪ್ಪ ಅವರು ತೀರ್ಮಾನ ತೆಗೆದುಕೊಳ್ಳಬೇಕು. ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಹಿಂದಿನ ಸರ್ಕಾರವೇ ಕಾರಣ ಎಂಬ ಸುಮಲತಾ ಆರೋಪ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.

ನಮ್ಮಿಂದ ತಪ್ಪಾಗಿದೆ, ನೀವು ಸಮಸ್ಯೆ ಬಗೆಹರಿಸಿ

ನಮ್ಮಿಂದ ತಪ್ಪಾಗಿದೆ, ನೀವು ಸಮಸ್ಯೆ ಬಗೆಹರಿಸಿ

ನಮ್ಮಿಂದ ತಪ್ಪಾಗಿದೆ. ನೀವು ಅಧಿಕಾರದಲ್ಲಿದ್ದೀರಿ ಸಮಸ್ಯೆ ಬಗೆಹರಿಸಿ. ಅದನ್ನು ಬಿಟ್ಟು ಕೆಸರೆರಚಾಡಿಕೊಂಡ್ರೆ ಪ್ರಯೋಜನವಿಲ್ಲ. ಸಂಸದರೂ ತಮ್ಮ ಕೆಲಸ ಮಾಡಬೇಕು, ಶಾಸಕರೂ ತಮ್ಮ ಕೆಲಸ ಮಾಡಬೇಕು. ಶಾಸಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ನಮ್ಮ ಶಾಸಕರು ಹಾಗೆ ಮಾಡುವುದಿಲ್ಲ.

English summary
JDS Former MP LR Shivaramegowda Outrage Against Yash Darshan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X