ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ಅಸಲಿ ರಹಸ್ಯ ಏನು?
Recommended Video
ಬೆಂಗಳೂರು, ಜನವರಿ 16: ''ಕಿರಿಕ್ ಪಾರ್ಟಿ" ಮೂಲಕ ಚಿತ್ರರಂಗ ಪ್ರವೇಶಿಸಿದ ಯುವ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಗುರುವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಟಾಲಿವುಡ್ ನಲ್ಲಿ ಸದ್ಯ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡು ಬಹುಬೇಡಿಕೆ ನಟಿ ಎನಿಸಿಕೊಂಡಿರುವ ರಶ್ಮಿಕಾ ಅವರ ಮನೆ ಮೇಲೆ ದಾಳಿ ನಡೆಸಲು ಅಸಲಿ ಕಾರಣವೇನು? ಇಲ್ಲಿದೆ ಉತ್ತರ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ಅವರ ನಿವಾಸದ ಮೇಲೆ ಬೆಳಗ್ಗೆ 7.30ರಿಂದ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ರಶ್ಮಿಕಾ ಅವರ ಮನೆಯವರಿಗೆ ಸೇರಿರುವ ಸೆರೆನಿಟಿ ಪಾರ್ಟಿ ಪಾಲ್ ಸೇರಿದಂತೆ ಆಸ್ತಿ ಪಾಸ್ತಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ರಶ್ಮಿಕಾ ಅವರ ಮನೆ ಮೇಲೆ ದಾಳಿಗೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ದಾಖಲೆಗೂ ರಶ್ಮಿಕಾ ಗಳಿಕೆಗೂ ತಾಳೆಯಾಗದಿರುವುದೇ ಮುಖ್ಯ ಕಾರಣ ಎನ್ನಲಾಗಿದೆ. ಆದರೆ, ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ರಶ್ಮಿಕಾ ಅವರ ಮ್ಯಾನೇಜರ್ ಕಿರಣ್, ಆದಾಯ ತೆರಿಗೆ ಸರಿಯಾದ ಸಮಯಕ್ಕೆ ಪಾವತಿಸುತ್ತಿದ್ದೇವೆ. ಯಾವುದೇ ಆಂಕಿ ಅಂಶ ಮರೆಮಾಚಿಲ್ಲ ಎಂದಿದ್ದಾರೆ.

ರಶ್ಮಿಕಾಗೆ ಸಮನ್ಸ್
ನಟಿ ರಶ್ಮಿಕಾ ಮಂದಣ್ಣ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ಸಮನ್ಸ್ ನೀಡಲಾಗಿದೆ. ರಶ್ಮಿಕಾ ತಂದೆ ಬಿ.ಇಎಲ್ ಉದ್ಯೋಗಿಯಾಗಿದ್ದು, ಸ್ಥಿತಿವಂತರಾಗಿದ್ದು, ವಿರಾಜಪೇಟೆಯಲ್ಲಿ ಪಾರ್ಟಿ ಹಾಲ್ ಹೊಂದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ. ಆದರೆ, ಸರಿಲೇನು ನಿಕ್ಕೆವರು ಚಿತ್ರಕ್ಕಾಗಿ ಹಿರಿಯ ನಟಿ ವಿಜಯಶಾಂತಿಗೆ 1.25 ಕೋಟಿ ರು ನೀಡಲಾಗಿತ್ತು ಎಂಬ ಸುದ್ದಿಯೂ ಹಬ್ಬಿತ್ತು. ರಶ್ಮಿಕಾ ಕೂಡಾ ಸಂದರ್ಶನವೊಂದರಲ್ಲಿ ನಾನಿನ್ನು ಚಿತ್ರರಂಗದಲ್ಲಿ ಬಾಲ್ಯಾವಸ್ಥೆಯಲ್ಲಿದ್ದೇನೆ, ಅತಿ ಹೆಚ್ಚು ಸಂಭಾವನೆ ಪಡೆಯುತ್ತೇನೆ ಎಂದು ಹೇಳಿದರೆ ಒಪ್ಪಲು ಹೇಗೆ ಸಾಧ್ಯ ಎಂದಿದ್ದರು.

