ಮುಂಗಾರಿನ ಸಂಭ್ರಮ: ವಾಡಿಕೆ ಮಳೆಯ ನಿರೀಕ್ಷೆಯಲ್ಲಿ ಕೊಡಗಿನ ರೈತರು

ಮಡಿಕೇರಿ, ಜೂನ್ 09: ಕೊಡಗಿನಲ್ಲಿ ಈ ಬಾರಿ ಸಕಾಲದಲ್ಲಿ ಮುಂಗಾರು ಆರಂಭಗೊಂಡಿದೆ. ಸಾಮಾನ್ಯವಾಗಿ ನೈರುತ್ಯ ಭಾಗಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಮಾಡಿ, ಜಿಲ್ಲೆಯಲ್ಲಿ ಜೂನ್ ತಿಂಗಳ ಮೂರನೇ ಅಥವಾ ಕೊನೆ ವಾರದಲ್ಲಿ ಚುರುಕು ಪಡೆದುಕೊಳ್ಳುತ್ತಿದ್ದ ಮುಂಗಾರು, ಈ ಬಾರಿ ಸಕಾಲದಲ್ಲಿ ಆರಂಭವಾಗಿರುವುದು ರೈತರಲ್ಲಿ ಸಂತಸ ಹೆಚ್ಚಿಸಿದೆ.

ಕೊಡಗಿನಲ್ಲಿ ಮಳೆಯಾಗುತ್ತಿದ್ದಂತೆಯೇ ಅತ್ತ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿರುವುದು ರೈತರಲ್ಲಿ ಸಂತಸ ತಂದಿದೆ. ಈ ಸಮಯದಲ್ಲಿ ಜಿಲ್ಲೆಯಲ್ಲಿ ಮಳೆ ಬಾರದೆ ಕೆಆರ್‍ಎಸ್‍ಗೆ ನೀರು ಹರಿಯದೆ ತಳ ಸೇರುತ್ತಿದ್ದ ಜಲಾಶಯದಲ್ಲಿ ಕಳೆದೊಂದು ತಿಂಗಳ ಅವಧಿಯಲ್ಲಿ ಸುಮಾರು ನಾಲ್ಕು ಅಡಿಯಷ್ಟು ಹೆಚ್ಚಳವಾಗಿರುವುದು ಹರ್ಷ ಮೂಡಿಸಿದೆ.

ಇನ್ನು ಕೊಡಗಿನಲ್ಲಿ ಮೂರ್ನಾಲ್ಕು ದಶಕಗಳ ಮಳೆಗಾಲವನ್ನು ಅವಲೋಕನ ಮಾಡಿದರೆ 2007 ಮತ್ತು 2013ರಲ್ಲಿ ಮುಂಗಾರು ಮಳೆ ಆಶಾದಾಯಕವಾಗಿತ್ತು. 2013ರ ಜೂನ್ ಅಂತ್ಯ ಹಾಗೂ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ ಕಣಿವೆಯ ಜಲಾಶಯಗಳು ಭರ್ತಿಯಾಗಿದ್ದವು.

Monsoon 2018: Kodagu farmers expecting sufficient rain this year

ಈ ಬಾರಿ ಜೂನ್ ಮೊದಲ ವಾರದ ಮಳೆಯನ್ನು ಗಮನಿಸಿದರೆ ಆ ದಿನಗಳು ಮತ್ತೆ ಬರಬಹುದೇನೋ ಎಂಬಂತೆ ಗೋಚರಿಸುತ್ತಿದೆ. ಈಗ ಮುಂಗಾರು ಚುರುಕು ಪಡೆದಿರುವುದರಿಂದ ನದಿ, ತೊರೆ, ಹಳ್ಳಕೊಳ್ಳ, ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದು ಕಂಡು ಬರುತ್ತಿದೆ.

ಈ ಬಾರಿ ವಾಡಿಕೆಯಂತೆ ಮಾರ್ಚ್ ಏಪ್ರಿಲ್, ಮೇ ತಿಂಗಳಲ್ಲಿ ಮಳೆಯಾದ್ದರಿಂದ ಕುಡಿಯುವ ನೀರಿಗೆ ಅಷ್ಟಾಗಿ ತೊಂದರೆ ಬರಲಿಲ್ಲ. ಸದ್ಯ ಸಕಾಲದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ.

Monsoon 2018: Kodagu farmers expecting sufficient rain this year

ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆಯ ಪ್ರಮಾಣವು 245.50 ಮಿ.ಮೀ.ಗಳಾಗಿದ್ದು, 2018 ರ ಜನವರಿಯಿಂದ ಇಲ್ಲಿಯ ವರೆಗೆ 423.68 ಮಿ.ಮೀ. ಮಳೆಯಾಗಿದೆ, 2017ರ ಇದೇ ಅವಧಿಯಲ್ಲಿ 305.04 ಮಿ.ಮೀ, 2016 ರ ಇದೇ ಅವಧಿಯಲ್ಲಿ 158.20 ಮಿ.ಮೀ.ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ.

ತಾಲೂಕುವಾರು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 253.60ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಇಲ್ಲಿಯವರೆಗೆ 614.74 ಮಿ.ಮೀ.ಮಳೆಯಾಗಿದೆ. 2017ರ ಜನವರಿಯಿಂದ ಇಲ್ಲಿಯವರೆಗೆ 344.29 ಮಿ.ಮೀ.ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 234.75 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 211.30 ಮಿ.ಮೀ. ಗಳಾಗಿದ್ದು, 2018 ರ ಜನವರಿಯಿಂದ ಇಲ್ಲಿಯವರೆಗೆ 343.70 ಮಿ.ಮೀ ರಷ್ಟು ಮಳೆಯಾಗಿದೆ. 2017 ರ ಇದೇ ಅವಧಿಯಲ್ಲಿ 266.25 ಮಿ.ಮೀ.ಮಳೆಯಾಗಿತ್ತು. ಹಾಗೆಯೇ 2016 ರ ಇದೇ ಅವಧಿಯಲ್ಲಿ 122.33 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 271.60 ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಇಲ್ಲಿಯವರೆಗೆ 312.60 ಮಿ.ಮೀ.ಮಳೆಯಾಗಿದ್ದು, 2017ರ ಇದೇ ಅವಧಿಯಲ್ಲಿ 304.56 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 117.55 ಮಿ.ಮೀ. ಮಳೆಯಾಗಿತ್ತು.

ಒಟ್ಟಾರೆ ಜಿಲ್ಲೆಯಲ್ಲಿ ಮೇ ಅಂತ್ಯದ ವರೆಗೆ ಮಳೆಯ ಪ್ರಮಾಣ ಸರಾಸರಿ ವಾಡಿಕೆಗಿಂತ 170 ಮಿ.ಮೀ.ಗೂ ಹೆಚ್ಚು ಮಳೆಯಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಹವಾಮಾನ ವಿಜ್ಞಾನಿಗಳ ಪ್ರಕಾರ ಈಗಾಗಲೇ ನೈರುತ್ಯ ಭಾಗದಲ್ಲಿ ಮಳೆ ಮುಂದುವರೆಯುವ ಲಕ್ಷಣ ಇರುವುದರಿಂದ, ಇನ್ನೂ ಎರಡು ಮೂರು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದು ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ಭರ್ತಿಯಾದರೆ ರೈತರು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+