• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ : ವಿರಾಜಪೇಟೆಯಲ್ಲಿ ಕಾಡಾನೆಗಳ ವಾಕಿಂಗ್

|

ಮಡಿಕೇರಿ, ಏಪ್ರಿಲ್ 05 : ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ವಾಹನಗಳ ಸಂಚಾರ ಎಲ್ಲಾ ರಸ್ತೆಗಳಲ್ಲಿ ವಿರಳವಾಗಿದೆ. ಕಾಡುಪ್ರಾಣಿಗಳು ಯಾವುದೇ ಭಯವಿಲ್ಲದೆ ವಿಹಾರ ನಡೆಸುತ್ತಿವೆ.

ಕರ್ನಾಟಕದ ವಿಡಿಯೋವೊಂದು ಸಾಮಾಜಿಕಜಾಲತಾಣದಲ್ಲಿ ಭಾನುವಾರ ವೈರಲ್ ಆಗಿದೆ. ಕಾಡಾನೆಗಳ ಹಿಂಡು ರಸ್ತೆಯಲ್ಲಿ ಯಾವುದೇ ಅಳುಕು ಇಲ್ಲದೇ ಸಂಚಾರ ನಡೆಸುತ್ತಿರುವ ವಿಡಿಯೋ ಇದು.

FACT CHECK: ನಾಗ್ಪುರದಲ್ಲಿ 59 ಕೊರೊನಾ ಕೇಸ್, ಆ ಆಡಿಯೋ ಸತ್ಯವೇನು?FACT CHECK: ನಾಗ್ಪುರದಲ್ಲಿ 59 ಕೊರೊನಾ ಕೇಸ್, ಆ ಆಡಿಯೋ ಸತ್ಯವೇನು?

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗೇಟ್ ಸಮೀಪ ಕಾಡಾನೆಗಳು ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೋ. ಅರಣ್ಯ ಇಲಾಖೆಯೇ ಈ ವಿಡಿಯೋವನ್ನು ಮಾಧ್ಯಮಗಳಿಗೆ ನೀಡಿದೆ.

ಲಾಕ್ ಡೌನ್ ಬಳಿಕ ಕೊಡಗು ಜಿಲ್ಲೆಯಲ್ಲಿ ವಾಹನಗಳ ಸಂಚಾರ ವಿಳಂಬವಾಗಿದೆ. ಹೀಗಾಗಿ ಕಾಡಾನೆಗಳು ಭೀತಿ ಇಲ್ಲದೇ ಕಾಡಿನಿಂದ ರಸ್ತೆಗೆ ಬಂದಿವೆ. ಮಾಲ್ದಾರೆ, ಆನೆಚೌಕೂರು, ಸಿದ್ದಾಪುರ, ಗುಹ್ಯದಲ್ಲಿ ಆನೆಗಳು ಸಂಚಾರ ನಡೆಸುತ್ತಿವೆ.

ಕೊರೊನಾ ಹರಡುವ ಭೀತಿಯಿಂದ ಜನರು ಮನೆಯಲ್ಲಿಯೇ ಇದ್ದಾರೆ. ಆದರೆ, ಕಾಡು ಪ್ರಾಣಿಗಳು ಮಾತ್ರ ಜನರಿಲ್ಲದ ರಸ್ತೆಯಲ್ಲಿ ಓಡಾಡಿಕೊಂಡಿವೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ

ಆನೆ, ಜಿಂಕೆ, ನವಿಲು ಹೀಗೆ ವಿವಿಧ ಪ್ರಾಣಿ, ಪಕ್ಷಿಗಳು ರಸ್ತೆಯಲ್ಲಿ ಸಂಚಾರ ನಡೆಸುತ್ತಿರುವ ದೇಶದ ವಿವಿಧ ರಾಜ್ಯಗಳ ಚಿತ್ರಗಳು ಈಗಾಗಲೇ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

English summary
Viral Video a herd of elephants walk down the road in Maldhare Junction, Virajapete in Kodagu district of Karnataka in the time of 21 day Coronavirusloackdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X