ತೆಲುಗು ಚಿತ್ರರಂಗ ಪ್ರವೇಶ
2016ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಕನ್ನಡದಲ್ಲಿ ಕಿರಿಕ್ ಪಾರ್ಟಿ, ಅಂಜನಿ ಪುತ್ರ, ಚಮಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ ಗೀತ ಗೋವಿಂದಂ ಹಿಟ್ ಆಗುತ್ತಿದ್ದಂತೆ ದೇವದಾಸ್, ಡಿಯರ್ ಕಾಮ್ರೇಡ್, ಭೀಷ್ಮ ಚಿತ್ರಗಳು ಹುಡುಕಿಕೊಂಡು ಬಂದಿದ್ದು ಸುಳ್ಳಲ್ಲ, ಸ್ಟಾರ್ ನಟರ ಮೊದಲ ಆಯ್ಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

1 ಕೋಟಿ ರು ಸಂಭಾವನೆ
ಮಹೇಶ್ ಬಾಬು ಅಭಿನಯದ ಇತ್ತೀಚೆಗೆ ತೆರೆ ಕಂಡ ಸರಿಲೇನು ನಿಕ್ಕೆವರು ಚಿತ್ರದ ನಾಯಕಿ ನಟಿಸಲು ರಶ್ಮಿಕಾ ಅವರು 1 ಕೋಟಿ ರು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. 23 ವರ್ಷ ವಯಸ್ಸಿನ ರಶ್ಮಿಕಾ ಅವರು ಚಿತ್ರಕ್ಕೆ ಬಂದ ಮೂರು ವರ್ಷಗಳಲ್ಲೇ ಕೋಟ್ಯಂತರ ಮೊತ್ತ ಗಳಿಸಿದ್ದು, ಇನ್ನೂ ಮುರ್ನಾಲ್ಕು ಚಿತ್ರಗಳಿಗೆ ಅಡ್ವಾನ್ಸ್ ಪಡೆದುಕೊಂಡಿದ್ದಾರೆ. ಅಡ್ವಾನ್ಸ್ ಮೊತ್ತವೇ ಕೋಟಿಗಟ್ಟಲೇ ಸಿಕ್ಕಿದೆ. ಈ ಎಲ್ಲಾ ಅಂಕಿ ಅಂಶಗಳನ್ನು ಟಾಲಿವುಡ್ ಬಾಕ್ಸಾಫೀಸ್ ವರದಿ ಮಾಡುವ ಸಂಸ್ಥೆಗಳಿಂದ ಪಡೆದುಕೊಳ್ಳಲಾಗಿದೆ. ಹೀಗಾಗಿ, ಇದು ಪೂರ್ವನಿಯೋಜಿತ ದಾಳಿಯಾಗಿದೆ.

2 ಐಷಾರಾಮಿ ಕಾರು ಖರೀದಿಸಿದ್ದು ನಿಜ
ರಶ್ಮಿಕಾ ಮಂದಣ್ಣ ಸಂಭಾವನೆ ಬಗ್ಗೆ ತಪ್ಪು ಮಾಹಿತಿ ಇರಬಹುದು, ಜಾಹೀರಾತು ಏಜೆನ್ಸಿಗಳ ಜೊತೆಗೆ ಷೇರು ವ್ಯವಹಾರವಿದೆ, ಸಿನಿಮಾ ನಿರ್ಮಾಣದ ಬಗ್ಗೆ ಕೂಡಾ ಆಸಕ್ತ ಹೊಂದಿದ್ದರು. ಇತ್ತೀಚೆಗೆ ಕೋಟ್ಯಂತರ ಬೆಲೆ ಬಾಳುವ ಎರಡು ಕಾರು ಖರೀದಿಸಿದ್ದಾರೆ ನಿಜ, ಆದರೆ, ಯಾವುದನ್ನೂ ಮರೆಮಾಚಲು ಸಾಧ್ಯವಿಲ್ಲ, ಸದ್ಯ ತಮಿಳು ಚಿತ್ರ ಸುಲ್ತಾನ್ ಚಿತ್ರೀಕರಣದಲ್ಲಿ ತೊಡಗಿರುವ ರಶ್ಮಿಕಾ ಹಾಗೂ ಅವರ ತಾಯಿ ಅವರು ಚೆನ್ನೈನಲ್ಲಿದ್ದಾರೆ ಎಂದು ಮ್ಯಾನೇಜರ್ ಕಿರಣ್ ಹೇಳಿದ್ದಾರೆ.
-
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications