ಕೊರೊನಾ ಚಿಕಿತ್ಸೆ; ಕೊಡವತಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ ಅಮೆರಿಕ

ಕೊಡಗು, ಏಪ್ರಿಲ್ 25: ಕೊರೊನಾ ವೈರಸ್ ಹಾವಳಿಯಿಂದ ವಿಶ್ವವೇ ಕಂಗೆಟ್ಟಿದೆ. ಅಮೆರಿಕದಲ್ಲಂತೂ ಕೊರೊನಾ ವೈರಸ್ ಹತೋಟಿಗೇ ಬರದಂತಾಗಿದೆ. ಸದ್ಯಕ್ಕೆ ಅಮೆರಿಕದಲ್ಲಿ 32.25% ಸೋಂಕಿತರು ಇದ್ದು, ಜನರ ಜೀವ ಉಳಿಸಲು ವೈದ್ಯರು ತಮ್ಮ ಜೀವದ ಹಂಗನ್ನೇ ತೊರೆದು ಶ್ರಮಿಸುತ್ತಿದ್ದಾರೆ. ಅವರಲ್ಲಿ ಭಾರತೀಯರೂ ಇದ್ದಾರೆ.

ಇತ್ತೀಚೆಗೆ ಅಮೆರಿಕಾದ ದಕ್ಷಿಣ ಪ್ರಾಂತ್ಯದಲ್ಲಿರುವ ಮೈಸೂರು ಮೂಲದ ವೈದ್ಯೆಯೊಬ್ಬರ ಸೇವೆಗೆ ಸಂಬಂಧಿಸಿದಂತೆ ಅಮೆರಿಕ ವಿಶಿಷ್ಟವಾಗಿ ಕೃತಜ್ಞತೆ ಸಲ್ಲಿಸಿತ್ತು. ಇದೀಗ ಕೊಡಗು ಮೂಲದ ವೈದ್ಯೆಗೂ ಅಂಥದ್ದೇ ಗೌರವ ಸಲ್ಲಿಸಿದೆ. ಕೊಡವತಿಗೆ ಅಮೆರಿಕ ವಿಶೇಷವಾಗಿ ಅಭಿನಂದನೆ ಸಲ್ಲಿಸಿದೆ.

 ಕೊಡವತಿಗೆ ಅಮೆರಿಕದಲ್ಲಿ ವಿಶೇಷ ಗೌರವ

ಕೊಡವತಿಗೆ ಅಮೆರಿಕದಲ್ಲಿ ವಿಶೇಷ ಗೌರವ

ಕೊಡಗು ಮೂಲದ ಡಾ. ಪ್ರೀತಿ ಸುಬ್ರಮಣಿ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ಅಲ್ಲಿಯ ಸ್ಥಳೀಯರು ಅವರ ಮನೆಯ ಮುಂದೆ ವಿಶಿಷ್ಟವಾದ 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಸಿದ್ದಾರೆ. ಪ್ರೀತಿ ಅವರ ಮನೆ ಮುಂದೆ ಪೊಲೀಸ್ ಕಾರು, ಅಗ್ನಿಶಾಮಕದಳ ವಾಹನಗಳು ಪರೇಡ್ ನಡೆಸಿ ಕೃತಜ್ಞತೆ ಸಲ್ಲಿಸಿದ್ದಾರೆ.

 ರಣಜಿ ಟ್ರೋಫಿ ಮಾಜಿ ಆಟಗಾರನ ಮಗಳು

ರಣಜಿ ಟ್ರೋಫಿ ಮಾಜಿ ಆಟಗಾರನ ಮಗಳು

ಡಾ. ಪ್ರೀತಿ ಅವರು ಬಿರುಮಾಣಿಯ ಸುಬ್ರಮಣಿ ಎಂಬುವರನ್ನು ಮದುವೆಯಾಗಿದ್ದಾರೆ. ಅವರಿಗೆ ನಿಖಿತಾ ಮತ್ತು ನಿಖಿಲ್ ಎಂಬ ಇಬ್ಬರು ಮಕ್ಕಳಿದ್ದಾರೆ. ರಣಜಿ ಟ್ರೋಫಿ ಮಾಜಿ ಆಟಗಾರ ರಾಜಪ್ಪ ಇವರ ತಂದೆ. ರಾಜಪ್ಪ ಹಾಗೂ ತಾಯಿ ಜಯಂತಿ ನೆಲ್ಜಿಯ ನಿವಾಸಿಗಳು.

 ಕೊರೊನಾದಿಂದ ಗುಣಮುಖರಾದವರಿಂದಲೂ ಕೃತಜ್ಞತೆ

ಕೊರೊನಾದಿಂದ ಗುಣಮುಖರಾದವರಿಂದಲೂ ಕೃತಜ್ಞತೆ

ಡಾ. ಪ್ರೀತಿ ಸುಬ್ರಮಣಿ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಇವರಿಗೆ ಪೊಲೀಸರು ತಮ್ಮ ವಾಹನಗಳಲ್ಲಿ ಪ್ರೀತಿ ಅವರ ಮನೆ ಮುಂದೆ ಸೈರನ್ ಹಾಕಿ, ಕೈ ಬೀಸಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜಮೆಚ್ಚುಗೆ ಗಳಿಸಿದೆ. ಕೊರೊನಾದಿಂದ ಗುಣಮುಖರಾದವರೂ ಗೌರವ ಸಲ್ಲಿಸಿದ್ದಾರೆ. ಮೈಸೂರಿನ ಉಮಾ ಮಧುಸೂದನ್ ಹಾಗೂ ಪ್ರೀತಿ ಸುಬ್ರಮಣಿ ಅವರು ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.

 ಕರ್ನಾಟಕದ ಇಬ್ಬರಿಗೆ ಗೌರವ

ಕರ್ನಾಟಕದ ಇಬ್ಬರಿಗೆ ಗೌರವ

ಈಚೆಗೆ ಮೈಸೂರಿನ ಉಮಾ ಮಧುಸೂದನ್ ಅವರಿಗೆ ಈ ರೀತಿ ವಿಶೇಷವಾಗಿ ಕೃತಜ್ಞತೆ ಸಲ್ಲಿಸಲಾಗಿತ್ತು. ಇದೀಗ ಕೊಡಗಿನ ಪ್ರೀತಿ ಅವರಿಗೂ ಇದೇ ರೀತಿ ಗೌರವ ಸಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೂ ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸಿ ಗೌರವ ಪಡೆದಿರುವ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಒಟ್ಟಾರೆ ಕರ್ನಾಟಕದ ಇಬ್ಬರು ವೈದ್ಯರಿಗೆ ಅಮೆರಿಕದಿಂದ ವಿಶೇಷ ಗೌರವ ಸಲ್ಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+