ದೇವರ ದರ್ಶನ ಸಮಯ ಬದಲಾಯಿಸಿದ ಕೊಡಗಿನ ಪ್ರಸಿದ್ಧ ದೇಗುಲಗಳು
ಕೊಡಗು, ಜೂನ್ 27: ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಕೊಡಗಿನ ಮುಜರಾಯಿ ಇಲಾಖೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಮತ್ತೆ ನಿರ್ಬಂಧ ಹೇರಲು ನಿರ್ಧರಿಸಿದೆ.
ಮಡಿಕೇರಿಯ ಪ್ರಸಿದ್ಧ ದೇವಾಲಯಗಳಾದ ಓಂಕಾರೇಶ್ವರ ದೇವಾಲಯ, ಭಾಗಮಂಡಲದ ಭಗಂಡೇಶ್ವರ ದೇವಾಲಯ, ತಲಕಾವೇರಿ ಸೇರಿದಂತೆ ಪ್ರಮುಖ ದೇವಾಲಯಗಳ ಸಮಯ ಬದಲಾವಣೆ ಮಾಡಿವೆ. ಇದುವರೆಗೆ ಬೆಳಿಗ್ಗೆ 5 ರಿಂದ 12 ಗಂಟೆವರೆಗೆ, ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ಭಕ್ತರಿಗೆ ದೇವಾಲಯಗಳಿಗೆ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು.

ಆದರೆ, ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಏರುತ್ತಿರುವುದರಿಂದ ದೇವಾಲಯದ ಸಮಯವನ್ನು ಬದಲಾಯಿಸಿ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಮಾತ್ರ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಸಂಜೆ 6 ರಿಂದ 8 ಗಂಟೆಯವರೆಗೆ ಭಕ್ತರು ದೇವರ ದರ್ಶನ ಪಡೆಯಬಹುದಾಗಿದೆ. ಕೊಡಗಿನಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳ ಆಡಳಿತ ಮಂಡಳಿಗಳು ಸಮಯ ಬದಲಾವಣೆ ನಿರ್ಧಾರ ಕೈಗೊಂಡಿವೆ.












Click it and Unblock the Notifications