ರೈತ ಆತ್ಮಹತ್ಯೆ, ಹೆಚ್ಚಿದ ಪೊಲೀಸ್ ಭದ್ರತೆ, ಮಠಾಧೀಶರ ಪ್ರತಿಭಟನೆ

Posted By:
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 19: ಕಾವೇರಿ ಮೇಲುಸ್ತುವಾರಿ ಸಮಿತಿ ನಿರ್ಣಯದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸೋಮವಾರ ಹಾಗೂ ಮಂಗಳವಾರದ ಪರಿಸ್ಥಿತಿ ಅವಲೋಕಿಸಿ ಇನ್ನೂ ಹೆಚ್ಚಿನ ಭದ್ರತೆ ಮಾಡಲಾಗುವುದು. ಕೆಆರ್ ಎಸ್ ಡ್ಯಾಂ, ಮಂಡ್ಯ, ಮದ್ದೂರು, ಶ್ರೀರಂಗ ಪಟ್ಟಣದಲ್ಲಿ ಈಗಾಗಲೇ 400ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಎಂದು ಮಂಡ್ಯ ಎಸ್ ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಇನ್ನೂ 150 ಹೆಚ್ಚುವರಿ ಸಿಬ್ಬಂದಿ, 6 ಕಂಪನಿ ಪ್ಯಾರಾ ಮಿಲಿಟರಿ ಪಡೆ, 35 ಸ್ಟ್ರೈಕಿಂಗ್ ಫೋರ್ಸ್, 21 ಜಿಲ್ಲೆಗಳಿಂದ ಬಂದಿರುವ ಸಿಬ್ಬಂದಿ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೂವತ್ತೆರಡು ಮಂದಿಯನ್ನು ಬಂಧಿಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ 4, ಕೊಪ್ಪದಲ್ಲಿ ಎರಡು ಲಾರಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಹತ್ತೊಂಬತ್ತು ಜನರನ್ನು ಬಂಧಿಸಲಾಗಿದೆ.[ಕಾವೇರಿ ವಿವಾದ : ಮಂಡ್ಯದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ]

Farmer suicide, seers protest in Mandya

ಇನ್ನು ಶ್ರೀರಂಗಪಟ್ಟಣದಲ್ಲಿ ಕಾವೇರಿ ಹಿತರ್ಕ್ಷಣಾ ಸಮಿತಿ ವೇದಿಕೆಗೆ ಜಿ.ಮಾದೇಗೌಡ ಚಾಲನೆ ನೀಡಿದ್ದಾರೆ. ಅಲ್ಲೇ ಪ್ರತಿಭಟನೆಯಲ್ಲಿ ಮಾದೇಗೌಡ, ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ರಮೇಶ್ ಬಂಡಿಸಿದ್ದೇಗೌಡ, ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮತ್ತಿತರರು ಹೋರಾಟದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಜಲ ನೀತಿ ರೂಪಿಸಲು ಆಗ್ರಹಿಸಿದರು.

ರೈತ ಆತ್ಮಹತ್ಯೆ: ಮಂಡ್ಯ ತಾಲೂಕಿನ ಗಂಟಗೌಡನಹಳ್ಳಿಯಲ್ಲಿ ಚಂದು (29) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಇಪ್ಪತ್ತು ಗುಂಟೆ ಜಮೀನಿತ್ತು. ಭತ್ತ, ಕಬ್ಬು ಬೆಳೆಯಲು ಮೂರು ಲಕ್ಷ ಸಾಲ ಮಾಡಿದ್ದರು. ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಚಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರೆಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.[ಹೋರಾಟಗಾರರ ವಿರುದ್ಧದ ಮೊಕದ್ದಮೆ ವಾಪಸ್ ಪಡೆಯಿರಿ]

Farmer suicide, seers protest in Mandya

ಸಭೆಗೆ ಗೈರು: ಅಂಬರೀಶ್, ಪಿ.ಎಂ.ನರೇಂದ್ರಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ, ಕೆ.ಸಿ.ನಾರಾಯಣ ಗೌಡ ಅವರು ಜಿ.ಮಾದೇಗೌಡ ಕರೆದಿದ್ದ ಸಭೆಗೆ ಗೈರುಹಾಜರಾಗಿದ್ದರು.

ರಾಷ್ಟ್ರೀಯ ಜಲ ನೀತಿಗೆ ಆಗ್ರಹ: ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ತೀರ್ಮಾನಗಳು ರಾಜ್ಯಕ್ಕೆ ವ್ಯತಿರಿಕ್ತ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಮಠಾಧೀಶರು ಅಗ್ರಹಿಸಿದರು. ಇಲ್ಲದಿದ್ದಲ್ಲಿ ಲೋಕಸಭೆ, ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು ಎಂದರು.[ಕಾವೇರಿ ನೀರಿಗಾಗಿ ಶ್ರೀರಂಗಪಟ್ಟಣದಲ್ಲಿ ಚಡ್ಡಿ ಚಳವಳಿ]

ಈ ಬಾರಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರೆಯದಿದ್ದಲ್ಲಿ ಸಂಸದರು, ಶಾಸಕರು, ಸಂಸದರು ರಾಜೀನಾಮೆ ನೀಡಿ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಬೇಕು ಎಂದು ಕರೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Protest continued in Mandya about cauvery issue. A farmer committ suicide in Mandya taluk. Seers partcipated in protest.
Please Wait while comments are loading...