ಮಡಿಕೇರಿ: ಅನ್ಯಕೋಮಿನ ಯುವತಿ ಜೊತೆ ಲಾಡ್ಜ್ ನಲ್ಲಿ ತಂಗಿದ್ದವರ ಬಂಧನ

ಮಡಿಕೇರಿ, ನವೆಂಬರ್ 22: ಲಾಡ್ಜ್ ನಲ್ಲಿ ಯುವತಿಯೊಂದಿಗೆ ತಂಗಿದ್ದ ಇಬ್ಬರು ಯುವಕರನ್ನು ಭಾಗಮಂಡಲ ಪೊಲೀಸರು ವಶಕ್ಕೆ ಪಡೆದು ಲಾಡ್ಜ್ ಮಾಲೀಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಭಾಗಮಂಡಲದಲ್ಲಿ ನಡೆದಿದೆ.

ಹುಣಸೂರು ನಿವಾಸಿಗಳಾದ ಮಹಮ್ಮದ್ ಜಾಹಿದ್, ರಾಜಿಕ್ ಎಂಬಿಬ್ಬರು ಯುವತಿಯೊಂದಿಗೆ ಲಾಡ್ಜ್ ನಲ್ಲಿ ತಂಗಿದ್ದರು. ಈ ವಿಷಯ ತಿಳಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಭಾಗಮಂಡಲ ಪೊಲೀಸರು ಲಾಡ್ಜ್ ಗೆ ತೆರಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Police have arrested two men who were staying in a lodge with a girl in Madikeri

ಈ ವೇಳೆ ಯುವತಿ ಅನ್ಯಕೋಮಿನವಳಾಗಿದ್ದು ಬೆಂಗಳೂರಿನಲ್ಲಿ ಮೊಬೈಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರು ಯುವಕರ ಪೈಕಿ ಒಬ್ಬಾತ ಆಕೆಯೊಂದಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಸಹದ್ಯೋಗಿಯಾಗಿದ್ದ. ಆತ ಆಕೆಯನ್ನು ಭಾಗಮಂಡಲಕ್ಕೆ ಕರೆತಂದಿದ್ದು, ಹುಣಸೂರಿನಿಂದ ಗೆಳೆಯನು ಬಂದಿದ್ದಾನೆ. ಹೀಗಾಗಿ ಮೂವರು ಭಾಗಮಂಡಲದಲ್ಲಿರುವ ಲಾಡ್ಜ್ ನಲ್ಲಿ ರೂಂ ಪಡೆದು ತಂಗಿದ್ದರು.

ಈ ನಡುವೆ ಅನ್ಯಕೋಮಿನ ಯುವತಿಯೊಬ್ಬಳು ಇಬ್ಬರು ಹುಡುಗರೊಂದಿಗೆ ಒಂದೇ ಕೊಠಡಿಯಲ್ಲಿರುವುದು ಮತ್ತು ಅವರ ನಡವಳಿಕೆ ಸ್ಥಳೀಯರಿಗೆ ಸಂಶಯ ಹುಟ್ಟಿಸಿದೆ. ಹೀಗಾಗಿ ಸಂಶಯಗೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ರಾತ್ರಿ ವೇಳೆ ಲಾಡ್ಜ್ ಗೆ ಬಂದ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಯುವಕರಿಬ್ಬರು ಸೇರಿದಂತೆ ರೂಂ ನೀಡಿದ ಮಾಲೀಕ ಹಿತಕರ ಎಂಬಾತನ ಮೇಲೆಯೂ ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+