Ration Card: 102 ಕುಟುಂಬಗಳಿಗೆ ಪಡಿತರ ಚೀಟಿ ವಿತರಣೆ; ಮತ್ತೊಂದು ಗುಡ್ ನ್ಯೂಸ್
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಯೂ ಒಂದಾಗಿದೆ. ಇದು ಬರೀ ರೇಷನ್ ಪಡೆಯಲು ಅಷ್ಟೇ ಅಲ್ಲದೆ, ಯಾವುದಾರೂ ಸರ್ಕಾರಿ ಯೋಜನೆಗಳಿಗೆ ಅರ್ಜಿ ಹಾಕಬೇಕೆಂದರೆ ಬೇಕೇ ಬೇಕಾಗುತ್ತದೆ. ಇನ್ನೂ ರಾಜ್ಯದಲ್ಲಿ ರೇಷನ್ ಕಾರ್ಡ್ ಪಡೆಯದ ಅದೆಷ್ಟೋ ಬಡ ಕುಟುಂಬಗಳಿವೆ ಎನ್ನುವ ಮಾಹಿತಿಯಿದೆ. ಈ ಪೈಕಿ ಇದೀಗ ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನಲ್ಲಿರುವ ಹಾಡಿಗಳಿಗೆ ಇದನ್ನು ವಿತರಣೆ ಮಾಡಲಾಗಿದೆ.
ಸೋಮವಾರಪೇಟೆ ತಾಲ್ಲೂಕು ಕಚೇರಿಯ ಪಡಿತರ ಚೀಟಿ ಪಡೆಯದೇ ಇರುವ ಕುಟುಂಬಗಳಿಗೆ ಪಡಿತರ ಚೀಟಿಯನ್ನು ವಿತರಣೆ ಮಾಡಲಾಯಿತು. ಮಾಲಂಬಿಯ ಆಶ್ರಯ ಶಾಲೆಯಲ್ಲಿ ಪಡಿತರ ಚೀಟಿ ವಿತರಣೆ ಮಾಡಿ ಆಹಾರ ಇಲಾಖೆಯ ಆಹಾರ ನಿರೀಕ್ಷಕಿ ಯಶಸ್ವಿನಿ ಮಾತನಾಡಿ, ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ ಸಂಗಯ್ಯನಪುರ, ಬಾಣಾವಾರ, ಮಾಲಂಬಿ, ಯಲಕನೂರು, ಆಡಿನಾಡೂರು ಹಾಡಿಗಳಲ್ಲಿ ಪಡಿಶಿಷ್ಟ ಪಂಗಡದ 102 ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಕಾರ್ಯಕ್ರಮ ಮುಂದುವರೆಯುವುದಾಗಿಯೂ ತಿಳಿಸಿದರು.

ಈಗಾಗಲೇ ನಕಲಿ ದಾಖಲೆ ನೀಡಿ ಪಡೆದಂತದ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ ಅಂತಹವರನ್ನು ಎಪಿಎಲ್‌ಗೆ ವರ್ಗಾವಣೆ ಮಾಡುತ್ತಾ ಬಂದಿದೆ. ಇನ್ನೂ ಕೂಡ ಈ ಕಾರ್ಯ ಪ್ರಗತಿಯಲ್ಲಿದ್ದು, ಈ ಮೂಲಕ ಅನರ್ಹರಿಂದ ಬಿಪಿಎಲ್ ಕಾರ್ಡ್‌ಗಳನ್ನು ವಾಪಸ್ ಪಡೆದು ಬಡವರಿಗೆ ಅವುಗಳ ಸೌಲಭ್ಯ ಕಲ್ಪಿಸಲು ಮುಂದಾಗಿದೆ.
ಮತ್ತೊಂದೆಡೆ ಅರ್ಹರ ಬಳಯಿದ್ದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದ್ದ ಸರ್ಕಾರವು ಮತ್ತೆ ಇದೀಗ ಅವರಿಗೆ ಹಿಂತಿರುಗಿಸುವುದಾಗಿಯೂ ಹೇಳಿದೆ. ಈಗಾಗಲೇ ಈ ಕಾರ್ಯವೂ ಕೂಡ ನಡೆಯುತ್ತಿದೆ ಎನ್ನುವ ಮಾಹಿಯತಿ ಇದೆ. ಬಿಎಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದ್ದಂತೆ ರಾಜ್ಯಾದ್ಯಂತ ಆಕ್ರೋಶಗಳು ಭುಗಿಲೆದ್ದಿದ್ದಿದ್ದವು. ಪ್ರತಿಭಟನೆ ವೇಳೆ ಅರ್ಹರಿಂದ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಈ ನಿರ್ಧಾರ ಸರಿಯಲ್ಲ ಎಂದು ಜನರು ಆಕ್ರೊಶ ಹೊರಹಾಕಿದ್ದರು, ಬಳಿಕ ಎಚ್ಚೆತ್ತ ಸರ್ಕಾರ ಅರ್ಹರಿಗೆ ಮತ್ತೆ ಬಿಎಪಿಎಲ್ ಕಾರ್ಡ್‌ಗಳನ್ನು ವಾಪಾಸ್ ನೀಡುವುದಾಗಿ ತಿಳಿಸಿತ್ತು.
ಡಿಜಿಟಲ್ ರೇಷನ್ ಕಾರ್ಡ್: ದೇಶದಲ್ಲಿ 20 ಕೋಟಿಗೂ ಹೆಚ್ಚು ಪಡಿತರ ಚೀಟಿಗಳು ಲಭ್ಯವಿವೆ. ಇವುಗಳ ಮೂಲಕ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡಲಾಗುತ್ತದೆ. ಪ್ರತಿ ರಾಜ್ಯದ ನಿರ್ಗತಿಕರು ಈ ಸೌಲಭ್ಯದ ಪ್ರಯೋಜನ ಪಡೆಯುತ್ತಾರೆ. ಆದರೆ ಈಗ ನಿಯಮಗಳನ್ನು ಬದಲಾಯಿಸಲಾಗಿದೆ. ಹೊಸ ವರ್ಷದಿಂದ ಪಡಿತರ ಚೀಟಿದಾರರ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಪಡಿತರ ಚೀಟಿದಾರರಿಗೆ ಪಡಿತರ ಪಡೆಯಲು ಪಡಿತರ ಚೀಟಿ ಅಗತ್ಯವಿಲ್ಲ. ಇದಕ್ಕಾಗಿ ಮೇರಾ ರೇಷನ್ 2.0 ಆಪ್ ಬಳಸಬಹುದಾಗಿದೆ ಎಂದು ತಿಳಿಸಿದೆ.
ಈಗ ನೀವು ಪಡಿತರ ಅಂಗಡಿಗೆ ಹೋಗಿ ನಿಮ್ಮ ಪಡಿತರ ಚೀಟಿ ತೋರಿಸುವ ಅಗತ್ಯವಿಲ್ಲ. ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಮಾತ್ರ ನೀವು ಪಡಿತರ ಚೀಟಿಯನ್ನು ಪಡೆಯಲು ಸಾಧ್ಯ ಆಗುತ್ತದೆ. ನೀವು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಡಿಜಿಟಲ್ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ.












Click it and Unblock the Notifications