ಕೆ.ಆರ್.ಪೇಟೆಯಲ್ಲಿ ಕರುಗಳ ಮಾಂಸ ಮಾರಾಟ ದಂಧೆ!

ಮಂಡ್ಯ, ಏಪ್ರಿಲ್ 08: ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮಾಂಸ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. ಹೀಗಾಗಿ ಕೆಲವು ಮಾಂಸ ಪ್ರಿಯರು ಸಿಕ್ಕ ಸಿಕ್ಕ ಕಡೆಯಿಂದ ಮಾಂಸ ತರಿಸಿ ಸೇವಿಸುತ್ತಿದ್ದಾರೆ.

ಈ ಪರಿಸ್ಥಿತಿಯನ್ನೇ ಲಾಭಕ್ಕೆ ಬಳಸಿಕೊಂಡು, ಕೆ.ಆರ್.ಪೇಟೆಯ ಹೊಸಹೊಳಲು ಗ್ರಾಮದಲ್ಲಿ ಸೀಮೆ ಹಸುವಿನ ಕರುಗಳನ್ನು ತಂದು ಅವುಗಳನ್ನು ಕೊಂದು ಮಾಂಸ ಮಾಡಿ ಕುರಿ ಮಾಂಸದೊಂದಿಗೆ ಬೆರೆಸಿ ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.

Police Siezed And Rescued Calves In KR Pete

ಕಳೆದ ಕೆಲವು ದಿನಗಳಿಂದ ಈ ವ್ಯವಹಾರ ನಡೆಯುತ್ತಿದ್ದರೂ ಯಾರಿಗೂ ಗೊತ್ತಾಗಿರಲಿಲ್ಲ. ಆದರೆ ಸುಮಾರು ಮೂವತೈದಕ್ಕೂ ಹೆಚ್ಚು ಕರುಗಳನ್ನು ಒಂದೆಡೆ ಕೂಡಿ ಹಾಕಿದ್ದಲ್ಲದೆ, ಅವುಗಳನ್ನು ಬೇರೆಡೆಗೆ ಗೂಡ್ಸ್ ವಾಹನದಲ್ಲಿ ಸಾಗಿಸಲು ಮುಂದಾಗುತ್ತಿರುವುದು ಗೊತ್ತಾಗುತ್ತಿದ್ದಂತೆಯೇ, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸರು ದಾಳಿ ನಡೆಸಿ ಸುಮಾರು ಮೂವತ್ತೈದು ಕರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+