ಮಂಡ್ಯದಲ್ಲಿ ಶಾಸಕ ರಾಮದಾಸ್ ಕಾರು ಅಪಘಾತ; ಬೈಕ್ ಸವಾರನಿಗೆ ಗಾಯ
ಮಂಡ್ಯ, ಸೆಪ್ಟೆಂಬರ್ 6: ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯವಾದ ಘಟನೆ ಮಂಡ್ಯ ಹೊರವಲಯದ ಕಿರಗಂದೂರು ಗೇಟ್ ಬಳಿ ಇಂದು ನಡೆದಿದೆ.
ಕಾಂಗ್ರೆಸ್ ನಾಯಕರು ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುತ್ತಿದ್ದಾರೆ: ರಾಮದಾಸ್
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಬಿಳಗೂಲಿ ಗ್ರಾಮದ ಶಿವಣ್ಣ (50) ಗಾಯಗೊಂಡವರು. ಬೈಕ್ ಸವಾರ ಶಿವಣ್ಣ ಡಿವೈಡರ್ ನಲ್ಲಿ ತಿರುವು ಪಡೆದುಕೊಳ್ಳುವಾಗ ಮೈಸೂರಿನಿಂದ - ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ತಕ್ಷಣ ಶಾಸಕ ರಾಮದಾಸ್ ಗಾಯಾಳುವನ್ನು ಮಂಡ್ಯದ ಮಿಮ್ಸ್ ಗೆ ಆಟೋದಲ್ಲಿ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಚಿಕಿತ್ಸೆ ನಂತರ ಮತ್ತೊಂದು ಕಾರಿನಲ್ಲಿ ರಾಮದಾಸ್ ಬೆಂಗಳೂರಿಗೆ ತೆರಳಿದ್ದಾರೆ.












Click it and Unblock the Notifications