ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐಟಿ ರೇಡ್
ನಾಗಮಂಗಲ (ಮಂಡ್ಯ), ಏಪ್ರಿಲ್ 29: ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಲುವಯರಾಯಸ್ವಾಮಿಗೆ ಐಟಿ ಅಧಿಕಾರಿಗಳು ಭಾನುವಾರ ಬೆಳ್ಳಂಬೆಳಗ್ಗೆ ಆಘಾತ ನೀಡಿದ್ದಾರೆ.
ಚಲುವರಾಯಸ್ವಾಮಿ ಆಪ್ತ ಬೋಗಾದಿ ಬಳಿಯ ಸುಖಧರೆಯ ಗ್ರಾಮದಲ್ಲಿರುವ ಸುಖಧರೆ ಲಕ್ಷ್ಮೀನಾರಾಯಣ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲಕ್ಷ್ಮೀನಾರಾಯಣ ನಾಗಮಂಗಲದ ಉದ್ಯಮಿ ಹಾಗೂ ಕಂಟ್ರಾಕ್ಟರ್ ಆಗಿದ್ದಾರೆ. ಇವರು ಚಲುವರಾಯಸ್ವಾಮಿ ಆಪ್ತರಾಗಿರುವ ಹಿನ್ನಲೆಯಲ್ಲಿ ಚುನಾವಣೆಗೆ ಅಕ್ರಮವಾಗಿ ಹಣ ಸಂಗ್ರಹಣೆ ಮಾಡಿದ್ದಾರೆ ಎನ್ನುವ ಶಂಕೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

30 ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಈ ವೇಳೆ ಮನೆಯಲ್ಲಿ ಕೇವಲ 30 ಸಾವಿರ ನಗದು ಮತ್ತು ಇತರ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.












Click it and Unblock the Notifications