ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ: ಮಳೆ ಅನಾಹುತ ನಿರಂತರ, ಸುನಾಮಿ ಬಗ್ಗೆ ಕೋಡಿಶ್ರೀ ಹೇಳಿದ ಕರಾಳ ಭವಿಷ್ಯ!

|
Google Oneindia Kannada News

ಮಂಡ್ಯ, ಸೆಪ್ಟಂಬರ್ 09: ಕರ್ನಾಟಕದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ, ಅನಾಹುತಗಳು ಮುಂದುವರಿಯಲಿವೆ. ಮುಂದೆ ಭಾರತದಲ್ಲಿ ಸುನಾಮಿ ಬರುವ ನಿರೀಕ್ಷೆ ಎಂದು ಕೋಡಿ ಮಠದ ಶ್ರೀಗಳು ಕರಾಳ ಭವಿಷ್ಯದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಕೊರೊನಾ ವಿಚಾರದಲ್ಲಿ ಶ್ರೀಗಳು ಇದೇ ರೀತಿ ಭವಿಷ್ಯ ನುಡಿದಿದ್ದರು.

ಹಾಸನ ಜಿಲ್ಲೆ ಅರಸೀಕೆರೆಯ ಕೋಡಿಮಠದ ಶ್ರೀಗಳು ಶುಕ್ರವಾರದಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ರಾಜ್ಯದ ಕುರಿತು ಈ ರೀತಿಯ ಭವಿಷ್ಯ ಹೇಳಿದ್ದಾರೆ.

ಕೋಲಾರ, ಹಾಸನ, ರಾಯಚೂರಿನಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕೋಲಾರ, ಹಾಸನ, ರಾಯಚೂರಿನಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ

ಕರ್ನಾಟಕ ಮತ್ತು ದೇಶದ ಕುರಿತು ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ ಜನರನ್ನು ಅಚ್ಚರಿಗೆ ದೂಡಿದೆ. ಏಕೆಂದರೆ ಕೊರೊನಾ ಬಗ್ಗೆ ಶ್ರೀಗಳು ನುಡಿದದ್ದ ಭವಿಷ್ಯ ನಿಜವಾಗಿದೆ ಎಂದು ಅನೇಕರು ನಂಬುತ್ತಾರೆ. ಇದೀಗ ಕರ್ನಾಟಕ ರಾಜ್ಯದಲ್ಲಿ ಮಳೆ ಅನಾಹುತಗಳು ಮುಂದುವರಿಯಲಿವೆ. ಭೂಮಿಯಿಂದ ಹೊಸ ವಿಷ ಜಂತುಗಳು ಹುಟ್ಟಿಬರಲಿವೆ. ಜನರು ಓಡಾಡುವಾಗ ಕೈಯಲ್ಲಿ ಬಡಿಗೆ ಹಿಡಿದು ಓಡಾಡುವ ಕಾಲ ಬರಲಿದೆ. ದೇಶದಲ್ಲಿ ಸುನಾಮಿ ಎದುರಾಗುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿ ಎಚ್ಚರಿಸಿದ್ದಾರೆ.

Kodi mutt Seer latest prediction on Karnataka rain damage and Tsunami

ಈ ಹಿಂದೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಎಂದು ಹೇಳಿದ್ದೆ. ಕೊರೊನಾ ಭವಿಷ್ಯ ನಿಜವಾಗಿದೆ ಎನ್ನುವ ಮೂಲಕ ಈಗಿನ ಭವಿಷ್ಯ ಕುರಿತು ಶ್ರೀಗಳು ಸಮರ್ಥನೆ ನೀಡಿದರು.

ಹೆಚ್ಚು ಕಷ್ಟ ಎದುರಾಗಲಿದೆ, ಯೋಗ್ಯ ಸಾಧುಗಳಿದ್ದಾರೆ

ಈಗಿನ ಗಿಂತಲೂ ಮುಂದೆ ಹೆಚ್ಚಿನ ಕಷ್ಟ ಕಾಲ ಎದುರಾಗುವ ಸಂಭವವಿದೆ. ಇದಕ್ಕೆಲ್ಲಾ ದೇವರನ್ನು ಪೂಜಿಸುವುದು ಒಂದೇ ಪರಿಹಾರವಾಗಿದೆ. ಪೂಜೆ ಎಂಬುದು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಆಡಂಬರವಾಗಿಬಿಟ್ಟಿದೆ. ಅದು ಸರಿಯಲ್ಲ. ಸಮಾಜದಲ್ಲಿ ಯೋಗ್ಯ ಸಾಧುಗಳಿದ್ದಾರೆ. ಎಲ್ಲರೂ ಸೇರಿ ಪ್ರಾರ್ಥಿಸಿದರೆ ಜಗತ್ತು ಉಳಿಯುತ್ತದೆ, ನಾಡಿಗೆ ಒಳಿತಾಗುತ್ತದೆ ಎಂದು ಶರಣರು, ಮಠದ ವಿರುದ್ಧ ಆರೋಪಗಳ ಕುರಿತು ಪ್ರಶ್ನೆಗೆ ಅವರು ಕೋಡಿ ಮಠದ ಶ್ರೀಗಳು ಮಾರ್ಮಿಕ ಹೇಳಿದರು.

Kodi mutt Seer latest prediction on Karnataka rain damage and Tsunami

ನೀಚಂಗೆ ದೊರೆತನವು, ಹೇಡಿಂಗೆ ಹಿರಿತನವು, ಮೂಢಂಗೆ ಗುರುತನವೂ ಸಿಕ್ಕಿರುವುದರಿಂದ ನಾಡಿನಲ್ಲಿ ಇಂತಹ ಸಂಭವಿಸಿದೆ. ಆರೋಪಗಳು ಭವಿಷ್ಯದಲ್ಲಿ ಹೆಚ್ಚಾಗಲಿವೆ ಎಂದರು. ಆದರೆ ರಾಜಕೀಯ ಬೆಳವಣಿಗೆ ಬಗ್ಗೆ ಅವರು ಭವಿಷ್ಯ ಹೇಳುವ ಮನಸ್ಸು ಮಾಡಲಿಲ್ಲ.

English summary
What did Kodi mutt swamiji says about Karnataka rain damage and tsunami at Mondya on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X