ಹೃದಯಾಘಾತದಿಂದ ಮಡಿಕೇರಿ ಛಾಯಾಗ್ರಾಹಕ ಜೀವನ್ ಪಾಲಕ್ಕಾಡ್ ನಿಧನ

ಮಡಿಕೇರಿ, ಡಿಸೆಂಬರ್ 21: ಹೃದಯಾಘಾತದಿಂದ ಖಾಸಗಿ ಸುದ್ದಿ ಸಂಸ್ಥೆಯ ಮಡಿಕೇರಿ ಛಾಯಾಗ್ರಾಹಕ ಜೀವನ್ ಪಾಲಕ್ಕಾಡ್ (27) ಇಂದು ನಿಧನರಾಗಿದ್ದಾರೆ.

ಇಂದು ಬೆಳಗ್ಗೆ ಜಿಮ್ ನಲ್ಲಿ ಜೀವನ್ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಜೀವನ್ ಮಡಿಕೇರಿಯ ಪ್ರಜಾ ಟಿವಿ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

Madikeri Photo Journalist Jeevan Palakkad Died By Heart Attack

ವೀಡಿಯೋಗ್ರಫಿ ಹಾಗೂ ಫೋಟೊಗ್ರಫಿಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಜೀವನ್ ಅವರಿಗೆ ಛಾಯಾಗ್ರಹಣದಲ್ಲಿ ಪ್ರಶಸ್ತಿಗಳೂ ದೊರೆತಿವೆ. ಜೀವನ್ ಪಾಲಕ್ಕಾಡ್ ಅವರ ಅಗಲಿಕೆಗೆ ಅವರ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+