ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್ ಗೆಲುವಿಗಾಗಿ ಮಂಡ್ಯದಲ್ಲಿ ಇಂದು ಗುರು-ಶಿಷ್ಯರ ಜಂಟಿ ಪ್ರಚಾರ

|
Google Oneindia Kannada News

Recommended Video

ಮಂಡ್ಯ ಪ್ರಚಾರದಲ್ಲಿ ಜಂಟಿಯಾಗಿ ಭಾಗಿಯಾಗಲಿದ್ದಾರೆ ಸಿದ್ದರಾಮಯ್ಯ ಹಾಗು ಎಚ್ ಡಿ ದೇವೇಗೌಡ

ಮಂಡ್ಯ, ಏ.12: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಮಂಡ್ಯ ದೋಸ್ತಿ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಗಲಿರುಳು ಪ್ರಚಾರದಲ್ಲಿ ತೊಡಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಂದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಖಿಲ್ ಪರ ಪ್ರಚಾರ ನಡೆಸಲಿದ್ದಾರೆ. ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರಿಗೂ ಹೆಚ್ಚಿನ ಅಭಿಮಾನಿಗಳಿದ್ದಾರೆ ಹೀಗಾಗಿ ಅವರಿಬ್ಬರ ನಡುವೆ ತೀವ್ರ ಹಣಾಹಣಿ ಇದೆ. ಯಾರು ಗೆಲ್ಲಬಹುದು ಎಂದು ಫಲಿತಾಂಶ ಬರುವವರೆಗೂ ಹೇಳುವುದು ಕಷ್ಟವೇ.

ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಕೆನ್ನೆಗೆ ಮುತ್ತು ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಕೆನ್ನೆಗೆ ಮುತ್ತು

ಹಾಗಾಗಿ ಒಂದೆಡೆ ಸುಮಲತಾ ಗೆಲುವಿಗಾಗಿ ನಟರಾದ ದರ್ಶನ್ ಹಾಗೂ ಯಶ್ ಪ್ರಚಾರದಲ್ಲಿ ತೊಡಗಿದ್ದರೆ ಇನ್ನೊಂದೆಡೆ ನಿಖಿಲ್ ಗೆಲುವಿಗಾಗಿ ದೋಸ್ತಿ ಪಕ್ಷದ ಮುಖಂಡರುಗಳು ಪ್ರಯತ್ನ ನಡೆಸುತ್ತಿದ್ದಾರೆ.

ನಿಖಿಲ್ ಗೆಲ್ಲಿಸಲು ಮೈತ್ರಿ ನಾಯಕರ ಶತಪ್ರಯತ್ನ

ನಿಖಿಲ್ ಗೆಲ್ಲಿಸಲು ಮೈತ್ರಿ ನಾಯಕರ ಶತಪ್ರಯತ್ನ

ನಿಖಿಲ್​ ಗೆಲ್ಲಿಸಲು ಮೈತ್ರಿ ನಾಯಕರು ಶತಪ್ರಯತ್ನ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಗುರು- ಶಿಷ್ಯರಾದ ಜೆಡಿಎಸ್​ ವರಿಷ್ಠ ಎಚ್​​ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಖಿಲ್​ ಪರ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.

ಸಿದ್ದರಾಮಯ್ಯ ಭೇಟಿ ಮಾಡಿದ ನಿಖಿಲ್: ರಾಜಕೀಯ ಲೆಕ್ಕಾಚಾರ ಏನು?ಸಿದ್ದರಾಮಯ್ಯ ಭೇಟಿ ಮಾಡಿದ ನಿಖಿಲ್: ರಾಜಕೀಯ ಲೆಕ್ಕಾಚಾರ ಏನು?

ನಾಗಮಂಗಲಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ, ದೇವೇಗೌಡ

ನಾಗಮಂಗಲಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ, ದೇವೇಗೌಡ

ಬೆಳಿಗ್ಗೆ 11 ಗಂಟೆಗೆ ನಾಗಮಂಗಲಕ್ಕೆ ದೇವೇಗೌಡ ಹಾಗೂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಒಂದೇ ಹೆಲಿಕ್ಯಾಪ್ಟರ್​ನಲ್ಲಿ ಉಭಯ ನಾಯಕರು ಆಗಮಿಸುತ್ತಿರುವುದು ವಿಶೇಷ. ಮಧ್ಯಾಹ್ನ 2.30ಕ್ಕೆ ಮಳವಳ್ಳಿಯ ಸಾರ್ವಜನಿಕ ಸಭೆಯಲ್ಲಿ ಇವರು ಭಾಗಿಯಾಗಲಿದ್ದಾರೆ.

ಮಂಡ್ಯದ ಸಾಕ್ಷಾತ್ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್!ಮಂಡ್ಯದ ಸಾಕ್ಷಾತ್ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಮಾವೇಶ

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಮಾವೇಶ

ಸಂಜೆ 5 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ಹೊಳಲು ಸಾರ್ವಜನಿಕ ಸಭೆಯಲ್ಲಿ ಉಭಯ ನಾಯಕರು ಹಾಜರಿ ಹಾಕಲಿದ್ದಾರೆ. ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಹಾಗೂ ಮೈಸೂರು ಅಭ್ಯರ್ಥಿ ವಿಜಯ್ ಶಂಕರ್ ಪರ ದೋಸ್ತಿ ನಾಯಕರು ಮತಯಾಚನೆ ಮಾಡಲಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ಪರವಾಗಿ ಪ್ರಚಾರ ನಡೆಸಿದ್ದರು

ಹಾಸನದಲ್ಲಿ ಪ್ರಜ್ವಲ್ ಪರವಾಗಿ ಪ್ರಚಾರ ನಡೆಸಿದ್ದರು

ನಿನ್ನೆ ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಪರವಾಗಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಎ.ಮಂಜು ಬಿಜೆಪಿ ಸೇರ್ಪಡೆಯಾಗಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್​ ರೇವಣ್ಣ ನಿಂತರೆ, ಬಿಜಪಿ ಅಭ್ಯರ್ಥಿಯಾಗಿ ಮಂಜು ಕಣದಲ್ಲಿದ್ದಾರೆ. ಒಟ್ಟಿನಲ್ಲಿ ಕುಮಾರಸ್ವಾಮಿ ಕುಟುಂಬದ ಇಬ್ಬರು ಮಕ್ಕಳಿಗೂ ತೀವ್ರ ಪೈಪೋಟಿ ನೀಡುವ ಎದುರಾಳಿಗಳಿದ್ದಾರೆ ಎನ್ನುವುದಂತೂ ಸತ್ಯ.

ನಿಖಿಲ್ ಅನ್ನು ಸೋಲಿಸಲು ಷಡ್ಯಂತ್ರ ರಚಿಸಲಾಗಿದೆ: ಕುಮಾರಸ್ವಾಮಿ ನಿಖಿಲ್ ಅನ್ನು ಸೋಲಿಸಲು ಷಡ್ಯಂತ್ರ ರಚಿಸಲಾಗಿದೆ: ಕುಮಾರಸ್ವಾಮಿ

English summary
High voltage constituency Mandya will witness Deve gowda- Siddaramaiah joint campaign Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X