ಕುಡಿಯುವ ನೀರಿಗಾಗಿ ಮಂಡ್ಯಕ್ಕೆ ಸಿಕ್ಕ ಅನುದಾನ ಎಷ್ಟು?

Posted By: Gururaj
Subscribe to Oneindia Kannada

ಮಂಡ್ಯ, ಏಪ್ರಿಲ್ 09 : ಚುನಾವಣೆ ದಿನಾಂಕ ಘೋಷಣೆಯಾಗಿದೆ. ಶಾಸಕರು ಮನೆ ಬಾಗಿಲಿಗೆ ಬಂದು ಮತ ನೀಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಶಾಸಕರು ಮಾಡಿದ್ದೇನು? ಎಂಬುದು ಜನರಿಗೆ ತಿಳಿದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಮಂಡ್ಯ ಜಿಲ್ಲೆಗೆ 2013 ರಿಂದ 2018ರ ತನಕ ಕುಡಿಯುವ ನೀರಿನ ಕಾಮಗಾರಿಗೆ ಎಷ್ಟು ಹಣ ಬಿಡುಗಡೆಯಾಗಿದೆ?. ಎಂಬ ಬಗ್ಗೆ ಒನ್ ಇಂಡಿಯಾ ಕನ್ನಡ ಆರ್‌ಟಿಐ ಮೂಲಕ ಮಾಹಿತಿ ಪಡೆದಿದೆ. ಕ್ಷೇತ್ರವಾರು ಅನುದಾನ ಬಿಡುಗಡೆ ಬಗ್ಗೆ ಮಾಹಿತಿ ಸಿಕ್ಕಿದೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2013 ರಿಂದ 2018ರ ವರೆಗೆ ಕುಡಿಯುವ ನೀರಿನ ಕಾಮಗಾರಿಗೆ ಬಿಡುಗಡೆ ಮಾಡಿರುವ ಅನುದಾನದ ಮಾಹಿತಿ ಸಿಕ್ಕಿದೆ. ಜಿಲ್ಲೆಯ ವಿವಿಧ ವಿಧಾಸಭಾ ಕ್ಷೇತ್ರಗಳಿಗೆ ಈ ಅನುದಾನವನ್ನು ನೀಡಲಾಗಿದೆ.

Mandya : Fund release for drinking water projects

2015-16 ಮತ್ತು 2017-18 ನೇ ಸಾಲಿನಲ್ಲಿ ಯಾವುದೇ ಅನುದಾನ ಕುಡಿಯುವ ನೀರಿನ ಕಾಮಗಾರಿಗೆ ಬಿಡುಗಡೆಗೊಂಡಿಲ್ಲ. ನಾಗಮಂಗಲ, ಕೆ.ಆರ್.ಪೇಟೆ ತಾಲೂಕಿಗೆ ಬಿಡುಗಡೆಯಾದ ಅನುದಾನದ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ನೀಡಿದೆ.

* 2013-14 ರಲ್ಲಿ ನಾಗಮಂಗಲಕ್ಕೆ 2,00,000, ಕೆ.ಆರ್.ಪೇಟೆಗೆ 15,00,000 ರೂ. ಅನುದಾನ

* 2014-15ರಲ್ಲಿ ಕೆ.ಆರ್.ಪೇಟೆಗೆ 20,48,000, ನಾಗಮಂಗಲಕ್ಕೆ 2,00,000 ರೂ. ಅನುದಾನ

* 2016-17ರಲ್ಲಿ ಕೆ.ಆರ್.ಪೇಟೆಗೆ 2,00,000 ಅನುದಾನ ಬಿಡುಗಡೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a replying to RTI Mandya district administration reveled the details of fund released to drinking water projects from 2013 to 2018 to Nagamangala and K.R.Pete assembly constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