Get Updates
Get notified of breaking news, exclusive insights, and must-see stories!

ಅಂಬರೀಶ್ ನಂಬಿ 20 ವರ್ಷ ಹಾಳು ಮಾಡಿಕೊಂಡೆ: ಶಿವರಾಮೇಗೌಡ

Recommended Video

      ಅಂಬರೀಷ್ ನಂಬಿ 20 ವರ್ಷ ಹಾಳುಮಾಡಿಕೊಂಡಿದ್ದೆ..! | Oneindia Kannada

      ಮಂಡ್ಯ, ಏಪ್ರಿಲ್ 02: ಸುಮಲತಾ ಗಂಡನನ್ನು (ಅಂಬರೀಶ್) ನಂಬಿ ರಾಜಕೀಯ ಜೀವನದ ಇಪ್ಪತ್ತು ವರ್ಷ ಹಾಳು ಮಾಡಿಕೊಂಡೆ ಎಂದು ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಹೇಳಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ದರ್ಶನ್, ರಾಕ್‌ಲೈನ್ ವೆಂಕಟೇಶ್ ಸೇರಿ ಸುಮಲತಾ ಅಂಬರೀಶ್ ಪರ ನಿಂತಿರುವವನ್ನೆಲ್ಲಾ ಏಕವಚನದಲ್ಲಿಯೇ ಟೀಕಿಸಿರುವ ಶಿವರಾಮೇಗೌಡ ಅವರು ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಅವರ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾರೆ.

      ಈ ಸಿನಿಮಾದವರು ಶೂಟಿಂಗಿಗೆಂದು ಮಂಡ್ಯಕ್ಕೆ ಬಂದಂತಿದೆ, ಏಪ್ರಿಲ್ 18 ರ ಮತದಾನವಾದ ನಂತರ ಅವರೆಲ್ಲಾ ಕೈಗೆ ಸಿಗುವುದಿಲ್ಲ, ಟೆಂಟು ಕಿತ್ತುಕೊಂಡು ಬೆಂಗಳೂರಿಗೆ ಓಡಿ ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.

      Mandya MP Shivarame gowda loose talk about Sumalatha

      ಮಂಡ್ಯವನ್ನು ನಾಯ್ಡುಗಳ ಕೈಗೆ ಕೊಡಬೇಡಿ ಎಂದು ಹೇಳಿದ ಶಿವರಾಮೇಗೌಡ, ಸುಮಲತಾ ಆಂಧ್ರದ ನಾಯ್ಡು, ರಾಕ್‌ಲೈನ್ ವೆಂಕಟೇಶ್ ನಾಯ್ಡು, ಸುಮಲತಾ ಜೊತೆ ಇರುವ ಇನ್ನೂ ಹಲವರು ನಾಯ್ಡು ಅವರ ಕೈಗೆ ಮಂಡ್ಯ ಕೊಡಬೇಡಿ ಎಂದು ಶಿವರಾಮೇಗೌಡ ಹೇಳಿದ್ದಾರೆ.

      ಏಕವಚನದಲ್ಲಿ, ಲಘುವಾಗಿ ಮಾತನಾಡಿದ ಶಿವರಾಮೇಗೌಡ ಅವರು, ದರ್ಶನ್ ಅವರ ಬಗ್ಗೆಯೂ ಏಕವಚನದಲ್ಲಿ ಮಾತನಾಡಿದರು. ಚಿತ್ರರಂಗದವರನ್ನು ಟೂರಿಂಗ್ ಟಾಕೀಸ್‌ನವರು ಎಂದ ಶಿವರಾಮೇಗೌಡ ಅವರು, ಗೆದ್ದರೆ ಇವರನ್ನೆಲ್ಲಾ ಗುಡುಕಲು ಗಾಂಧಿ ನಗರಕ್ಕೆ ಹೋಗಬೇಕಾಗುತ್ತದೆ ಎಂದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+