ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗೆ ತೆರೆ ಬಿತ್ತು!

|
Google Oneindia Kannada News

Recommended Video

ಅಂಬರೀಷ್ ಜೆಡಿಎಸ್ ಸೇರುವ ವಿಷ್ಯಕ್ಕೆ ಕೊನೆಗೂ ತೆರೆ ಬಿತ್ತು | ಮಂಡ್ಯದಿಂದ ಹೊಸ ಸುದ್ದಿ | Oneindia Kannada

ಮಂಡ್ಯ, ನವೆಂಬರ್ 19 : ಮಾಜಿ ವಸತಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗಳಿಗೆ ತೆರೆ ಬಿದ್ದಿದೆ. ಸ್ವತಃ ಮಂಡ್ಯ ಜಿಲ್ಲಾ ಜೆಡಿಎಸ್ ನಾಯಕರು ಈ ಕುರಿತು ಸ್ಪಷ್ಟನೆಗಳನ್ನು ನೀಡಿದ್ದಾರೆ.

'ಅಂಬರೀಶ್ ಜೆಡಿಎಸ್ ಸೇರುವ ಪ್ರಸ್ತಾವನೆ ಇಲ್ಲ. ಹಲವು ವರ್ಷಗಳ ಕಾಲ ಜೆಡಿಎಸ್‌ಗೆ ದುಡಿದಿರುವ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇದೆ. ಅವರನ್ನು ಬಿಟ್ಟು ಅಂಬರೀಶ್‌ ಅವರಿಗೆ ಟಿಕೆಟ್ ನೀಡುವ ಪ್ರಸ್ತಾಪವಿಲ್ಲ' ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಹೇಳಿದರು.

ಮಂಡ್ಯದಲ್ಲಿ ಅಂಬರೀಶ್, ರಮ್ಯಾ ಮುಖಾಮುಖಿ ಸ್ಪರ್ಧೆ?ಮಂಡ್ಯದಲ್ಲಿ ಅಂಬರೀಶ್, ರಮ್ಯಾ ಮುಖಾಮುಖಿ ಸ್ಪರ್ಧೆ?

ಶಾಸಕರಾದ ನಂತರ ಅಂಬರೀಶ್ ಅವರು ಕ್ಷೇತ್ರದ ಕಡೆ ಬರುವುದು ಅಪರೂಪ. ರೈತರ ಸರಣಿ ಆತ್ಮಹತ್ಯೆಗಳು ನಡೆದರೂ ಅಂಬರೀಶ್ ಬಂದಿಲ್ಲ ಎಂದು ಜನಾಕ್ರೋಶವಿದೆ. ಆದ್ದರಿಂದ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ಜೆಡಿಎಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಕಾಂಗ್ರೆಸ್ ಶೀತಲ ಸಮರ ತಪ್ಪಿಸಲು ರಮ್ಯಾ ಕ್ಷೇತ್ರ ಬದಲಾವಣೆ?ಮಂಡ್ಯ ಕಾಂಗ್ರೆಸ್ ಶೀತಲ ಸಮರ ತಪ್ಪಿಸಲು ರಮ್ಯಾ ಕ್ಷೇತ್ರ ಬದಲಾವಣೆ?

'ಅಂಬರೀಶ್ ಅವರು ಪಕ್ಷಕ್ಕೆ ಸೇರುತ್ತಿಲ್ಲ. ದೇವೇಗೌಡರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕ್ಷೇತ್ರಕ್ಕೆ ಬರದ ಶಾಸಕರು ನಮ್ಮ ಪಕ್ಷಕ್ಕೆ ಬಂದು ಏನು ಮಾಡುತ್ತಾರೆ?' ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ಹೇಳಿದ್ದಾರೆ...

