ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾರ ವಿರುದ್ಧ ಪ್ರತಿಭಟನೆ ಮಾಡಿದ್ದರೋ ಅವರಿಗೇ ಟಿಕೆಟ್‌ ನೀಡಿದ ದೇವೇಗೌಡ

|
Google Oneindia Kannada News

ಮಂಡ್ಯ, ಅಕ್ಟೋಬರ್ 20: ಎರಡು ದಶಕದ ಹಿಂದೆ ಯಾವ ವ್ಯಕ್ತಿಯ ವಿರುದ್ದ ಉಗ್ರ ಹೋರಾಟ ಮಾಡಿದ್ದರೋ ಆ ವ್ಯಕ್ತಿಗೆ ಇಂದು ತಮ್ಮದೇ ಪಕ್ಷದಿಂದ ಟಿಕೆಟ್‌ ನೀಡಿದ್ದಾರೆ ಜೆಡಿಎಸ್ ವರಿಷ್ಠ ದೇವೇಗೌಡ.

ಹೌದು, ಮಂಡ್ಯ ಲೋಕಸಭೆ ಉಪಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವ ಎಲ್‌.ಆರ್.ಶಿವರಾಮೇಗೌಡ ಅವರ ವಿರುದ್ಧ ದೇವೇಗೌಡರು 26 ವರ್ಷಗಳ ಹಿಂದೆ ಉಗ್ರ ಪ್ರತಿಭಟನೆ ಮಾಡಿದ್ದರೂ, ಅವರನ್ನು ಬಂಧಿಸಿಯೇ ತೀರುವಂತೆ ಒತ್ತಾಯ ಮಾಡಿದ್ದರು.

ಆದರೆ ಇಂದು ಅವರಿಗೆ ತಾವೇ ಟಿಕೆಟ್ ನೀಡಿ ಗೆಲ್ಲಿಸುವ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಅವರ ಪರವಾಗಿ ಪ್ರಚಾರವನ್ನೂ ಮಾಡುವ ಸಂಭವ ಸಹ ಇದೆ.

ಮಂಡ್ಯ ಜೆಡಿಎಸ್ ಟಿಕೆಟ್‌ ವಂಚಿತೆ ಡಾ.ಲಕ್ಷ್ಮಿ ಕೊನೆಗೂ ಮೌನ ಮುರಿದರು ಮಂಡ್ಯ ಜೆಡಿಎಸ್ ಟಿಕೆಟ್‌ ವಂಚಿತೆ ಡಾ.ಲಕ್ಷ್ಮಿ ಕೊನೆಗೂ ಮೌನ ಮುರಿದರು

ಲಂಕೇಶ್‌ ಪತ್ರಿಕೆಯ ಮಂಡ್ಯ ವರದಿಗಾರ ಕಂಚಹಳ್ಳಿ ಗಂಗಾಧರ ಮೂರ್ತಿ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಎಲ್‌.ಆರ್.ಶಿವರಾಮೇಗೌಡ ಅವರು ಪ್ರಮುಖ ಆರೋಪಿಯಾಗಿದ್ದರು. ಆಗ ಕೆಲ ಕಾಲ ಜೈಲು ವಾಸವನ್ನೂ ಅನುಭವಿಸಿದ್ದರು.

ಶಿವರಾಮೇಗೌಡರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದರು

ಶಿವರಾಮೇಗೌಡರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದರು

ಆಗ ಶಾಸಕರಾಗಿದ್ದ ಶಿವರಾಮೇಗೌಡ ವಿರುದ್ಧ ಹರಿಹಾಯ್ದಿದ್ದ ದೇವೇಗೌಡರು, ಆತನೊಬ್ಬ ರೌಡಿ, ಪುಂಡ ಎಂದೆಲ್ಲಾ ಭಾಷಣ ಮಾಡಿದ್ದರು. ಅಷ್ಟೆ ಅಲ್ಲದೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ನಾಗಮಂಗಲದ ಪ್ರವಾಸಿ ಮಂದಿರದಿಂದ ಪಾದಯಾತ್ರೆ ಸಹ ಮಾಡಿದ್ದರು.