ಮಂಡ್ಯ ರಾಜಕಾರಣ : ವಿಧಾನಸಭೆ ಚುನಾವಣೆ ಬಗ್ಗೆ ರಮ್ಯಾ ಸ್ಪಷ್ಟನೆಮಂಡ್ಯ ರಾಜಕಾರಣ : ವಿಧಾನಸಭೆ ಚುನಾವಣೆ ಬಗ್ಗೆ ರಮ್ಯಾ ಸ್ಪಷ್ಟನೆ

'ಕಾಂಗ್ರೆಸ್‌ಗೆ ಬೇಡವಾಗಿದ್ದಾರೆ'

'ಕಾಂಗ್ರೆಸ್‌ಗೆ ಬೇಡವಾಗಿದ್ದಾರೆ'

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, 'ಅಂಬರೀಶ್ ಜೆಡಿಎಸ್‌ನಿಂದ ಮೊದಲು ಗೆಲುವು ದಾಖಲಿಸಿದರು. ಮೊದಲು ಇದ್ದ ವರ್ಚಸ್ಸು ಇಲ್ಲ. ಸಿನಿಮಾ ನಟ ಎಂಬ ಚರಿಷ್ಮಾ ಕೂಡಾ ಈಗ ಉಳಿದಿಲ್ಲ. ಈಗ ಕಾಂಗ್ರೆಸ್‌ಗೆ ಬೇಡವಾಗಿದ್ದಾರೆ' ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕೃಪಾಪೋಷಿತ ನಾಟಕ

ಕಾಂಗ್ರೆಸ್ ಕೃಪಾಪೋಷಿತ ನಾಟಕ

ಅಂಬರೀಶ್ ಜೆಡಿಎಸ್ ಸೇರುವ ಯಾವುದೇ ಪ್ರಸ್ತಾಪವಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಕೆಲವರು ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಅಂಬರೀಶ್ ಮತ್ತು ರಮ್ಯಾ ನಡುವೆ ಸ್ಪರ್ಧೆ ಏರ್ಪಡಲಿದೆ ಎಂಬ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಕಾಂಗ್ರೆಸ್ ಕೃಪಾಪೋಷಿತ ನಾಟಕ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ

ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ

ಅಂಬರೀಶ್‌ಗೆ ಟಿಕೆಟ್ ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಆದ್ದರಿಂದ, ಬೇರೆಯವರಿಗೆ ಟಿಕೆಟ್ ನೀಡುವ ಚಿಂತನೆ ನಡೆಸಿದ್ದಾರೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಬೇರೆಯವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿ ಹಬ್ಬಿದೆ.

ಅಂಬರೀಶ್ ಸ್ಪರ್ಧೆ ಮಾಡಲಿದ್ದಾರೆ

ಅಂಬರೀಶ್ ಸ್ಪರ್ಧೆ ಮಾಡಲಿದ್ದಾರೆ

'ರಮ್ಯಾ ಅವರು ಮಂಡ್ಯಕ್ಕೆ ಬರುವುದಿಲ್ಲ. ಅಂಬರೀಶ್ ಮಂಡ್ಯದಿಂದಲೇ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ' ಎಂದು ಅಂಬರೀಶ್ ಅಭಿಮಾನಿ ಬಳದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದರು.

ಸಭೆ ನಡೆದ ಬಗ್ಗೆ ಗುಸು-ಗುಸು

ಸಭೆ ನಡೆದ ಬಗ್ಗೆ ಗುಸು-ಗುಸು

ಅಂಬರೀಶ್ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ತನಕ ತಲುಪಿದೆ. ಬೆಂಬಲಿಗರು ಪಕ್ಷ ಸೇರುವಂತೆ ಒತ್ತಡ ಹಾಕುತ್ತಿದ್ದು, ಅಮರಾವತಿ ಚಂದ್ರಶೇಖರ್ ಅವರ ಮನೆಯಲ್ಲಿ ರಹಸ್ಯ ಸಭೆ ನಡೆದಿದೆ ಎಂಬ ಸುದ್ದಿ ಕಳೆದ ವಾರ ಹಬ್ಬಿತ್ತು.

English summary
Mandya JDS leaders said that, Former minister and Mandya MLA Ambareesh will not join party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X