ಮಂಡ್ಯ ಜೆಡಿಎಸ್ ಅಭ್ಯರ್ಥಿ: ಶಿವರಾಮೇಗೌಡರ ಪತ್ನಿಯ ಆಸ್ತಿಯೇ ಹೆಚ್ಚುಮಂಡ್ಯ ಜೆಡಿಎಸ್ ಅಭ್ಯರ್ಥಿ: ಶಿವರಾಮೇಗೌಡರ ಪತ್ನಿಯ ಆಸ್ತಿಯೇ ಹೆಚ್ಚು

ಪತ್ರಕರ್ತನ ಹತ್ಯೆಯಲ್ಲಿ ಆರೋಪಿ ಆಗಿದ್ದ ಶಿವರಾಮೇಗೌಡ

ಪತ್ರಕರ್ತನ ಹತ್ಯೆಯಲ್ಲಿ ಆರೋಪಿ ಆಗಿದ್ದ ಶಿವರಾಮೇಗೌಡ

ಕೆಂಚನಹಳ್ಳಿ ಗಂಗಾಧರ್ ಅವರನ್ನು ಹಾಡು ಹಗಲೆ ಭತ್ತದ ಗದ್ದೆಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡಲಾಗಿತ್ತು. ಅವರು ರೌಡಿ ರಾಜಕಾರಣದ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದರು. ದೇವೇಗೌಡರ ಪ್ರತಿಭಟನೆ ಬಳಿ ಶಿವರಾಮೇಗೌಡ ಬಂಧನ ಆಯ್ತು ಅವರು ಎರಡು ವರ್ಷಗಳ ನ್ಯಾಯಾಂಗ ಬಂಧನದಲ್ಲಿದ್ದರು ಆ ನಂತರ 2000 ರಲ್ಲಿ ಪ್ರಕರಣದಿಂದ ಖುಲಾಸೆ ಆದರು.

ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಗೆ ಗೆಲುವು ಸುಲಭವಿಲ್ಲ!ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಗೆ ಗೆಲುವು ಸುಲಭವಿಲ್ಲ!

ದೇವೇಗೌಡರ ಪ್ರತಿಭಟನೆ ಚಿತ್ರಗಳು ವೈರಲ್

ದೇವೇಗೌಡರ ಪ್ರತಿಭಟನೆ ಚಿತ್ರಗಳು ವೈರಲ್

ದೇವೇಗೌಡರು ಅಂದು ಪ್ರತಿಭಟನೆ ಮಾಡಿದ್ದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಂಡ್ಯದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಲಕ್ಷ್ಮಿ ಅಶ್ವಿನ್‌ ಗೌಡ ಅವರ ಬೆಂಬಲಿಗರು ಹಾಗೂ ಇತರೆ ಪಕ್ಷದವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಮುಂದು ಮಾಡಿ ದೇವೇಗೌಡರ ಅನುಕೂಲಸಿಂಧು ರಾಜಕಾರಣವನ್ನು ಟೀಕಿಸುತ್ತಿದ್ದಾರೆ. ಅದೇ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಅವರು ಕೂಡ ಭಾಗಿ ಆಗಿದ್ದರು.

ಮಂಡ್ಯ ಉಪ ಚುನಾವಣೆ : ಅಂಬರೀಶ್ ಭೇಟಿಯಾದ ಎಲ್.ಆರ್.ಶಿವರಾಮೇಗೌಡಮಂಡ್ಯ ಉಪ ಚುನಾವಣೆ : ಅಂಬರೀಶ್ ಭೇಟಿಯಾದ ಎಲ್.ಆರ್.ಶಿವರಾಮೇಗೌಡ

ಲಕ್ಷ್ಮಿ ಅಶ್ವಿನ್‌ ಗೌಡ ಆಕಾಂಕ್ಷಿ ಆಗಿದ್ದರು

ಲಕ್ಷ್ಮಿ ಅಶ್ವಿನ್‌ ಗೌಡ ಆಕಾಂಕ್ಷಿ ಆಗಿದ್ದರು

ಮಂಡ್ಯ ಲೋಕಸಭೆ ಚುನಾವಣೆಗೆ ಡಾ.ಲಕ್ಷ್ಮಿ ಅಶ್ವಿನ್‌ ಗೌಡ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದರು ಆದರೆ ಅವರ ಬದಲಿಗೆ ಎಲ್‌.ಆರ್‌.ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಲಾಯಿತು. ಇದು ಲಕ್ಷ್ಮಿ ಬೆಂಬಲಿಗರ ಬೇಸರಕ್ಕೆ ಕಾರಣವಾಯಿತು.

English summary
Deve Gowda once protest against Mandya's LR Shivaramegowda but now he only gave his party ticket to Shivaramegowda to contest for Mandya Lok Sabha by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X